ಡಿಕೆಶಿಯ ನಾಮಪತ್ರ ತಿರಸ್ಕೃತವಾಗುತ್ತಾ? | 5 ಸಾವಿರ ಮಂದಿಯಿಂದ ಡಿಕೆಶಿ ಆಸ್ತಿ ವಿವರ ಡೌನ್‌ಲೋಡ್‌

April 21, 2023
9:30 AM

ಕನಕಪುರ ಒಂದೇ ಕ್ಷೇತ್ರದಿಂದ ಡಿಕೆ ಸಹೋದರರು ನಾಮಪತ್ರ ಸಲ್ಲಿಸಿರುವುದು ಈಗ ತೀವ್ರ ಕುತೂಹಲಕ್ಕೆ ಕಾರಣವಾಗಿದೆ.

Advertisement

ಈ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಸಂಸದ ಡಿಕೆ ಸುರೇಶ್‌, ಚುನಾವಣೆ ಸಮಯದಲ್ಲಿ ಡಿಕೆ ಶಿವಕುಮಾರ್‌ ಆದಾಯ ತೆರಿಗೆ ಇಲಾಖೆ ನೋಟಿಸ್ ನೀಡುವ ಮೂಲಕ ಬಿಜೆಪಿ ಕುತಂತ್ರ ಮಾಡಲಾಗುತ್ತಿದೆ ಎಂದು ಕಿಡಿಕಾರಿದ್ದಾರೆ. ಇದಕ್ಕೆ ತಿರುಗೇಟು ನೀಡಿದ ಸಿಎಂ, ನಾಮಪತ್ರವನ್ನು ಬಿಜೆಪಿ ಪರಿಶೀಲನೆ ಮಾಡುವುದಿಲ್ಲ. ಚುನಾವಣಾ ಆಯೋಗ ಪರಿಶೀಲನೆ ನಡೆಸುತ್ತದೆ ಎಂದು ಪ್ರತಿಕ್ರಿಯಿಸಿದ್ದಾರೆ.

ಡಿಕೆ ಸುರೇಶ್‌ ಹೇಳಿದ್ದೇನು? : ಬಿಜೆಪಿ ಅಧಿಕಾರ ದುರುಪಯೋಗ ಪಡಿಸಿಕೊಂಡು ಡಿಕೆಶಿ ನಾಮಪತ್ರವನ್ನು ತಿರಸ್ಕರಿಸುವ ಸಾಧ್ಯತೆಯಿದೆ. ಕಳೆದ ನಾಲ್ಕೈದು ದಿನಗಳ ಹಿಂದೆ ಚೆನ್ನೈ ಐಟಿ ಅಧಿಕಾರಿಗಳು ಖುದ್ದು ಹಾಜರಾಗುವಂತೆ ನೋಟಿಸ್ ಕೊಟ್ಟಿದ್ದಾರೆ. ಆದರೆ ಚುನಾವಣೆ ಇರುವುದರಿಂದ ಇನ್ನೂ ಒಂದು ತಿಂಗಳು ಯಾವುದೇ ವಿಚಾರಣೆಗೆ ಹಾಜರಾಗಲು ಸಾಧ್ಯವಿಲ್ಲ ಎಂದು ಉತ್ತರಿಸಲಾಗಿದೆ. ಹೀಗಿದ್ದರೂ ಕೊನೆ ಕ್ಷಣದಲ್ಲಿ ನಮ್ಮ ವಿರುದ್ಧ ಕುತಂತ್ರ ನಡೆಸುವ ಸಾಧ್ಯತೆ ಇದೆ. ಹಾಗಾಗಿ ನಾನು ನಾಮಪತ್ರ ಸಲ್ಲಿಸಿದ್ದೇನೆ.

ಡಿಕೆ ಶಿವಕುಮಾರ್‌ ಹೇಳಿದ್ದೇನು? : ಡಿಕೆ ಸುರೇಶ್ ಯಾಕೆ ನಾಮಪತ್ರ ಸಲ್ಲಿಸಬಾರದು? ನಮ್ಮದು ನೂರಾರು ರಾಜಕೀಯ ಲೆಕ್ಕಾಚಾರ ಇರುತ್ತದೆ. ಬಿಜೆಪಿಗರ ಕುತಂತ್ರಕ್ಕೆ ಉತ್ತರ ಕೊಡುತ್ತೇವೆ. ನನ್ನ ಆಸ್ತಿ ವಿವರವನ್ನು ಐದು ಸಾವಿರ ಜನ ಡೌನ್‍ಲೋಡ್ ಮಾಡಿದ್ದಾರೆ. ಅದರಲ್ಲಿ ಯಾವುದೇ ವ್ಯತ್ಯಾಸ ಇಲ್ಲ, ನಾಡಿದ್ದುವರೆಗೂ ಕಾದು ನೋಡಿ ಎಲ್ಲ ಗೊತ್ತಾಗಲಿದೆ.

ಬೊಮ್ಮಾಯಿ ಹೇಳಿದ್ದೇನು?: ಡಿಕೆ ಶಿವಕುಮಾರ್‌ ಮಾಡಿರುವ ತಪ್ಪು ಮುಚ್ಚಿಕೊಳ್ಳಲು ಬಿಜೆಪಿ ಮೇಲೆ ಆರೋಪ ಮಾಡುತ್ತಿದ್ದಾರೆ. ಅವರ ನಾಮಪತ್ರ ಎಲ್ಲವೂ ಕಾನೂನು ಪ್ರಕಾರ ಇದ್ದರೆ ಯಾಕೆ ಭಯಪಡಬೇಕು? ರಾಜಕೀಯವಾಗಿ ಕಾಂಗ್ರೆಸ್‌ನವರಲ್ಲಿ ಎಷ್ಟು ಅಸ್ಥಿರತೆ ಇದೆ ಎನ್ನುವುದು ಇದರಲ್ಲಿ ತೋರಿಸುತ್ತದೆ. ನಾಮಪತ್ರ ತಿರಸ್ಕರಿಸುವುದು ಬಿಜೆಪಿಯದ್ದಲ್ಲ. ಚುನಾವಣಾ ಆಯೋಗ ಈ ಕೆಲಸ ಮಾಡುತ್ತದೆ. ಆಂತರಿಕ ಭಯದ ಹಿನ್ನೆಲೆಯಲ್ಲಿ ಡಿಕೆ ಸುರೇಶ್‌ ನಾಮಪತ್ರ ಸಲ್ಲಿಸಿದ್ದಾರೆ.  

Advertisement

ಸಿಟಿ ರವಿ ಹೇಳಿದ್ದೇನು? :ಕನಕಪುರದಲ್ಲಿ ದೊಡ್ಡಣ್ಣ-ದೊಡ್ಡಣ್ಣ ಯಾರೇ ನಿಂತರು ಎದುರಿಸುತ್ತೇವೆ. ಕುತಂತ್ರದಲ್ಲಿ ಅವರು ಎಕ್ಸ್‌ಪರ್ಟ್‌. ನಾವು ಮಾಡುವ ಅಗತ್ಯವೇ ಇಲ್ಲ. ಕುತಂತ್ರ ಮಾಡಲು ಕಾಂಗ್ರೆಸ್ ಪಕ್ಷದಲ್ಲಿ ಬಹಳ ಜನ ಇದ್ದಾರೆ. ಅವರು ನಮ್ಮ ಬಗ್ಗೆ ಭಯ ಪಡುವುದು ಬೇಡ. ಬಹುಶಃ ಅವರಿಗೆ ಯಾವ ಭಯ ಆಗುತ್ತಿದೆಯೋ ಗೊತ್ತಿಲ್ಲ. ಅಲ್ಲೊಂದು ಇಲ್ಲೊಂದು ದಾಖಲೆ ಸಲ್ಲಿಸಿ ನಾಮಪತ್ರ ತಿರಸ್ಕೃತವಾಗುವ ಭಯ ಕಾಡುತ್ತಿದೆಯೋ ಏನೋ?

ಒಟ್ಟಾರೆ ಕನಕಪುರ ರಣರಂಗದಲ್ಲಿ ಡಿ.ಕೆ.ಸಹೋದರರು ತೊಡೆತಟ್ಟಿ ನಿಂತಿದ್ದು ಕೊನೆಗೆ ಕ್ಷಣದಲ್ಲಿ ಯಾರು ಉಳಿಯುತ್ತಾರೆ ಎಂಬುದು ಕುತೂಹಲಕರವಾಗಿದೆ.

Advertisement

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ರೈತರು ಬೆಳೆ ವಿಮೆ ಮಾಡಿಸುವುದರಿಂದ ಅತಿವೃಷ್ಟಿ, ಅನಾವೃಷ್ಟಿ ನಷ್ಟ ಪರಿಹಾರ ಸಿಗಲಿದೆ
July 8, 2025
10:30 PM
by: The Rural Mirror ಸುದ್ದಿಜಾಲ
ಮಕ್ಕಳ ಪುಟ | ನಿಮ್ಮ ಚಿತ್ರ-ನಮ್ಮ ಬೆಳಕು | ಮಯೂರ.ಕೆ
July 8, 2025
8:44 PM
by: The Rural Mirror ಸುದ್ದಿಜಾಲ
ನಾಳೆ ಭಾರತ್ ಬಂದ್ | ಭಾರತ್‌ ಬಂದ್‌ ಏಕೆ..?
July 8, 2025
8:15 PM
by: The Rural Mirror ಸುದ್ದಿಜಾಲ
ಗರ್ಭ ಸಂಸ್ಕಾರ ಎಂದರೇನು..? ಉತ್ತಮ ಸಮಾಜ ನಿರ್ಮಾಣ ಸಾಧ್ಯವೇ….?
July 8, 2025
8:01 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror

Join Our Group