ಕಾರ್ಮಿಕರ ಹಕ್ಕುಗಳ ರಕ್ಷಣೆಗಾಗಿ ವಿಧಾನಸೌಧ ಚಲೋ ಬೆಂಬಲಿಸಿ ಪ್ರತಿಭಟನಾ ಪ್ರದರ್ಶನ

September 24, 2020
9:52 PM
ರೈತ ಕಾರ್ಮಿಕ ವಿರೋಧಿ ಸುಗ್ರೀವಾಜ್ಞೆಗಳ ವಾಪಸಾತಿಗಾಗಿ,ಕಾರ್ಮಿಕರ ಹಕ್ಕುಗಳ ಸಂರಕ್ಷಣೆಗಾಗಿ, ಕೋವಿಡ್ ಸಂಕಷ್ಟದ ಪರಿಹಾರಕ್ಕಾಗಿ,15 ಅಂಶಗಳ ಬೇಡಿಕೆಗಳ ಈಡೇರಿಕೆಗಾಗಿ ರಾಜ್ಯದ ಕಾರ್ಮಿಕ ವರ್ಗ ಹಮ್ಮಿಕೊಂಡಿರುವ ವಿಧಾನಸೌಧ ಚಲೋ ಕಾರ್ಯಕ್ರಮವನ್ನು  ಬೆಂಬಲಿಸಿ, ಸಿಐಟಿಯು ನೇತೃತ್ವದಲ್ಲಿ ಮಂಗಳೂರಿನಲ್ಲಿ  ಮಿನಿ ವಿಧಾನಸೌಧದ ಎದುರು ಪ್ರತಿಭಟನಾ ಪ್ರದರ್ಶನವನ್ನು ನಡೆಸಲಾಯಿತು.
ಪ್ರತಿಭಟನೆಯನ್ನು ಉದ್ಘಾಟಿಸಿ ಮಾತನಾಡಿದಸಿಐಟಿಯು ದ.ಕ.ಜಿಲ್ಲಾಧ್ಯಕ್ಷರಾದ ಜೆ.ಬಾಲಕೃಷ್ಣ ಶೆಟ್ಟಿ , ಕೇಂದ್ರ ಹಾಗೂ ರಾಜ್ಯ ಸರಕಾರಗಳು ಕಾರ್ಮಿಕ ವರ್ಗದ ಮೇಲೆ ನಡೆಸುತ್ತಿರುವ ಧಾಳಿಗಳನ್ನು ವಿವರಿಸಿದರು.ಕೃಷಿ,ಸಾರ್ವಜನಿಕ ಕ್ಷೇತ್ರ ಮತ್ತು ಸೇವೆಗಳನ್ನು ಕಾರ್ಪೋರೇಟ್ ಕಂಪೆನಿಗಳ ಲಾಭಕೋರತನಕ್ಕೆ ಬದಲಾಯಿಸಲಾಗುತ್ತಿದೆ. ಆದೇಶ, ಸುಗ್ರೀವಾಜ್ಞೆಗಳ ಮೂಲಕ ಕಾರ್ಮಿಕ ಕಾನೂನುಗಳನ್ನು ರದ್ದುಪಡಿಸುವುದು,ಅಮಾನತುಗೊಳಿಸುವುದು ಹೆಚ್ಚುತ್ತಿದೆ. ಜನತೆಯ ಹಕ್ಕುಗಳನ್ನು, ಪ್ರತಿಭಟಿಸುವುದನ್ನು ಹತ್ತಿಕ್ಕಲಾಗುತ್ತಿದೆ.ಜನಪರ ಹೋರಾಟಗಾರರ ಮೇಲಿನ ಕೇಸುಗಳು ಹಾಗೂ ಕಿರುಕುಳ ಹೆಚ್ಚುತ್ತಿದೆ. ಒಟ್ಟಿನಲ್ಲಿ ದೇಶ ಸರ್ವಾಧಿಕಾರಿ ನಡೆಯತ್ತ, ಫ್ಯಾಸಿಸ್ಟ್ ಮನೋಭಾವದತ್ತ ಸಾಗುತ್ತಿರುವುದು ಅತ್ಯಂತ ಅಪಾಯಕಾರಿಯಾಗಿದ್ದು,ದೇಶವನ್ನು ಉಳಿಸಲು ಕಾರ್ಮಿಕ ವರ್ಗ ಒಂದಾಗಿ ಹೋರಾಡಬೇಕಾಗಿದೆ ಎಂದು ಹೇಳಿದರು
ಕರ್ನಾಟಕ ಪ್ರಾಂತ ರೈತ ಸಂಘದ ದ.ಕ.ಜಿಲ್ಲಾಧ್ಯಕ್ಷರಾದ ಕೃಷ್ಣಪ್ಪ ಸಾಲ್ಯಾನ್ ಮಾತನಾಡಿದರು. ಪ್ರಾಸ್ತಾವಿಕವಾಗಿ ಸಿಐಟಿಯು  ದಕ.ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್ ಮಾತನಾಡಿದರು.
ಪ್ರತಿಭಟನೆಯಲ್ಲಿ ಸಿಐಟಿಯು ಜಿಲ್ಲಾ ಮುಖಂಡರಾದ ಯು.ಬಿ.ಲೋಕಯ್ಯ,ಪದ್ಮಾವತಿ ಶೆಟ್ಟಿ, ಗಂಗಯ್ಯ ಅಮೀನ್, ಜಯಂತಿ ಶೆಟ್ಟಿ, ಬಾಬು ದೇವಾಡಿಗ,ಭಾರತಿ ಬೋಳಾರ, ಜಯಲಕ್ಷ್ಮಿ,ರಾಘವ,ಕಟ್ಟಡ ಕಾರ್ಮಿಕರ ನಾಯಕರಾದ ದಿನೇಶ್ ಶೆಟ್ಟಿ, ಉಮೇಶ್ ಶಕ್ತಿನಗರ,ದಯಾನಂದ ಕೊಪ್ಪಲಕಾಡು,ಅಶೋಕ್ ಶ್ರೀಯಾನ್,ನಾಗೇಶ್ ಕೋಟ್ಯಾನ್,ಸುರೇಶ್ ಬಜಾಲ್,ಸಾಮಾಜಿಕ ಹೋರಾಟಗಾರರಾದ ಜೆರಾಲ್ಡ್ ಟವರ್,ದಲಿತ ಹಕ್ಕುಗಳ ಸಮಿತಿಯ ತಿಮ್ಮಯ್ಯ ಕೊಂಚಾಡಿ,ಹಮಾಲಿ ಸಂಘಟನೆಯ ಅಹಮ್ಮದ್ ಬಾವ,ಬೀದಿಬದಿ ವ್ಯಾಪಾರಸ್ಥರ ಸಂಘದ ಮುಖಂಡರಾದ ಮಹಮ್ಮದ್ ಮುಸ್ತಾಪಾ, ಶ್ರೀಧರ್,ಅಣ್ಣಯ್ಯ,ವಿಜಯ, ಗುಡ್ಡಪ್ಪ ಮುಂತಾದವರು ಭಾಗವಹಿಸಿದ್ದರು.

Advertisement
Advertisement
Advertisement

Advertisement

Advertisement

Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಅಂಬಿಕಾ ವಸತಿನಿಲಯಕ್ಕೆ ಎಫ್‍ಎಫ್‍ಎಸ್‍ಎಐ ಪ್ರಮಾಣಪತ್ರ
February 22, 2024
9:01 PM
by: ದ ರೂರಲ್ ಮಿರರ್.ಕಾಂ
ದೆಹಲಿ ವಾಯುಮಾಲಿನ್ಯದ ರೀತಿ ಬಂದರು ನಗರಿ ಮಂಗಳೂರು ಆಗಲಿದೆಯಾ..? | ಅರಣ್ಯ ನಾಶದಿಂದ ಬಂದರು ನಗರಿಯಲ್ಲಿ ಕುಗ್ಗುತ್ತಿದೆ ಆಮ್ಲಜನಕದ ಪ್ರಮಾಣ..! |
November 22, 2023
1:07 PM
by: The Rural Mirror ಸುದ್ದಿಜಾಲ
ಮಂಗಳೂರು ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿ ರಾತ್ರಿ 10 ರವರೆಗೆ ಮಾತ್ರ ಪಟಾಕಿ ಸಿಡಿಸಲು ಅವಕಾಶ
November 4, 2023
10:08 PM
by: ದ ರೂರಲ್ ಮಿರರ್.ಕಾಂ
#WeatherMirror| ಕೂಲ್‌ ಸಿಟಿ ಆಗುತ್ತಿದೆ ಹಾಟ್‌ ಸಿಟಿ…. ! | ಏರುತ್ತಿದೆ ಬೆಂಗಳೂರು ತಾಪಮಾನ | ಎಚ್ಚರಿಸುತ್ತಿದೆ ಹವಾಮಾನ |
August 16, 2023
3:58 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror

Join Our Group

ಕೃಷಿ ಮಸೂದೆ ರೈತ ವಿರೋಧಿಕೃಷಿ,ಸಾರ್ವಜನಿಕ ಕ್ಷೇತ್ರ ಮತ್ತು ಸೇವೆಗಳನ್ನು ಕಾರ್ಪೋರೇಟ್ ಕಂಪೆನಿಗಳ ಲಾಭಕೋರತನಕ್ಕೆ ಬದಲಾಯಿಸಲಾಗುತ್ತಿದೆ.