ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸಾವಿರ ಕೋಟಿಗೂ ಮೀರಿದ ಸರದಾರರಾಗಿದ್ದಾರೆ. ಡಿ.ಕೆ.ಶಿವಕುಮಾರ್ ಅವರು ಒಟ್ಟು 1,414 ಕೋಟಿ ಆಸ್ತಿ ಒಡೆಯರಾಗಿದ್ದಾರೆ. ಐದು ವರ್ಷದಲ್ಲಿ ಬರೋಬರಿ 576 ಕೋಟಿ ಆಸ್ತಿ ಹೆಚ್ಚಳವಾಗಿದೆ.
ಕನಕಪುರ ಕಾಂಗ್ರೆಸ್ ಅಭ್ಯರ್ಥಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ (DK Shivakumar) ಅವರು ಇಂದು ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ಇದೇ ವೇಳೆ ತಮ್ಮ ಮತ್ತು ಕುಟುಂಬಸ್ಥರ ಆಸ್ತಿ ವಿವರ ಘೋಷಣೆ ಮಾಡಿದ್ದಾರೆ. ಸಾವಿರ ಕೋಟಿ ಒಡೆಯರಾಗಿರುವ ಡಿಕೆ ಶಿವಕುಮಾರ್ ಅವರ ಹೆಸರಿನಲ್ಲಿ ಚರಾಸ್ತಿ ಎಷ್ಟಿದೆ? ಚಿರಾಸ್ತಿ ಎಷ್ಟಿದೆ? ಇವರ ಕುಟುಂಬದ ಸದಸ್ಯರ ಹೆಸರಿನಲ್ಲಿ ಏನೇನಿದೆ? ಎಷ್ಟೆಷ್ಟಿದೆ? ಅನ್ನೋ ಬಗ್ಗೆ ಸಂಪೂರ್ಣ ಮಾಹಿತಿ ನೀಡಿದ್ದಾರೆ.
ಡಿಕೆ ಶಿವಕುಮಾರ್ ಕುಟುಂಬದ ಚರಾಸ್ತಿ ವಿವರ
ಡಿಕೆ ಶಿವಕುಮಾರ್ ಹೆಸರಿನಲ್ಲಿ ಚರಾಸ್ತಿ ಮೌಲ್ಯ: 244.93 ಕೋಟಿ ರೂ.
ಪತ್ನಿ ಉಷಾ ಹೆಸರಿನಲ್ಲಿರುವ ಚರಾಸ್ತಿ ಮೌಲ್ಯ: 20.30 ಕೋಟಿ ರೂ.
ಡಿಕೆ ಶಿವಕುಮಾರ್ ಪುತ್ರ ಆಕಾಶ್ ಹೆಸರಿನಲ್ಲಿರುವ ಚರಾಸ್ತಿ ಮೌಲ್ಯ: 12.99 ಕೋಟಿ ರೂ.
ಡಿಕೆ ಶಿವಕುಮಾರ್ ಕುಟುಂಬದ ಸ್ಥಿರಾಸ್ತಿ ವಿವರ
- ಡಿಕೆ ಶಿವಕುಮಾರ್ ಹೆಸರಿನಲ್ಲಿರುವ ಸ್ಥಿರಾಸ್ತಿ ಮೌಲ್ಯ: 970 ಕೋಟಿ ರೂ.
- ಪತ್ನಿ ಉಷಾ ಹೆಸರಿನಲ್ಲಿರುವ ಸ್ಥಿರಾಸ್ತಿ ಮೌಲ್ಯ: 113.38 ಕೋಟಿ ರೂ.
- ಪುತ್ರ ಆಕಾಶ್ ಹೆಸರಿನಲ್ಲಿರುವ ಸ್ಥಿರಾಸ್ತಿ ಮೌಲ್ಯ: 54.33 ಕೋಟಿ ರೂ.
ಡಿಕೆ ಶಿವಕುಮಾರ್ ಮತ್ತು ಅವರ ಹೆಸರಿನಲ್ಲಿರುವ ಸಾಲ
- ಡಿಕೆ ಶಿವಕುಮಾರ್ ಹೆಸರಿನಲ್ಲಿ ಇರುವ ಸಾಲ: 226 ಕೋಟಿ ರೂ.
- ಪತ್ನಿ ಉಷಾ ಹೆಸರಿನಲ್ಲಿ ಇರುವ ಸಾಲ: 34 ಕೋಟಿ ರೂ. ಡಿಕೆ ಶಿವಕುಮಾರ್ ಕುಟುಂಬದ ಒಟ್ಟು ಆಸ್ತಿ ಡಿಕೆ ಶಿವಕುಮಾರ್ ಹೆಸರಿನಲ್ಲಿ ಇರುವ ಒಟ್ಟು ಆಸ್ತಿ ಮೌಲ್ಯ: 1,214.93 ಕೋಟಿ ರೂ.
-
- ಪತ್ನಿ ಉಷಾ ಹೆಸರಿನಲ್ಲಿರುವ ಒಟ್ಟು ಆಸ್ತಿ ಮೌಲ್ಯ: 133 ಕೋಟಿ ರೂ.
- ಮಗ ಆಕಾಶ್ ಹೆಸರಿನಲ್ಲಿರುವ ಒಟ್ಟು ಆಸ್ತಿ ಮೌಲ್ಯ: 66 ಕೋಟಿ ರೂ.
- ಕುಟುಂಬದ ಒಟ್ಟು ಆಸ್ತಿ ಮೌಲ್ಯ: 1,414 ಕೋಟಿ ರೂ.
ಡಿಕೆ ಶಿವಕುಮಾರ್ ಬಳಿ ಬ್ರಾಂಡೆಡ್ ವಾಚ್ಗಳು
- ಯೂಬ್ಲೇಟ್ ವಾಚ್ ಮೌಲ್ಯ: 23 ಲಕ್ಷ
- ರೋಲೆಕ್ಸ್ ವಾಚ್ ಮೌಲ್ಯ: 9 ಲಕ್ಷ ರೂ.
ಡಿಕೆ ಶಿವಕುಮಾರ್ ಆಸ್ತಿ ಮೌಲ್ಯ
Advertisement- 2013ರಲ್ಲಿ ಕುಟುಂಬದ ಆಸ್ತಿ ಮೌಲ್ಯ 251 ಕೋಟಿ
- 2018ರಲ್ಲಿ ಒಟ್ಟು ಕುಟುಂಬದ ಆಸ್ತಿಮೌಲ್ಯ 840 ಕೋಟಿ
- 2013ರಲ್ಲಿ ಕುಟುಂಬದ ಒಟ್ಟು ಆಸ್ತಿ ಮೌಲ್ಯ: 1,414 ಕೋಟಿ ರೂ.
ಡಿಕೆ ಶಿವಕುಮಾರ್ ವಾರ್ಷಿಕ ಆದಾಯ
- ಡಿಕೆ ಶಿವಕುಮಾರ್ ವಾರ್ಷಿಕ ಆದಾಯ: 14.24 ಕೋಟಿ ರೂ.
- ಪತ್ನಿ ಉಷಾ ವಾರ್ಷಿಕ ಆದಾಯ: 1.9 ಕೋಟಿ ರೂ.