#AgriTourism | ಕರ್ನಾಟಕ ಕೃಷಿ ಪ್ರವಾಸೋದ್ಯಮ | ಕೃಷಿ ಪ್ರವಾಸೋದ್ಯಮದ ಅಗತ್ಯವೇನು…?

July 27, 2023
5:06 PM
ಕೃಷಿ, ಕೃಷಿ ಭೂಮಿ, ಹಳ್ಳಿಗಳಲ್ಲಿ ಕೃಷಿಕರನ್ನು ಉಳಿಸಲು ಕೃಷಿ ಜೊತೆಗೆ ಕೃಷಿಗೆ ಪೂರಕವಾದ ಚಟುವಟಿಕೆಗಳನ್ನು ಕೃಷಿಯೊಂದಿಗೆ ಬೆಸೆದು ಗ್ರಾಮೀಣ ಯುವಕರಿಗೆ, ಮಹಿಳೆಯರಿಗೆ, ಕೃಷಿಕರಿಗೆ ಉದ್ಯೋಗವಾಕಶವನ್ನು ಕಲ್ಪಿಸುವುದರ ಜೊತೆಗೆ ಹೆಚ್ಚುವರಿ ಆದಾಯ ಪಡೆಯಲು ಕೃಷಿ ಪ್ರವಾಸೋದ್ಯಮ ನೆರವಿಗೆ ಬರುತ್ತದೆ. ಈ ಬಗ್ಗೆ ಹೆಚ್ಚಿನ ಅರಿವು ಅಗತ್ಯವಿದೆ. ಕೃಷಿ ಪ್ರವಾಸೋದ್ಯಮದ ಬಗ್ಗೆ ಪ್ರಶಾಂತ್ ಜಯರಾಮ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ನಮ್ಮ ಕೃಷಿ,ಆಹಾರ,ಗ್ರಾಮೀಣ ಸಂಸ್ಕೃತಿ ಮತ್ತು ಕಲೆಯನ್ನು ಪರಿಚಯಿಸಲು ಪ್ರವಾಸಿಗರನ್ನು ಕೃಷಿ ಭೂಮಿಗೆ ಕರೆತರುವುದು ಮತ್ತು ಅವರಿಗೆ ಕೃಷಿ ಆಧಾರಿತ ಚಟುವಟಿಕೆಗಳನ್ನು ತೋರಿಸುವುದು ಮತ್ತು ಅದರಲ್ಲಿ ಭಾಗವಹಿಸಲು ಅವಕಾಶ ನೀಡುವುದು,ಕೃಷಿ ಉತ್ಪನ್ನಗಳನ್ನು ಗ್ರಾಹಕರಿಗೆ ನೇರ ಮಾರಾಟ ಮಾಡುವುದು,ಆತಿಥ್ಯ ಮತ್ತು ಮನೋರಂಜನೆ ಇವುಗಳನ್ನು ಬೆಸೆದು ರೂಪಿಸಲಾಗುವ ಯೋಜನೆಯನ್ನು ಕೃಷಿ ಪ್ರವಾಸೋದ್ಯಮ ಎಂದು ಕರೆಯಲಾಗುತ್ತದೆ.

Advertisement
Advertisement

ಕೃಷಿ ಪ್ರವಾಸೋದ್ಯಮದ ಅಗತ್ಯವೇನು? : ಕೃಷಿ ಕುಟುಂಬದ ಒಟ್ಟಾರೆ ಆದಾಯದಲ್ಲಿ ಶೇ 35% ಬೆಳೆ ಬೆಳೆಯುವುದರ ಮೂಲಕ ಮತ್ತು 15% ಪಶುಸಂಗೋಪನೆ ಮೂಲಕ, ಹೀಗೆ ಒಟ್ಟು ಶೇ 50% ಆದಾಯ ಕೃಷಿ ಮೂಲದಿಂದ ಮತ್ತು ಉಳಿದ ಶೇ 50% ಕೂಲಿ, ಪಿಂಚಣಿ ಮತ್ತು ಇತರೆ ಮೂಲಗಳ ಮೇಲೆ ಅವಲಂಭಿತವಾಗಿದೆ. ಈಗಾಗಲೇ ಗರಿಷ್ಠ ಮಟ್ಟದ ಉತ್ಪಾದನೆ ಮತ್ತು ಮುಕ್ತ ಮಾರುಕಟ್ಟೆ ನೀತಿಯಿಂದ ಕೃಷಿ ಉತ್ಪನ್ನಗಳ ಬೆಲೆಯಲ್ಲಿ ಸ್ಥಿರತೆ ಕಾಯ್ದುಕೊಳ್ಳಲಾಗುತ್ತಿಲ್ಲ ಮತ್ತು ಹವಾಮಾನ ವೈಪರೀತ್ಯದಿಂದ ಬೆಳೆ ನಷ್ಟವಾಗುತ್ತಿದೆ. ಬೆಲೆ ಮತ್ತು ಬೆಳೆ ನಷ್ಟ ಕೃಷಿಕರನ್ನು ಆರ್ಥಿಕವಾಗಿ ಸೋಲುವಂತೆ ಮಾಡಿದೆ.

ಹಳ್ಳಿಗಳಲ್ಲಿ ಕೃಷಿ ಆದಾಯ ಹೊರತುಪಡಿಸಿ ಇತರೆ ಆದಾಯ ಮೂಲಗಳಿಲ್ಲದೆ ಇರುವುದರಿಂದ ಹಳ್ಳಿಯ ನಿವಾಸಿಗಳು ಜೀವನ ನಿರ್ವಹಣೆಗೋಸ್ಕರ ಅನಿವಾರ್ಯವಾಗಿ ನಗರ ಪ್ರದೇಶಗಳಿಗೆ ವಲಸೆ ಹೋಗುತ್ತಿದ್ದಾರೆ. ಕೃಷಿ, ಕೃಷಿ ಭೂಮಿ, ಹಳ್ಳಿಗಳಲ್ಲಿ ಕೃಷಿಕರನ್ನು ಉಳಿಸಲು ಕೃಷಿ ಜೊತೆಗೆ ಕೃಷಿಗೆ ಪೂರಕವಾದ ಚಟುವಟಿಕೆಗಳನ್ನು ಕೃಷಿಯೊಂದಿಗೆ ಬೆಸೆದು ಗ್ರಾಮೀಣ ಯುವಕರಿಗೆ, ಮಹಿಳೆಯರಿಗೆ, ಕೃಷಿಕರಿಗೆ ಉದ್ಯೋಗವಾಕಾಶವನ್ನು ಕಲ್ಪಿಸುವುದರ ಜೊತೆಗೆ ಹೆಚ್ಚುವರಿ ಆದಾಯ ಪಡೆಯಲು ಕೃಷಿ ಪ್ರವಾಸೋದ್ಯಮ ನೆರವು ನೀಡುತ್ತದೆ.

ಕೃಷಿ ಮತ್ತು ಗ್ರಾಮೀಣ ಪ್ರದೇಶಗಳ ಸಬಲೀಕರಣದ ಪರಿಕಲ್ಪನೆಯ ಈ ಯೋಜನೆ ಕೃಷಿಕರಿಗೆ ಮತ್ತು ಗ್ರಾಮೀಣ ಜನರಿಗೆ ಉದ್ಯೋಗ ಮತ್ತು ಆದಾಯ ನೀಡುವುದರ ಜೊತಗೆ ಅವರ ಜೀವನ ಮಟ್ಟವನ್ನು ಸುಧಾರಿಸುತ್ತದೆ. ಗ್ರಾಮೀಣ ಯುವಕರು ಮತ್ತು ಮಹಿಳೆಯರಿಗೆ ಹಳ್ಳಿಗಳಲ್ಲಿ ಉದ್ಯೋಗಾವಕಾಶ ಸೃಷ್ಟಿಸಲು ಮತ್ತು ಕೃಷಿ ಆದಾಯದ ಜೊತೆಗೆ ಪರ್ಯಾಯ ಆದಾಯದ ಮೂಲಗಳನ್ನು ಸೃಷ್ಟಿಸುವ ಮೂಲಕ ಹಳ್ಳಿಗಳಿಂದ ಜನರು ನಗರಗಳಿಗೆ ವಲಸೆ ಹೋಗುವುದನ್ನು ತಪ್ಪಿಸುವುದರ ಜೊತೆಗೆ ಕೃಷಿ ಮತ್ತು ಗ್ರಾಮೀಣ ಪ್ರದೇಶಗಳನ್ನು ಉಳಿಸಬೇಕಿದೆ, ಕೃಷಿ ಕೆಲಸವನ್ನು ಗೌರವ ಮತ್ತು ಘನತೆಯ ವೃತ್ತಿಯನ್ನಾಗಿ ಮಾಡಬೇಕಿದೆ.

ಈ ಸಂಬಂಧ ಮಹಾರಾಷ್ಟ್ರ ಸರ್ಕಾರ ಕೃಷಿ ಪ್ರವಾಸೋದ್ಯಮ ನೀತಿ ಜಾರಿಗೆ ತಂದಿರುವ ಮಾದರಿಯಲ್ಲಿ ಕರ್ನಾಟಕದಲ್ಲಿ ಕೃಷಿ ಪ್ರವಾಸೋದ್ಯಮ ನೀತಿ ಜಾರಿ ಮಾಡಬೇಕಿದೆ. ಮಹಾರಾಷ್ಟ್ರ ರೈತರು ಯಶಸ್ವಿಯಾಗಿ ಕೃಷಿ ಪ್ರವಾಸೋದ್ಯಮ ಕೇಂದ್ರ ನೆಡೆಸುತ್ತಿದ್ದಾರೆ ಮತ್ತು ಆದಾಯ ಗಳಿಸುತ್ತಿದ್ದಾರೆ. ಕೃಷಿ ಪ್ರವಾಸೋದ್ಯಮ ಸಂಬಂಧ ಮಾಹಿತಿ ನೀಡಲು ಪುಸ್ತಕ ಹೊರತರಲಾಗುತ್ತಿದೆ ಮತ್ತು ಕೃಷಿ ಪ್ರವಾಸೋದ್ಯಮ ನೀತಿ ಜಾರಿ ಮಾಡಿಸಲು ಸರ್ಕಾರದ ಮಟ್ಟದಲ್ಲಿ ಪ್ರಯತ್ನಗಳನ್ನು ಮಾಡಲಾಗುತ್ತಿದೆ. ಈ ವಿಚಾರವಾಗಿ ತಿಳಿದವರು ಮತ್ತು ಆಸಕ್ತರು ತಮ್ಮ ಅಗತ್ಯ ಸಲಹೆ, ಸಹಕಾರ ನೀಡಲು ಕೆಳಗೆ ನೀಡಿರುವ ಮೊಬೈಲ್ ಸಂಖ್ಯೆಯನ್ನು ಸಂಪರ್ಕ ಮಾಡಬಹುದು.

ಪ್ರಶಾಂತ್ ಜಯರಾಮ್, ಮೊಬೈಲ್ :9342434530

Advertisement
Advertisement
Advertisement

Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು[email protected] ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಅಡಿಕೆ ನಿಷೇಧ ಇಲ್ಲ – ಈಗ ಅಡಿಕೆ ಬಳಕೆಯ ನಿಯಂತ್ರಣದತ್ತ ಫೋಕಸ್
January 30, 2026
10:42 PM
by: ಮಹೇಶ್ ಪುಚ್ಚಪ್ಪಾಡಿ
ಅಡಿಕೆ ಬಳಕೆಯ ನಿಯಂತ್ರಣಕ್ಕೆ ‘MPOWER’ ನೀತಿ ಅಗತ್ಯ : ವಿಶ್ವ ಆರೋಗ್ಯ ಸಂಸ್ಥೆ
January 30, 2026
6:18 PM
by: ವಿಶೇಷ ಪ್ರತಿನಿಧಿ
ಅರೆಕಾನಟ್ ಚಾಲೆಂಜ್ : ಅಡಿಕೆ ನಿಯಂತ್ರಣ ಕುರಿತು WHO ಉತ್ಸುಕತೆ – ಕ್ಲಿನಿಕಲ್ ಪರೀಕ್ಷೆಗಳ ಅಗತ್ಯಕ್ಕೆ ತಜ್ಞರ ಒತ್ತಾಯ
January 30, 2026
6:04 PM
by: ದ ರೂರಲ್ ಮಿರರ್.ಕಾಂ
AI, ಡ್ರೋನ್ ಮತ್ತು ಸ್ವಯಂಚಾಲಿತ ಯಂತ್ರಗಳು | ಕಾರ್ಮಿಕ ಕೊರತೆಯ ನಡುವೆ ಕೃಷಿಗೆ ರೋಬೋಟ್ ಪರಿಹಾರ
January 30, 2026
8:10 AM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror