ಮತ್ತೆ ಸಿದ್ದರಾಮಯ್ಯ ಸಿಎಂ, ಡಿಕೆ ಶಿವಕುಮಾರ್‌ ಡಿಸಿಎಂ | ಅಧಿಕೃತ ಘೋಷಣೆ ಬಾಕಿ | ನಾಳೆಯೇ ಕರ್ನಾಟಕದ ಸಿಎಂ ಪ್ರಮಾಣವಚನ |

May 17, 2023
12:29 PM

ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್‌ ನಡುವಿನ ಕುರ್ಚಿ ಕದನ ಬಹುತೇಕ ಅಂತ್ಯವಾಗಿದ್ದು, ಸಿದ್ದರಾಮಯ್ಯನವರಿಗೆ ಮುಖ್ಯಮಂತ್ರಿ ಸ್ಥಾನ ಒಲಿದಿದೆ. ಗುರುವಾರ ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಅವರು ಪ್ರಮಾಣವಚನ ಸ್ವೀಕಾರ ಮಾಡಲಿದ್ದಾರೆ.ಕಂಠೀರವ ಸ್ಟೇಡಿಯಂನಲ್ಲಿ ಸಿದ್ದರಾಮಯ್ಯ ಅವರು ರಾಜ್ಯದ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕಾರ ಮಾಡಲಿದ್ದು, ರಾಜ್ಯಪಾಲ ಥೋವರ್ ಚಂದ್ ಗೆಹ್ಲೋಟ್ ಅವರು ಪ್ರಮಾಣವಚನ ಬೋಧಿಸಲಿದ್ದಾರೆ.

Advertisement

ಮೂಲಗಳ ಪ್ರಕಾರ ಸಿದ್ದರಾಮಯ್ಯ ಅವರಿಗೆ ಮುಖ್ಯಮಂತ್ರಿ ಸ್ಥಾನ, ಡಿಕೆ ಶಿವಕುಮಾರ್‌ ಅವರಿಗೆ ಪ್ರಬಲವಾದ ಎರಡು ಖಾತೆಗಳೊಂದಿಗೆ ಡಿಸಿಎಂ ಸ್ಥಾನ ನೀಡಲು ಎಐಸಿಸಿ ಮುಂದಾಗಿದೆ. ಅಷ್ಟೇ ಅಲ್ಲದೇ ಕೆಪಿಸಿಸಿ ಅಧ್ಯಕ್ಷರಾಗಿಯೇ ಡಿಕೆ ಶಿವಕುಮಾರ್‌ ಅವರೇ ಮುಂದುವರಿಯುವ ಸಾಧ್ಯತೆಯಿದೆ.

ಪೂರ್ಣಾವಧಿ ಸಿಎಂ ಸ್ಥಾನದ ಮೇಲೆ ಕಣ್ಣಿಟ್ಟಿರುವ ಸಿದ್ದರಾಮಯ್ಯ 50:50 ಸೂತ್ರದ ಅಧಿಕಾರ ಹಂಚಿಕೆಗೆ ಸಿದ್ದರಿದ್ದಾರೆ. 2 ವರ್ಷದ ಅವಧಿಗೆ ಸಿದ್ದರಾಮಯ್ಯ ಅವರನ್ನು ಸಿಎಂ ಮಾಡುವುದು ಮತ್ತು ಅವರ ನೇತೃತ್ವದಲ್ಲಿ ಲೋಕಸಭಾ ಚುನಾವಣೆ ಎದುರಿಸುವುದು.

ಲೋಕಸಭಾ ಚುನಾವಣೆಯ ನಂತರವೂ ಒಂದು ವರ್ಷ ಅವರನ್ನು ಮುಂದುವರಿಸಿ ಕೊನೆಯ ಮೂರು ವರ್ಷ ಡಿಕೆಶಿ ಅವರಿಗೆ ಸಿಎಂ ಪಟ್ಟ ನೀಡಿ 2028ರಲ್ಲಿ ಡಿಕೆಶಿ ಮೂಲಕ ಚುನಾವಣೆ ಎದುರಿಸುವ ಅವಕಾಶ ನೀಡಲು ಹೈಕಮಾಂಡ್‌ ಮುಂದಾಗಿದೆ. ಆ ಚುನಾವಣೆ ಗೆದ್ದರೆ ಡಿಕೆಶಿ ಮತ್ತೆ 5 ವರ್ಷ ಸಿಎಂ ಆಗಿ ಮುಂದುವರಿಯಬಹುದು ಎಂಬ ಸೂತ್ರವನ್ನು ಇಬ್ಬರು ನಾಯಕರ ಮುಂದಿಟ್ಟಿದೆ.

Advertisement

Advertisement

ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Rural Mirror Special | Subscribe Our Channel

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಕ್ಯಾಂಪ್ಕೊ ಬ್ರ್ಯಾಂಡ್ ಅಡಿಕೆ ಅಂತರಾಷ್ಟ್ರೀಯ ಮಟ್ಟಕ್ಕೆ
March 29, 2025
11:04 PM
by: ದ ರೂರಲ್ ಮಿರರ್.ಕಾಂ
ಬಂಡಿಪುರ ಅರಣ್ಯದಲ್ಲಿ ವಾಹನಗಳ ರಾತ್ರಿ ಸಂಚಾರ ನಿರ್ಬಂಧ ತೆರವಿಗೆ ಚರ್ಚಿಸಿ ನಿರ್ಧಾರ | ಅರಣ್ಯ ಸಚಿವ ಈಶ್ವರ್ ಖಂಡ್ರೆ
March 29, 2025
9:58 AM
by: The Rural Mirror ಸುದ್ದಿಜಾಲ
ಬೇಸಿಗೆ ಹಿನ್ನೆಲೆ | ರಾಜ್ಯದ ಜಲಾಶಯಗಳಿಂದ ಕುಡಿಯುವ ನೀರು ಬಿಡುಗಡೆ ಕುರಿತು ಚರ್ಚೆ
March 29, 2025
9:54 AM
by: The Rural Mirror ಸುದ್ದಿಜಾಲ
ವಿಶೇಷ ಕಾಫಿ ಉತ್ಪನ್ನಗಳ ಬಿಡುಗಡೆ | ಡಿಪ್ ಕಾಫಿ ಬ್ಯಾಗ್ ಗಳನ್ನು ಪರಿಚಯಿಸಿದ ಕಾಫಿ ಬೋರ್ಡ್
March 29, 2025
9:49 AM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror

Join Our Group