ಕರ್ನಾಟಕದ ಹೆಮ್ಮೆ.. ನಂದಿನಿಯೇ ಬೆಸ್ಟ್ ಎಂದ ರಾಹುಲ್ ಗಾಂಧಿ

April 17, 2023
11:09 AM

ಚುನಾವಣೆ ಹೊತ್ತಲ್ಲಿ ಅಮುಲ್ ಮತ್ತು ನಂದಿನಿ ವಿಲೀನ ವಿವಾದ ಕಾವು ಪಡೆದಿದ್ದ ಬೆನ್ನಲ್ಲೇ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಬೆಂಗಳೂರಿನ ನಂದಿನಿ ಔಟ್‌ಲೆಟ್‌ನಲ್ಲಿ ನಂದಿನಿ ಐಸ್‌ಕ್ರೀಮ್ ಹಾಗೂ ಸಿಹಿಯನ್ನು ಸೇವಿಸಿ ಆನಂದಿಸಿದ್ದಾರೆ. ಅಲ್ಲದೇ ಈ ಕುರಿತು ತಮ್ಮ ಟ್ವಿಟ್ಟರ್  ಖಾತೆಯಲ್ಲಿ ಟ್ವೀಟ್ ಕೂಡಾ ಮಾಡಿದ್ದಾರೆ.

Advertisement
Advertisement

ಕೋಲಾರದಲ್ಲಿ ನಡೆದ ಜೈ ಭಾರತ್ ಕಾಂಗ್ರೆಸ್ ಸಮಾವೇಶದಲ್ಲಿ ಭಾಗವಹಿಸಿದ ಬಳಿಕ ಬೆಂಗಳೂರಿನ ಜೆಪಿ ನಗರದಲ್ಲಿ ಪೌರ ಕಾರ್ಮಿಕ ಹಾಗೂ ಬೀದಿ ಬದಿ ವ್ಯಾಪಾರಿಗಳೊಂದಿಗೆ ನಗರದ ಆರ್.ವಿ ಡೆಂಟಲ್ ಕಾಲೇಜ್‌ನಲ್ಲಿ ರಾಹುಲ್ ಗಾಂಧಿ ಸಂವಾದ ಏರ್ಪಡಿಸಲಾಗಿತ್ತು. ಈ ವೇಳೆ ರಾಹುಲ್ ಗಾಂಧಿ ಕೆಪಿಸಿಸಿ ಕಾರ್ಯಾಧ್ಯಕ್ಷ ಡಿಕೆ ಶಿವಕುಮಾರ್ ಹಾಗೂ ವೇಣುಗೋಪಾಲ್ ಅವರೊಂದಿಗೆ ನಂದಿನಿ ಐಸ್‌ಕ್ರೀಮ್ ಸವಿದು ಖುಷಿಪಟ್ಟಿದ್ದಾರೆ. ಬಳಿಕ ಡಿಕೆ ಶಿವಕುಮಾರ್ ಅವರು ಬೂತ್ ಮಾಲೀಕರಿಗೆ 1 ಸಾವಿರ ಹಣವನ್ನು ನೀಡಿದ್ದಾರೆ.

ನಂದಿನಿ-ಅಮುಲ್ ವಿವಾದ ವಿಚಾರವಾಗಿ ಟ್ವೀಟ್  ಮಾಡಿರುವ ರಾಹುಲ್ ಗಾಂಧಿ, ಕರ್ನಾಟಕದ ಹೆಮ್ಮೆ.. ನಂದಿನಿ ಅತ್ಯುತ್ತಮ ಎಂದು ಬಣ್ಣಿಸಿದ್ದಾರೆ. ಅಲ್ಲದೇ ತಾವು ಐಸ್‌ಕ್ರೀಮ್ ಸವಿಯುತ್ತಿರುವ ಫೋಟೋವನ್ನು ಹಂಚಿಕೊಳ್ಳುವ ಮೂಲಕ ಕೆಎಂಎಫ್ ಬ್ರ್ಯಾಂಡ್‌ ಬೆಂಬಲಿಸಿದ್ದಾರೆ.

ಐಸ್‌ಕ್ರೀಮ್ ಸವಿಯುತ್ತಿದ್ದ ವೇಳೆ ಬೂತ್ ಮಾಲೀಕರೊಂದಿಗೆ ಈ ನಂದಿನಿ ಉತ್ಪನ್ನಗಳು ಎಲ್ಲಿಂದ ಬರುತ್ತವೆ? ನೀವು ಎಷ್ಟು ವರ್ಷದಿಂದ ಈ ಕೆಲಸ ಮಾಡುತ್ತಿದ್ದೀರಿ ಎಂದು ಪ್ರಶ್ನಿಸಿದ್ದಾರೆ. ಇದಕ್ಕೆ ಬೂತ್ ಮಾಲೀಕ ಈ ಉತ್ಪನ್ನಗಳು ಬಳ್ಳಾರಿಯಿಂದ ಬರುತ್ತವೆ ಎಂದು ಉತ್ತರಿಸಿ ಬಳಿಕ ರಾಹುಲ್ ಗಾಂಧಿ ಅವರೊಂದಿಗೆ ಫೋಟೋವನ್ನೂ ಕ್ಲಿಕ್ಕಿಸಿಕೊಂಡಿದ್ದಾರೆ. ಸದ್ಯ ಈ ವಿಚಾರ ಎಲ್ಲೆಡೆ ಭಾರೀ ವೈರಲ್ ಆಗುತ್ತಿದೆ.

ಅಮುಲ್ ಕುಟುಂಬ ಬೆಂಗಳೂರು ನಗರಕ್ಕೆ ಹಾಲು ಮತ್ತು ಮೊಸರಿನ ರೂಪದಲ್ಲಿ ಹೊಸ ತಾಜಾತನವನ್ನು ತರುತ್ತಿದೆ. ಕ್ವಿಕ್ ಕಾಮರ್ಸ್ ಪ್ಲಾಟ್‌ಫಾರ್ಮ್ಗಳಲ್ಲಿ ಶೀಘ್ರದಲ್ಲೇ ಲಭ್ಯವಾಗಲಿದ್ದು, ಅವುಗಳನ್ನು ನಿಮ್ಮ ಮನೆ ಬಾಗಿಲಿಗೆ ಆರ್ಡರ್ ಮಾಡಬಹುದು ಎಂದು ಅಮುಲ್ ಕನ್ನಡ ಏಪ್ರಿಲ್ 5 ರಂದು ಟ್ವೀಟ್ ಮಾಡಿತ್ತು. ಈ ಕುರಿತು ಕರ್ನಾಟಕದಲ್ಲಿ ಭಾರೀ ವಿರೋಧ ವ್ಯಕ್ತವಾಗಿದ್ದು, ಕನ್ನಡಪರ ಸಂಘಗಳು ಈ ಕುರಿತು ಹೋರಾಟ ನಡೆಸುತ್ತಿವೆ. ಈ ಕ್ರಮವನ್ನು ಸಮರ್ಥಿಸಿಕೊಂಡ ಸರ್ಕಾರದ ವಿರುದ್ಧ ವಿಪಕ್ಷಗಳು ಹರಿಹಾಯ್ದಿದ್ದವು.

Advertisement
Advertisement

Advertisement

Advertisement
Advertisement

Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಕೇರಳ ಮತ್ತು ಅಸ್ಸಾಂನಲ್ಲಿ ಭಾರಿ ಮಳೆ, ದೆಹಲಿ ಮಾನ್ಸೂನ್ ವಿಳಂಬ
June 29, 2025
7:05 AM
by: The Rural Mirror ಸುದ್ದಿಜಾಲ
ಆಷಾಢ ಶುಕ್ರವಾರ ಈ 4 ತಪ್ಪುಗಳನ್ನು ಮಾಡಲೇಬೇಡಿ..!
June 29, 2025
6:20 AM
by: ದ ರೂರಲ್ ಮಿರರ್.ಕಾಂ
ರಸ್ತೆ ಗುಂಡಿಮುಚ್ಚಲು ಇಕೋಫಿಕ್ಸ್ ತಂತ್ರಜ್ಞಾನ | ಏನಿದು ತಂತ್ರಜ್ಞಾನ ? ಗ್ರಾಮೀಣ ಭಾಗಕ್ಕೂ ಸೂಕ್ತವೇ..?
June 29, 2025
6:07 AM
by: ದ ರೂರಲ್ ಮಿರರ್.ಕಾಂ
ಮುಂಗಾರು ಹಂಗಾಮಿನ ಬೆಳೆ ಸಮೀಕ್ಷೆ ಆಪ್‌ನಲ್ಲಿ ವಿವರ ದಾಖಲಿಸಲು ರೈತರಿಗೆ ಮನವಿ
June 28, 2025
9:16 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror

Join Our Group