ಹನುಮಂತನಿಗೆ ಉಪದ್ರ ಮಾಡಿದ್ದಕ್ಕೆ ಹೆಲಿಕಾಪ್ಟರ್​​ ಗ್ಲಾಸ್​ ಹೋಯ್ತು : ಮತ್ತೆ ತಂಟೆಗೆ ಬಂದ್ರೆ ಮಿಸ್ಟರ್​​ ಡಿಕೆಶಿ ನೀವೂ ಪತನವಾಗಲಿದ್ದೀರಿ- ಯತ್ನಾಳ್​

May 4, 2023
5:34 PM

ಹನುಮಂತನ ಸುದ್ದಿಗೆ ಬಂದಿದ್ದಕ್ಕೆ ಹೆಲಿಕಾಪ್ಟರ್​ ಗ್ಲಾಸ್ ಪುಡಿಪುಡಿಯಾಗಿದೆ, ಮುಂದೆ ತಂಟೆಗೆ ಬಂದರೆ ಡಿಕೆ ಶಿವಕುಮಾರ್ ಅವರೇ ನೀವೂ ಪತನವಾಗಲಿದ್ದೀರಿ ಎಂದು ಬಿಜೆಪಿ ಫೈರ್ ಬ್ರಾಂಡ್ ಬಸನಗೌಡ ಪಾಟೀಲ್ ಯತ್ನಾಳ್ ಕಿವಿಮಾತು ಹೇಳಿದ್ದಾರೆ. ಕೊಪ್ಪಳದ ಗಂಗಾವತಿಯಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು, ಡಿಕೆ ಶಿವಕುಮಾರ್ ಅವರು ಇನ್ನೊಂದು ಸಲ ಹುಟ್ಟಿ ಬಂದರೂ ಬಜರಂಗದಳವನ್ನು ಬ್ಯಾನ್ ಮಾಡಲು ಸಾಧ್ಯ ಇಲ್ಲ. ಬಜರಂಗದಳದವರು ಭಯೋತ್ಪಾದಕರಲ್ಲ, ದೇಶ ವಿರೋಧಿ ಚಟುವಟಿಕೆ ಮಾಡುವುದಿಲ್ಲ. ಬಜರಂಗದಳ ಎಂದರೆ ಗಂಗಾವತಿ ಎಂದು ಯತ್ನಾಳ್ ಹೇಳಿದಾಗ ಕಾರ್ಯಕರ್ತರ ಹರ್ಷೋದ್ಗಾರ ಮುಗಿಲು ಮುಟ್ಟಿತು. ಅಲ್ಲದೆ, ಭಾರತದ ರಾಮ ಮೋದಿ, ಹನುಮ ಯೋಗಿ, ಲಕ್ಷ್ಮಣ ಅಮಿತ್ ಶಾ. ಬಜರಂಗದಳ ನಿಷೇಧ ಮಾಡೋರನ್ನು ತಿಹಾರ ಜೈಲಿಗೆ ಕಳುಹಿಸೋಣ ಎಂದು ಯತ್ನಾಳ್ ಹೇಳಿದರು.

Advertisement
Advertisement
Advertisement

ಭಾಷಣದುದ್ದಕ್ಕೂ ಯತ್ನಾಳ್ ಅವರು ರಾಹುಲ್ ಗಾಂಧಿ, ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಅವರ ಪ್ರಚಾರದಲ್ಲಿನ ಹೇಳಿಕೆಗಳನ್ನು ಮುಂದಿಟ್ಟುಕೊಂಡು ಮಿಮಿಕ್ ಮಾಡುತ್ತಾ ಟಾಂಗ್ ಕೊಟ್ಟರು. ಕಾಂಗ್ರೆಸ್ ಸೋಲಿಸಲು ರಾಹುಲ್ ಗಾಂಧಿ ಮತ್ತು ಸಿದ್ದರಾಮಯ್ಯ ಇಬ್ಬರೇ ಸಾಕು. ರಾಹುಲ್ ಗಾಂಧಿ ಕಾಲಿಟ್ಟಲ್ಲಿ ಕಾಂಗ್ರೆಸ್ ಢಂ. ಇನ್ನು ಸಿದ್ದರಾಮಯ್ಯ ಅವರು ಪ್ರಚಾರಕ್ಕೆ ಹೋದಲ್ಲೆಲ್ಲಾ ಬಿಜೆಪಿ ಪರ ಪ್ರಚಾರ ನಡೆಸುತ್ತಾರೆ ಎಂದು ವ್ಯಂಗ್ಯವಾಡಿದರು.

Advertisement

ಸಿದ್ದರಾಮಯ್ಯ ಅವರ ಭಾಷಣವನ್ನು ಯತ್ನಾಳ್ ಅವರು ಮಿಮಿಕ್ ಮಾಡಿದರು. “10 ಕೆಜಿ ಅಕ್ಕಿ ರೂಪಾಯಿ, ಸಂತೋಷ ಆಯ್ತಾ?, ಎಲ್ಲಾ ವೋಟ್ ಹಾಕುತ್ತೀರಲ್ಲ?, ನಿಮ್ಮ ಮನೆಯವರನ್ನೆಲ್ಲಾ ವೋಟ್ ಮಾಡಿಸುತ್ತೀರಲ್ವಾ?, ಹಾಗಾದರೆ ಬಿಜೆಪಿಗೆ ವೋಟ್ ಹಾಕಿ” ಎಂದು ಪ್ರಚಾರದ ವೇಳೆ ಸಿದ್ದರಾಮಯ್ಯ ಹೇಳುತ್ತಾರೆ. ತನ್ನನ್ನು ಮುಖ್ಯಮಂತ್ರಿ ಮಾಡುವುದಿಲ್ಲ ಎಂದು ಸಿದ್ದರಾಮಯ್ಯ ಅವರಿಗೆ ಖಾತ್ರಿಯಾಗಿದೆ. ತಿಹಾರ್ ಜೈಲಿಗೆ ಹೋದವರನ್ನು (ಡಿಕೆ ಶಿವಕುಮಾರ್) ಸಿಎಂ ಮಾಡುತ್ತಾರೆ, ಯಾಕೆಂದರೆ ಸೋನಿಯಾ ಗಾಂಧಿಗೆ ದಿನಾಲು ಪೇಮೆಂಟ್ ಕೊಡಬೇಕಲ್ಲ. ಹೀಗಾಗಿ ಸಿದ್ದರಾಮಯ್ಯ ಅವರು ನಿರ್ಣಯ ಮಾಡಿ ಬಿಜೆಪಿ ಪರ ಪ್ರಚಾರ ನಡೆಸುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.

ಗ್ಯಾರಂಟಿ ಗ್ಯಾರಂಟಿ ಏನ್ ಗ್ಯಾರಂಟಿ ಎಂದು ವ್ಯಂಗ್ಯವಾಡಿದ ಯತ್ನಾಳ್

ಕಾಂಗ್ರೆಸ್​ನ ಗ್ಯಾರಂಟಿ ಘೋಷಣೆಗಳ ಬಗ್ಗೆ ವ್ಯಂಗ್ಯವಾಡಿದ ಯತ್ನಾಳ್, ಗ್ಯಾರಂಟಿ.. ಗ್ಯಾರಂಟಿ.. ಏನ್ ಗ್ಯಾರಂಟಿ? ಟಿಕೆಟ್​ಗಾಗಿ 2ಲಕ್ಷ ತಗೊಂಡು ವಾಪಸ್ ಕೊಟ್ಟಿಲ್ಲ ಇವರು. ಒಂದೊಂದು ಕ್ಷೇತ್ರದಿಂದ 10-15 ಆಕಾಂಕ್ಷಿಗಳಿಗೆ ತಲಾ 2 ಲಕ್ಷ ಪಡೆದು ಕೊನೆಗೆ ಟಿಕೆಟ್ ನೀಡದಿದ್ದಾಗ ಹಣ ವಾಪಸ್ ಕೊಡಬೇಕಿತ್ತು. ಆದರೆ ಇವರು ಹಣವನ್ನೇ ವಾಪಸ್ ಕೊಟ್ಟಿಲ್ಲ. ಹೀಗಿದ್ದಾಗ ಇವರ ಗ್ಯಾರಂಟಿ ತಗೊಂಡು ನಾವೇನು ಮಾಡಬೇಕು ಎಂದು ವ್ಯಂಗ್ಯವಾಡಿದರು.

Advertisement

ಡಿಕೆ ಶಿವಕುಮಾರ್ ಹೇಳಿಕೆ ಮಿಮಿಕ್ ಮಾಡಿದ ಯತ್ನಾಳ್

ಸೋನಿಯಾ ಗಾಂಧಿಯನ್ನು ವಿಷಕನ್ಯೆ ಎಂದು ಯತ್ನಾಳ್ ಹೇಳಿದ್ದರು. ಇದನ್ನು ಡಿಕೆ ಶಿವಕುಮಾರ್ ಖಂಡಿಸುವ ವೇಳೆ ಸೋನಿಯಾ ಗಾಂಧಿ ಅವರನ್ನು ತನ್ನ ತಾಯಿ ಸಂಬೋಧಿಸಿದ್ದರು. ಇದನ್ನೇ ಮುಂದಿಟ್ಟುಕೊಂಡು ಡಿಕೆ ಶಿವಕುಮಾರ್ ಧಾಟಿಯಲ್ಲಿ ಮಾತನಾಡಿದ ಯತ್ನಾಳ್, “ಮಿಸ್ಟರ್ ಯತ್ನಾಳ್, ನೀವು ನನ್ನ ತಾಯಿಗೆ ಬೈದಿದ್ದೀರಿ” ಎಂದು ಡಿಕೆ ಶಿವಕುಮಾರ್ ಹೇಳುತ್ತಾರೆ, ಅವರಿಗೆ ಸೋನಿಯಾ ತಾಯಿ ಹೇಗೆ ಆಗುತ್ತಾರೆ? ನಿಮ್ಮ ತಾಯಿ ಕನಕಪುರದಲ್ಲಿದ್ದಾರೆ ಗೌರವ ಕೊಡೋಣ ಎಂದರು

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು[email protected] ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಸಿರಿಧಾನ್ಯ  ಬಳಕೆ  ಕುರಿತು  ಕೃಷಿ ಇಲಾಖೆಯಿಂದ  ಸಿರಿಧಾನ್ಯ ಓಟ
January 19, 2025
10:13 PM
by: The Rural Mirror ಸುದ್ದಿಜಾಲ
ಬೆಂಗಳೂರಿನಲ್ಲಿ ತುಂತುರು ಮಳೆ | ರಾಜ್ಯಾದ್ಯಂತ ಮುಂದಿನ ಐದು ದಿನ ಮಳೆ ಸಾಧ್ಯತೆ
January 19, 2025
10:06 PM
by: The Rural Mirror ಸುದ್ದಿಜಾಲ
ಹವಾಮಾನ ವರದಿ | 19.01.2025 | ಇಂದು ಕೆಲವು ಕಡೆ ತುಂತುರು ಮಳೆ ಸಾಧ್ಯತೆ | ಕೃಷಿಕರೇ ಇರಲಿ ಎಚ್ಚರ |
January 19, 2025
11:01 AM
by: ಸಾಯಿಶೇಖರ್ ಕರಿಕಳ
ಸರ್ಕಾರದ ಯೋಜನೆಗಳನ್ನು ರೈತರು ಸದುಪಯೋಗಪಡಿಸಿಕೊಳ್ಳುವಂತೆ ಸಚಿವ ಈಶ್ವರ್ ಖಂಡ್ರೆ ಕರೆ
January 19, 2025
7:22 AM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror