ಕಾಂಗ್ರೆಸ್ ಪಕ್ಷ ಚುನಾವಣಾ ಪೂರ್ವ ಮತದಾರರನ್ನು ಉಚಿತಗಳ ಗ್ಯಾರಂಟಿಗಳನ್ನು ಘೋಷಣೆ ಮಾಡುವ ಮೂಲಕ ಗಮನಸೆಳೆದಿತ್ತು. ಈ ಮೂಲಕ ಇದೀಗ ಅಧಿಕಾರಕ್ಕೂ ಬಂದಿದೆ. ಅಧಿಕಾರದ ಚುಕ್ಕಾಣಿ ಹಿಡಿದ ಬಳಿಕ ಸುಲಭವಲ್ಲದ ಈ ಯೋಜನೆಯ ಜಾರಿಗೆ ಸಹಜವಾಗಿಯೇ ಮೀನ ಮೇಷ ಎಣಿಸುತ್ತಿದ್ದಾರೆ. ಇದೀಗ ಕೆಲವು ಷರತ್ತುಗಳ ಮೂಲಕ ಗ್ಯಾರಂಟಿ ಜಾರಿ ಮಾಡಲು ಮುಂದಾಗಿದೆ ಸರ್ಕಾರ.
ಜೂನ್ 1ಕ್ಕೆ ಸಂಪುಟ ಸಭೆ ನಡೆಸಿ ಗ್ಯಾರಂಟಿಗಳನ್ನು ಅಧಿಕೃತ ಜಾರಿ ಮಾಡಲು, ಅದೇ ದಿನ ಷರತ್ತುಗಳನ್ನೂ ಜನರ ಮುಂದಿಡುವ ತೀರ್ಮಾನ ಆಗಿದೆ. ಗ್ಯಾರಂಟಿಗಳು ‘ಗ್ಯಾರಂಟಿ’ ಜಾರಿಗೆ ಬರುತ್ತೆ ಅಂತಿದೆ ಕಾಂಗ್ರೆಸ್ ಸರ್ಕಾರ. ಉದ್ದೇಶಿತ ಷರತ್ತುಗಳು ಹೀಗಿವೆ ಎಂದು ವರದಿಯಾಗಿದೆ.
ಷರತ್ತು 1: ಸರ್ಕಾರಿ ನೌಕರರ ಕುಟುಂಬಕ್ಕಿಲ್ಲ ‘ಗ್ಯಾರಂಟಿ’?
ಷರತ್ತು 2: ಸ್ವಂತ ಕಾರು, ಬಾಡಿಗೆಗೆ ಮನೆ ಕೊಟ್ಟಿದ್ದರೆ ಗ್ಯಾರಂಟಿ ಸಿಗುವುದು ಡೌಟು?
ಷರತ್ತು 3: ಆದಾಯ ತೆರಿಗೆ ಕೊಟ್ಟಿದ್ದರೆ ಗ್ಯಾರಂಟಿ ಸಿಗುವುದಿಲ್ಲ?
ಷರತ್ತು 4: ವಿಧವಾ-ವೃದ್ಧಾಪ್ಯ ವೇತನದಾರರಿಗೂ ಡೌಟು?
ಷರತ್ತು 5: BPL ಕಾರ್ಡ್ ಇದ್ದವರಿಗೆ ಮೊದಲ ಆದ್ಯತೆ ನೀಡುವ ಸಾಧ್ಯತೆ ಇದೆ.
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel