ಅಖಿಲ ಭಾರತ ಕಿಸಾನ್ ಸಂಘರ್ಷ ಸಮನ್ವಯ ಸಮಿತಿಯು ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರದ ತಿದ್ದುಪಡಿ ಕಾಯಿದೆಗಳಾದ ಭೂ-ಸುಧಾರಣೆ, ಎಪಿಎಂಸಿ, ವಿದ್ಯುತ್ ಖಾಸಗೀಕರಣ ಮಸೂದೆಗಳನ್ನು ಸುಗ್ರಿವಾಜ್ಞೆ ಮೂಲಕ ಜಾರಿಗೆ ತಂದಿರುವ ಕ್ರಮವನ್ನು ವಿರೋಧಿಸಿ ಕರ್ನಾಟಕ ರಾಜ್ಯ ರೈತ ಸಂಘ ಕರ್ನಾಟಕ ಪ್ರಾಂತ ರೈತ ಸಂಘ, ರಾಜ್ಯ ಕಬ್ಬು ಬೆಳೆಗಾರರ ಸಂಘ, ಆಲ್ ಇಂಡಿಯ ಕಿಸಾನ್ ಸಭಾ, ರೈತ ಕೃಷಿ ಕೂಲಿಕಾರರ ಸಂಘ, ಕರ್ನಾಟಕ ಜನಶಕ್ತಿ ಹಾಗೂ ಇನ್ನಿತರೆ ರೈತ ಸಂಘಟನೆಗಳು ಜಂಟಿಯಾಗಿ ಆಯಾ ಸ್ಥಳೀಯ ಮುಖಂಡರುಗಳ ನೇತೃತ್ವದಲ್ಲಿ ಸೆ.28 ರಂದು “ಕರ್ನಾಟಕ ಬಂದ್”ಗೆ ಕರೆ ನೀಡಿದೆ.
ಈ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ಘಟಕ ವ್ಯಾಪ್ತಿಯಲ್ಲಿ ಬಂದ್ ವೇಳೆ ಯಾವುದೇ ಅಹಿತಕರ
ಘಟನೆಗಳು ನಡೆಯದಂತೆ ಪೊಲೀಸ್ ಇಲಾಖೆ ಬಂದೋಬಸ್ತ್ ಕೈಗೊಂಡಿದೆ.
ಸಮಸ್ಯೆಯಾದರೆ ಪೊಲೀಸರಿಗೆ ಕರೆ ಮಾಡಿ
ಈ ಸಂದರ್ಭ ಸಾರ್ವಜನಿಕರು ಯಾವುದೇ ಅತಂಕಕ್ಕೆ ಒಳಗಾಗದೆ ಸಂಯಮದಿಂದ ವರ್ತಿಸುವಂತೆ ಹಾಗೂ ಬಲವಂತವಾಗಿ ಯಾರಾದರೂ ಬಂದ್ ಮಾಡಲು ಪ್ರಯತ್ನಿಸಿದ್ದಲ್ಲಿ ಅಥವಾ ಒತ್ತಾಯಿಸಿದ್ದಲ್ಲಿ ಜಿಲ್ಲಾ ನಿಯಂತ್ರಣ ಕೊಠಡಿ ಇವರಿಗೆ ದೂರವಾಣಿ ಸಂಖ್ಯೆ 0824- 2220508 ಗೆ ಕರೆ ಮಾಡಿ ತಿಳಿಸುವಂತೆ ವಿನಂತಿಸಿದೆ. ಇದೇ ವೇಳೆ ಕೋವಿಡ್-19 ತಡೆಗಾಗಿ ಇರುವ ನಿಯಾಮಾವಳಿಗಳನ್ನು ಉಲ್ಲಂಘಿಸಿದ್ದಲ್ಲಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸ್ ಇಲಾಖೆ ಪ್ರಕಟಣೆ ತಿಳಿಸಿದೆ.
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Rural Mirror Special |
Subscribe Our Channel