ತಾತ ಸಿದ್ದರಾಮಯ್ಯ ಜೊತೆ ಕ್ಷೇತ್ರದಲ್ಲಿ ತಿರುಗಾಡಿದ ಧವನ್ ರಾಕೇಶ್ | ಸಿದ್ದು ಕುಟುಂಬದ ಮೂರನೇ ತಲೆಮಾರು ರಾಜಕೀಯಕ್ಕೆ |

April 19, 2023
12:26 PM

ಮೊದಲ ಮಗ ರಾಕೇಶ್ ಸಿದ್ದರಾಮಯ್ಯ ಅವರನ್ನು ರಾಜಕೀಯವಾಗಿ ಬೆಳೆಸಲು ಸಿದ್ದರಾಮಯ್ಯ ಭಾರೀ ಕನಸು ಕಂಡಿದ್ದರು. ಆದ್ರೆ, ರಾಕೇಶ್   ಅಕಾಲಿಕ ಮರಣಕ್ಕೆ ತುತ್ತಾದ ನಂತರ ಸಿದ್ದರಾಮಯ್ಯ ಅವರು ರಾಜಕೀಯ ಬದುಕಿನ ಮುಸ್ಸಂಜೆಯಲ್ಲಿರುವಾಗಲೇ ಎರಡನೇ ಮಗ ಯತೀಂದ್ರ ಸಿದ್ದರಾಮಯ್ಯರನ್ನು ಅವರನ್ನು ತಮ್ಮ ಉತ್ತರಾಧಿಕಾರಿಯಾಗಿ ತಯಾರು ಮಾಡಿದ್ದಾರೆ. ಇದೀಗ  ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕುಟುಂಬದ ಮೂರನೇ ತಲೆಮಾರು ರಾಜಕೀಯಕ್ಕೆ ಎಂಟ್ರಿ ಕೊಟ್ಟಿದೆ. ಸಿದ್ದರಾಮಯ್ಯನವರ ಎರಡನೇ ಪುತ್ರ ದಿವಂಗತ ರಾಕೇಶ್ ಪತ್ನಿ ಸ್ಮಿತಾ ಹಾಗೂ ಪುತ್ರ ಧವನ್ ರಾಕೇಶ್ ಮೈಸೂರಿನ ಸಿದ್ದರಾಮನಹುಂಡಿ ಆಗಮಿಸಿದ್ದು, ಸಿದ್ದರಾಮಯ್ಯ ಪರ ಪ್ರಚಾರ ಮಾಡಲಿದ್ದಾರೆ. ರಾಕೇಶ್​ ನಿಧನದ ಬಳಿಕ ಬೆಂಗಳೂರಿನಲ್ಲೇ ತಂಗಿರುವ ಸ್ಮಿತಾ ಹಾಗೂ ಧವನ್, ಸಿದ್ದರಾಮಯ್ಯನವರು ಇಂದು ನಾಮಪತ್ರ ಸಲ್ಲಿಸುತ್ತಿರುವುದರಿಂದ ಸಿದ್ದರಾಮನಹುಂಡಿ ಗ್ರಾಮಕ್ಕೆ ಬಂದಿದ್ದಾರೆ. ಇನ್ನು ಸಿದ್ದರಾಮಯ್ಯನವರ ಸೊಸೆ ಹಾಗೂ ಮೊಮ್ಮಗನನ್ನು ನೋಡಲು ಸಿದ್ದರಾಮನಹುಂಡಿ ನಿವಾಸದ ಬಳಿ ಜನರು ಜಮಾಯಿಸಿದ್ದು, ಸೆಲ್ಫಿಗಾಗಿ ಮುಗಿಬಿದ್ದಿದ್ದಾರೆ.

ಇನ್ನು ಈ ಬಗ್ಗೆ ಸಿದ್ದರಾಮಯ್ಯನವರ ಮೊಮ್ಮಗ ಧವನ್ ರಾಕೇಶ್ ಮಾತನಾಡಿದ್ದು, ತಂದೆ ಎಂಎಲ್​ಎ ಕನಸು ಕಟ್ಟುಕೊಂಡಿದ್ದರು ಅದೇ ದಾರಿಯಲ್ಲಿ ನಾನು ಸಾಗುತ್ತೇನೆ. ನಾನು ಸ್ವ ಇಚ್ಚಿಯಿಂದ ವರುಣಾ ಚುನಾವಣೆಗೆ ಬಂದಿದ್ದೇನೆ. ನನ್ನ ತಾತ ನನಗೆ ರಾಜಕಾರಣಕ್ಕೆ ಬರಲು ಸ್ಪೂರ್ತಿ. ಜನರ ಪ್ರೀತಿ ನೋಡಿ ನಾನು ರಾಜಕಾರಣಕ್ಕೆ ಬರಬೇಕು ಅನಿಸಿತು ಎಂದು ರಾಜಕೀಯಕ್ಕೆ ಬರುವ ಆಸೆ ವ್ಯಕ್ತಪಡಿಸಿದ್ದಾನೆ.

ತಾತ, ಚಿಕ್ಕಪ್ಪ ಡಾ ಯತೀಂದ್ರ ಸಿದ್ದರಾಮಯ್ಯ ಸಾಕಷ್ಟು ಮಾಹಿತಿ ನೀಡುತ್ತಾರೆ. ನನ್ನ ವಿದ್ಯಾಭ್ಯಾಸ ಮುಗಿದ ನಂತರ ಸಕ್ರಿಯ ರಾಜಕಾರಣಕ್ಕೆ ಬರುವಂತೆ ತಾತಾ ಹೇಳಿದ್ದಾರೆ. ನಾನು ಕಾನೂನು ಪದವಿ ಪಡೆದ ನಂತರ ರಾಜಕಾರಣಕ್ಕೆ ಬರುತ್ತೇನೆ. ಅಪ್ಪನನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತೇನೆ. ನಾನು ರಾಜಕಾರಣದ ಬಗ್ಗೆ ಆಸಕ್ತಿ ಹೊಂದಿರುವುದು ಮನೆಯವರಿಗೆಲ್ಲಾ ಖುಷಿ ತಂದಿದೆ ಎಂದು ಸಂತಸ ವ್ಯಕ್ತಪಡಿಸಿದ್ದಾನೆ.

ಇನ್ನು ಮೊಮ್ಮಗ ರಾಜಕೀಯ ಪ್ರವೇಶದ ಬಗ್ಗೆ ಸಿದ್ದರಾಮಯ್ಯ ಪ್ರತಿಕ್ರಿಯಿಸಿದ್ದು, ಧವನ್‍ಗೆ ರಾಜಕೀಯದ ಬಗ್ಗೆ ಬಹಳ ಆಸಕ್ತಿ ಇದೆ. ನಾಮಪತ್ರ ಸಲ್ಲಿಕೆ, ಪ್ರಚಾರ ವೈಖರಿ ಎಲ್ಲವನ್ನೂ ತಿಳಿದುಕೊಳ್ಳಲು ಸ್ವಆಸಕ್ತಿಯಿಂದ ನನ್ನ ಜೊತೆ ಬಂದಿದ್ದಾನೆ. ಅವನಿಗೆ ಇನ್ನೂ 17 ವರ್ಷ ರಾಜಕೀಯಕ್ಕೆ ಬರಲು ಬಹಳ ಸಮಯವಿದೆ. ಈಗ ಆಸಕ್ತಿಯಿಂದ ಎಲ್ಲವನ್ನೂ ನೋಡಿಕೊಳ್ಳಲು ಬರುತ್ತಿದ್ದಾನೆ. ಮೊಮ್ಮಗನಿಗೆ ರಾಜಕೀಯ ಆಸಕ್ತಿ ಇರುವುದು ತಾತನಾಗಿ ನನಗೆ ಖುಷಿ ಇದೆ. ಪ್ರಚಾರಕ್ಕೆ ಅವನು ಇಷ್ಟ ಪಟ್ಟು ಬಂದರೆ ಬರಲಿ ಎಂದು ಹೇಳಿದರು.

Advertisement
Advertisement

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು[email protected] ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

2025-26 ರಲ್ಲಿ ಅಡಿಕೆ ಕೊಳೆರೋಗ ಮತ್ತು ಎಲೆಚುಕ್ಕಿ ರೋಗ ಪ್ರಕರಣ ವರದಿಯಾಗಿಲ್ಲ…!
December 17, 2025
7:54 AM
by: ದ ರೂರಲ್ ಮಿರರ್.ಕಾಂ
ಮನೆಯ ಮೇಲ್ಛಾವಣಿಯನ್ನು ಕೃಷಿ ಭೂಮಿಯನ್ನಾಗಿಸಿದ ಆಸಿಯಾ ಇತರ ಮಹಿಳೆಯರಿಗೂ ಇಂದು ಮಾದರಿ..
December 17, 2025
7:17 AM
by: ರೂರಲ್‌ ಮಿರರ್ ಸುದ್ದಿಜಾಲ
ನಮ್ಮ ಹೊಲ ನಮ್ಮ ದಾರಿ : ರಸ್ತೆಗೆ 12.5 ಲಕ್ಷ ಸಹಾಯಧನ
December 17, 2025
7:06 AM
by: ರೂರಲ್‌ ಮಿರರ್ ಸುದ್ದಿಜಾಲ
2025-26 ನೇ ಸಾಲಿನ ಕೃಷಿ ಇಲಾಖೆ ಸಹಾಯಧನ ಯೋಜನೆಗಳು
December 17, 2025
7:02 AM
by: ರೂರಲ್‌ ಮಿರರ್ ಸುದ್ದಿಜಾಲ

You cannot copy content of this page - Copyright -The Rural Mirror