ಅವಹೇಳನಕಾರ ಹೇಳಿಕೆ : ಯತ್ನಾಳ್, ಪ್ರಿಯಾಂಕ್ ಖರ್ಗೆಗೆ ಚುನಾವಣಾ ಆಯೋಗ ನೋಟಿಸ್

May 3, 2023
11:28 PM

ಚುನಾವಣಾ ಪ್ರಚಾರ ಸಭೆಗಳಲ್ಲಿ ಆಕ್ಷೇಪಾರ್ಹ ಹೇಳಿಕೆ ನೀಡಿದ ವಿಚಾರವಾಗಿ ವಿಜಯಪುರ ಕ್ಷೇತ್ರದ ಬಿಜೆಪಿ ಶಾಸಕ ಬಸವನ ಪಾಟೀಲ್ ಯತ್ನಾಳ್ ಹಾಗೂ ಚಿತ್ತಾಪುರ ಕಾಂಗ್ರೆಸ್ ಶಾಸಕ ಪ್ರಿಯಾಂಕ್ ಖರ್ಗೆಗೆ ಚುನಾವಣಾ ಆಯೋಗ ಶೋಕಾಸ್ ನೋಟಿಸ್ ನೀಡಿದೆ. ಇದೀಗ ಇಬ್ಬರೂ ನಾಯಕರು ಆಯೋಗಕ್ಕೆ ಕಾರಣ ನೀಡಬೇಕಿದೆ. ಯತ್ನಾಳ್ ಅವರು ಸೋನಿಯಾ ಗಾಂಧಿ ವಿರುದ್ಧ ಅವಹೇಳನಕಾರಿ ಪದ ಬಳಸಿ ಟೀಕಿಸಿದ್ದರೆ ಪ್ರಿಯಾಂಕ್ ಖರ್ಗೆ ಪ್ರಧಾನಿ ಮೋದಿ ವಿರುದ್ಧ ನಿಂದನಾತ್ಮಕ ಪದ ಬಳಸಿ ಟೀಕಿಸಿದ್ದರು.

ಮೇ 4ರ ಸಂಜೆ 5 ಗಂಟೆಯೊಳಗೆ ಉತ್ತರ ನೀಡುವಂತೆ ಇಬ್ಬರಿಗೂ ಆಯೋಗ ಸೂಚಿಸಿದೆ. ಮಾದರಿ ನೀತಿ ಸಂಹಿತೆ ಉಲ್ಲಂಘನೆ ಆರೋಪದಲ್ಲಿ ನೋಟಿಸ್ ನೀಡಲಾಗಿದೆ. ನೀತಿ ಸಂಹಿತೆ ಪ್ರಕಾರ, ರಾಜಕೀಯ ವಿರೋಧಿಗಳ ವೈಯಕ್ತಿಕ ತೇಜೋವಧೆ ಮಾಡುವಂತಿಲ್ಲ. ಹೀಗಾಗಿ ನಿಮ್ಮ ವಿರುದ್ಧ ಕ್ರಮ ಏಕೆ ಕೈಗೊಳ್ಳಬಾರದು ಎಂದು ಇಬ್ಬರೂ ನಾಯಕರನ್ನು ಆಯೋಗ ಪ್ರಶ್ನಿಸಿದೆ.

ಪ್ರಚಾರದ ವೇಳೆ ನಾಯಕರು ಭಾಷೆಯ ಘನತೆಯನ್ನು ಮರೆಯುತ್ತಿರುವುದು ಹಲವು ಬಾರಿ ಕಂಡು ಬಂದಿದೆ ಎಂದು ಮಂಗಳವಾರ ಹೇಳಿದ್ದ ಚುನಾವಣಾ ಆಯೋಗ, ನಾಯಕರ ಅವಹೇಳನಕಾರಿ ಹೇಳಿಕೆಗಳಿಗೆ ಕಡಿವಾಣ ಹಾಕುವ ಉದ್ದೇಶದಿಂದ ಸ್ಟಾರ್ ಪ್ರಚಾರಕರು ಮತ್ತು ಪಕ್ಷಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿತ್ತು.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು[email protected] ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

₹1.65 ಲಕ್ಷದ ಐಫೋನ್‌ಗಾಗಿ ಬೆಳಗ್ಗೆಯಿಂದಲೇ ಸರದಿ..! ಬೆಂಗಳೂರಿನಿಂದ ಮುಂಬೈವರೆಗೆ ಕಂಡ ‘ಐಫೋನ್‌ ಕ್ರೇಜ್’
September 22, 2026
8:02 AM
by: ದ ರೂರಲ್ ಮಿರರ್.ಕಾಂ
ಹವಾಮಾನ ವರದಿ | 21-09-2026 | ಕರಾವಳಿಯಲ್ಲಿ ಜೋರು ಮಳೆಯ ಸಾಧ್ಯತೆ ಕಡಿಮೆ
September 21, 2026
12:57 PM
by: ಸಾಯಿಶೇಖರ್ ಕರಿಕಳ
ಹವಾಮಾನ ವರದಿ | 20.09.2026 |ಕರ್ನಾಟಕದಲ್ಲಿ ಸೆ.25ರವರೆಗೆ ಮಳೆಯ ಲಕ್ಷಣ: ಬಂಗಾಳಕೊಲ್ಲಿಯಲ್ಲಿ ಚಂಡಮಾರುತದ ಸಾಧ್ಯತೆ
September 20, 2026
3:13 PM
by: ಸಾಯಿಶೇಖರ್ ಕರಿಕಳ
ಕರ್ನಾಟಕದಲ್ಲಿ ಮತ್ತೆ ಮಳೆ ಅಬ್ಬರ: ಸೆ.22ರಿಂದ ಇನ್ನಷ್ಟು ಚುರುಕು, 7 ದಿನಗಳ ಎಚ್ಚರಿಕೆ
September 20, 2026
10:43 AM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror