Advertisement
MIRROR FOCUS

#KarnatakaBandh | ಕಾವೇರಿದ ಕಾವೇರಿ ಕೂಗು | ಕಾವೇರಿಗಾಗಿ ಮತ್ತೆ ಶುಕ್ರವಾರ ಕರ್ನಾಟಕ ಬಂದ್ ಸಾಧ್ಯತೆ | 100ಕ್ಕೂ ಹೆಚ್ಚು ಸಂಘಟನೆಗಳ ಬೆಂಬಲ ಘೋಷಣೆ

Share

ಕಾವೇರಿ ಕೂಗು ದಿನದಿಂದ ದಿನಕ್ಕೆ ಜೋರಾಗುತ್ತಿದ್ದು, ಕಾವೇರಿ ನೀರನ್ನ ತಮಿಳುನಾಡಿಗೆ ಹರಿಸುತ್ತಿರೋದನ್ನ ಖಂಡಿಸಿ ಕರೆ ಕೊಟ್ಟಿದ್ದ ಬೆಂಗಳೂರು ಬಂದ್ ಭಾಗಶಃ ಯಶಸ್ಸಾಗಿದೆ. ಆದರೆ ರಾಜ್ಯ ಸರ್ಕಾರ ಮತ್ತೆ ತಮಿಳುನಾಡಿಗೆ ನೀರನ್ನು ಹರಿಸಿದೆ. ಇದರಿಂದ ಮತ್ತಷ್ಟು ರೊಚ್ಚಿಗೆದ್ದಿರುವ ರೈತರು, ಹಾಗೂ ರಾಜ್ಯ ಸಂಘಟನೆಗಳು ಮತ್ತೆ  ಶುಕ್ರವಾರ  ಅಖಂಡ ಕರ್ನಾಟಕ ಬಂದ್‌ ಗೆ ಕರೆ ಕೊಟ್ಟಿವೆ. ಶುಕ್ರವಾರದ ಬಂದ್‌ ಗೆ ಈಗಾಗಲೇ 100ಕ್ಕೂ ಹೆಚ್ಚು ಸಂಘಟನೆಗಳು ಬೆಂಬಲ ಸೂಚಿಸಿವೆ.

Advertisement
Advertisement

ಮಂಗಳವಾರದ ಬೆಂಗಳೂರು ಬಂದ್  ಮಾಡಿದ ಮೇಲೆ ಶುಕ್ರವಾರ ಮತ್ತೆ ಸಂಪೂರ್ಣ ಕರ್ನಾಟಕ ಬಂದ್ ಆಗಲಿದೆ. ರಾಜ್ಯದ ಹಿತಕ್ಕಾಗಿ ಸೆ.29 ಶುಕ್ರವಾರ ಕರ್ನಾಟಕ ಬಂದ್ ಮಾಡಲು ತೀರ್ಮಾನಿಸಲಾಗಿದೆ ಅಂತಾ ಈಗಾಗಲೇ ಕನ್ನಡ ಒಕ್ಕೂಟ ಸಂಘಟನೆಗಳು ಘೋಷಿಸಿಕೊಂಡಿವೆ. ನಿರೀಕ್ಷೆಗೂ ಮೀರಿ ಬೆಂಗಳೂರು ಬಂದ್‍ಗೆ ಬೆಂಗಳೂರಿಗರು ಜೈ ಎಂದಿದ್ರು. ಇದೇ ರೀತಿ ಅಥವಾ ಇದಕ್ಕೂ ಹೆಚ್ಚಿನ ಯಶಸ್ಸು ಕರ್ನಾಟಕ ಬಂದ್‍ಗೆ ಸಿಗಬೇಕು ಎನ್ನುವ ಲೆಕ್ಕಾಚಾರದಲ್ಲಿ ಕನ್ನಡ ಒಕ್ಕೂಟದ ಪ್ರಮುಖರು ಅಖಾಡಕ್ಕಿಳಿದಿದ್ದಾರೆ.‌

Advertisement

ಹೀಗಾಗಿ ಸರ್ಕಾರಕ್ಕೆ ಬಿಸಿ ಮುಟ್ಟಿಸುವ ಸಲುವಾಗಿ ಮಂಗಳವಾರ ಬೆಂಗಳೂರು ಬಂದ್ ಆಯ್ತು. ಈಗ ಶುಕ್ರವಾರ ಕರ್ನಾಟಕ ಬಂದ್ ಆಗೋದು ನಿಶ್ಚಿತವಾಗಿದೆ. ಒಂದೇ ವಾರದಲ್ಲಿ ಎರಡೆರಡು ದಿನ ಬಂದ್ ಮಾಡೋದಕ್ಕೆ ಈ ಹಿಂದೆ ಕೆಲವರು ವಿರೋಧ ವ್ಯಕ್ತಪಡಿಸಿದ್ದರು. ಮಂಗಳವಾರವೇ ಕರ್ನಾಟಕ ಬಂದ್ ಕೂಡಾ ಮಾಡಬಹುದಲ್ಲವೇ ಎಂಬ ವಾದಗಳೂ ಇದ್ದವು. ಆದರೆ ಮಂಗಳವಾರ ಬೆಂಗಳೂರು ಬಂದ್ ಹಾಗೂ ಕಾವೇರಿ ಜಲಾನಯನ ಪ್ರದೇಶಗಳಲ್ಲಿ ಮಾತ್ರ ಬಂದ್ ವಾತಾವರಣ ಕಂಡುಬಂದಿತ್ತು. ಇನ್ನು ಶುಕ್ರವಾರ ಸಂಪೂರ್ಣ ಕರ್ನಾಟಕ ಬಂದ್ ಆಗಲಿದೆ.

ಬೆಂಗಳೂರು ಬಂದ್ಗೆ ಬೆಂಬಲ ನೀಡಿದ್ದ ಕೆಲವು ಸಂಘಟನೆಗಳು ಕಡೆ ಕ್ಷಣದಲ್ಲಿ ವಾಪಾಸ್ ಪಡೆದು ಕನ್ನಡ ಒಕ್ಕೂಟ ಕರೆ ಕೊಟ್ಟಿರುವ ಕರ್ನಾಟಕ ಬಂದ್‍ಗೆ ಬೆಂಬಲವನ್ನ ಘೋಷಿಸಿದವು. ಪ್ರಮುಖವಾಗಿ ಹೋಟೆಲ್ ಅಸೋಸಿಯೇಷನ್, ಖಾಸಗಿ ವಾಹನ ಮಾಲೀಕರ ಸಂಘಟನೆಗಳು, ಒಲಾ ಊಬರ್ ಸಂಘಟನೆಗಳು ಕರ್ನಾಟಕ ಬಂದ್ ಗೆ ಸಪೋರ್ಟ್ ಮಾಡಿದ್ರು.

Advertisement

ಯಾರ ಬೆಂಬಲ..!?: ಓಲಾ ಉಬರ್ ಚಾಲಕರ ಸಂಘ, ಆದರ್ಶ ಆಟೋ ಯೂನಿಯನ್, ಕರ್ನಾಟಕ ಕೈಗಾರಿಕೆಗಳ ಸಂಘ, ಕರ್ನಾಟಕ ರಸ್ತೆ ಸಾರಿಗೆ ಕ್ರಿಯಾ ಸಮಿತಿ, ವಿದ್ಯಾರ್ಥಿ ಸಂಘಟನೆಗಳು, ಮಾರುಕಟ್ಟೆ ಸಂಘ, ಚಲನಚಿತ್ರ ವಾಣಿಜ್ಯ ಮಂಡಳಿ.., ಜಲಮಂಡಳಿ ನೌಕರರ ಸಂಘ, ಲಾರಿ ಮಾಲೀಕರ ಸಂಘ, ಹೋಟೆಲ್ ಅಸೋಸಿಯೇಷನ್ ಬೆಂಬಲ ಘೋಷಿಸಿವೆ. ಒಟ್ಟಿನಲ್ಲಿ ಅಖಂಡ ಕರ್ನಾಟಕ ಬಂದ್ ಗೆ ಸಾಕಷ್ಟು ಸಂಘಟನೆಗಳು ಸಾಥ್ ನೀಡಲಿವೆ. ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಅಖಂಡ ಕರ್ನಾಟಕ ಬಂದ್ ಗೆ ತಯಾರಿ ನಡೆಸುತ್ತಿದ್ದು, ಸದ್ಯ 80 ಕ್ಕೂ ಹೆಚ್ಚು ಸಂಘಟನೆಗಳಿಂದ ಬಂದ್ ಗೆ ಸಂಪೂರ್ಣ ಬೆಂಬಲ ಸಿಕ್ಕಿದೆ.

– ಅಂತರ್ಜಾಲ ಮಾಹಿತಿ

Advertisement
Advertisement
Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

Published by
The Rural Mirror ಸುದ್ದಿಜಾಲ

Recent Posts

ಶಿಶಿಲದಲ್ಲಿರುವ ಈ ದೈವದ ವಿಶೇಷತೆ..! | ಜೋಡಿ ದೈವಗಳಿಗೆ ಜೀವಂತ ಕೋಳಿ ಅರ್ಪಣೆ |

ಗ್ರಾಮೀಣ ಭಾಗದ ನಂಬಿಕೆಗಳು ಮಾನಸಿಕವಾಗಿ ಹೆಚ್ಚು ಶಕ್ತಿ ನೀಡುತ್ತವೆ. ಅಂತಹದೊಂದು ನಂಬಿಕೆ ಶಿಶಿಲದಲ್ಲಿ…

1 hour ago

ಕೋವಿ ಡಿಪಾಸಿಟ್‌ ಪ್ರಕರಣ | ಮಹತ್ವದ ತೀರ್ಪು | ಚುನಾವಣಾ ಕಾಲದಲ್ಲಿ ಕೋವಿ ಡಿಪಾಸಿಟ್‌ಗೆ ಪರಿಹಾರ |

ಚುನಾವಣೆಯ ಸಮಯದಲ್ಲಿ ಕೋವಿ ಠೇವಣಾತಿಯ ಬಗ್ಗೆ ಕೃಷಿಕರ ಸಂಕಷ್ಟಕ್ಕೆ ನ್ಯಾಯಾಲಯವು ಪರಿಹಾರ ನೀಡಿದೆ.

2 hours ago

ಬಹುಬೆಳೆ ಬೆಳೆದು ಉತ್ತಮ ಫಸಲು ಪಡೆದ ರೈತ | ಕೃಷಿಗೆ ರೈತ ಅನುಸರಿಸಿದ ಕ್ರಮಗಳಾವುವು..?

ಮಿಶ್ರ ಬೆಳೆ, ಪರ್ಯಾಯ ಬೆಳೆ, ಬಹು ಬೆಳೆ(Mixed cropping, alternating cropping, multiple…

10 hours ago

ಸ್ಟ್ರೀಟ್ ಫುಡ್ ವರ್ಸಸ್ ಆರೋಗ್ಯ | ನಿಮ್ಮ ಆರೋಗ್ಯವನ್ನು ನೀವೇ ಕಾಪಾಡಿಕೊಳ್ಳಿ

ಆಹಾರ ಹಾಗೂಆಹಾರ ಪದ್ಧತಿಗಳ ಬಗ್ಗೆ ವಿವೇಕ್‌ ಆಳ್ವ ಅವರು ಬರೆದಿದ್ದಾರೆ.

11 hours ago