ನಿಮ್ಮ ಮತಗಟ್ಟೆ ಯಾವುದು? ಮೊಬೈಲ್ ನಲ್ಲಿ ಚೆಕ್ ಮಾಡಿ : ಈ ಐಡಿಗಳು ಇದ್ರು ಓಟ್ ಮಾಡಬಹುದು

May 9, 2023
11:02 AM

ಮತದಾನಕ್ಕೆ ಇನ್ನು ಒಂದೇ ದಿನ ಬಾಕಿ  ಇದೆ. ಈ ಬಾರಿ ಮತ ಹಾಕಬೇಕು. ಆದರೆ ಮತಗಟ್ಟೆ  ಯಾವುದು ಅಂತ ತಿಳಿಯುತ್ತಿಲ್ಲ ಎಂಬ ಚಿಂತೆಯಲ್ಲಿ ನೀವಿದ್ದೀರಾ? ಹಾಗಾದ್ರೆ ನೀವು ಚಿಂತೆ ಮಾಡುವ ಅಗತ್ಯವೇ ಇಲ್ಲ. ನೀವು ಮನಸ್ಸು ಮಾಡಿದರೆ ಕೆಲ ನಿಮಿಷದಲ್ಲೇ ನಿಮ್ಮ ಮೊಬೈಲ್‌ನಲ್ಲೇ ಮತಗಟ್ಟೆಯ ವಿವರವನ್ನು ತಿಳಿಯಬಹುದು.

Advertisement
Advertisement
Advertisement

ಮತದಾರರು ಮೂರು ರೀತಿಯಲ್ಲಿ ಮತಗಟ್ಟೆಯನ್ನು ವಿವರವನ್ನು ಪಡೆದುಕೊಳ್ಳಬಹುದು. ಒಂದನೇಯದು ಮೊಬೈಲ್‌ ಅಪ್ಲಿಕೇಶನ್‌, ಎರಡನೇಯದ್ದು ವೆಬ್‌ಸೈಟ್‌, ಮೂರನೇಯದ್ದು ಕಾಲ್‌ ಸೆಂಟರ್‌ಗೆ ಕರೆ ಮಾಡುವ ಮೂಲಕ ಮತಗಟ್ಟೆಯ ವಿವರವನ್ನು ತಿಳಿದುಕೊಳ್ಳಬಹುದು.

Advertisement

1. ಚುನಾವಣಾ ಅಪ್ಲಿಕೇಶನ್‌
ಚುನಾವಣಾ ಆಯೋಗ ʼಚುನಾವಣಾʼ ಹೆಸರಿನಲ್ಲಿ ಆಂಡ್ರಾಯ್ಡ್‌ ಮತ್ತು ಐಒಎಸ್‌ ಅಪ್ಲಿಕೇಶನ್‌ ಬಿಡುಗಡೆ ಮಾಡಿದೆ. ಈ ಅಪ್ಲಿಕೇಶನ್‌ ಡೌನ್‌ಲೋಡ್‌ ಮಾಡಿ ಓಪನ್‌ ಮಾಡಿದಾಗ Search by Epic No ಅಥವಾ Search by Name ಎಂಬ ಎರಡು ಆಯ್ಕೆ ಸಿಗುತ್ತದೆ.

Advertisement

Search by Epic No ಆಯ್ಕೆ ಮಾಡಿದರೆ ವೋಟರ್‌ ಐಡಿ ನಂಬರ್‌ ಹಾಕಿದರೆ ಸಾಕಾಗುತ್ತದೆ. Search by Name ಆಯ್ಕೆ ಆರಿಸಿದರೆ ಹೆಸರು, ಜಿಲ್ಲೆ, ವಿಧಾನಸಭಾ ಕ್ಷೇತ್ರ, ಸಂಬಂಧಿಯ ಹೆಸರು, ಲಿಂಗ ಆಯ್ಕೆ ಮಾಡಿ ಹುಡುಕಬಹುದು. ಇಷ್ಟೇ ಅಲ್ಲದೇ ಜಿಪಿಎಸ್‌ ಆನ್‌ ಮಾಡಿ ಲೊಕೇಶನ್‌ ಮೂಲಕವೂ ಮತಗಟ್ಟೆಯನ್ನು ಹುಡುಕಬಹುದು.

2. ವೆಬ್‌ಸೈಟ್‌
ಅಪ್ಲಿಕೇಶನ್‌ ಡೌನ್‌ಲೋಡ್‌ ಮಾಡಲು ಸಾಧ್ಯವಾಗದವರು ವೆಬ್‌ಸೈಟ್‌ ಮೂಲಕ ಮತಗಟ್ಟೆಯನ್ನು ಹುಡುಕಬಹುದು. ಆಪ್‌ನಲ್ಲಿ ಹೇಗೆ ವೈಯಕ್ತಿಕ ಡೇಟಾ ಎಂಟ್ರಿ ಮಾಡುತ್ತಿರೋ ಅದೇ ರೀತಿಯ ವಿವರಗಳನ್ನು ಸಲ್ಲಿಸಿ ಮತಗಟ್ಟೆಯ ಮಾಹಿತಿಯನ್ನು ಪಡೆಯಬಹುದು.

Advertisement

 ಚುನಾವಣಾ ಆಯೋಗದ ವೆಬ್‌ಸೈಟ್‌ ಕ್ಲಿಕ್‌ ಮಾಡಿ: www.kgis.ksrsac.in

Advertisement

3. ದೂರವಾಣಿ
ಆಪ್‌ ಮತ್ತು ವೆಬ್‌ಸೈಟ್‌ ಮೂಲಕ ಮತಗಟ್ಟೆಯ ಮಾಹಿತಿ ಪಡೆಯಲು ಸಾಧ್ಯವಾಗದವರು 1950 ಅಥವಾ 180042 551950 ನಂಬರ್‌ಗೆ ಕರೆ ಮಾಡಿ ಮತಗಟ್ಟೆಯ ವಿವರ ತಿಳಿದುಕೊಳ್ಳಬಹುದು.

ಮೊಬೈಲ್‌ ಅಪ್ಲಿಕೇಶನ್‌ ಮತ್ತು ವೆಬ್‌ಸೈಟ್‌ನಲ್ಲಿ ನಿಮ್ಮ ಕ್ಷೇತ್ರದ ಅಭ್ಯರ್ಥಿಯ ವಿವರ, ಪಾರ್ಕಿಂಗ್‌ ಸ್ಥಳ, ಗಾಲಿ ಕುರ್ಚಿ ನೋಂದಣಿ, ಸಮೀಪದ ಮತದಾನ ಕೇಂದ್ರಗಳು, ಆರೋಗ್ಯ ಸೌಲಭ್ಯಗಳನ್ನು ಸುಲಭವಾಗಿ ತಿಳಿಯಬಹುದು.

Advertisement

ವೋಟರ್‌ ಐಡಿ ಇಲ್ಲದಿದ್ದರೆ ಏನು?
ಚುನಾವಣೆ ಸಮಯದಲ್ಲಿ ಬಳಕೆಯಾಗುವ ಮತದಾರರ ಗುರುತಿನ ಚೀಟಿ ಅತ್ಯಂತ ಪ್ರಮುಖವಾದ ದಾಖಲೆ. ಒಂದು ವೇಳೆ ವೋಟರ್‌ ಐಡಿ ಇಲ್ಲದೇ ಇದ್ದರೂ ನೀವು ಚಿಂತೆ ಮಾಡಬೇಕಾದ ಅಗತ್ಯವಿಲ್ಲ. ಪಾಸ್‌ಪೋರ್ಟ್, ಡ್ರೈವಿಂಗ್ ಲೈಸೆನ್ಸ್‌, ಸರ್ಕಾರಿ ನೌಕರರ ಗುರುತಿನ ಚೀಟಿ, ಫೋಟೋ ಸಹಿತ ಇರುವ ಪಾಸ್‌ಬುಕ್, ಪಾನ್ ಕಾರ್ಡ್, ನರೇಗಾ ಜಾಬ್ ಕಾರ್ಡ್, ಸ್ಮಾರ್ಟ್‌ ಕಾರ್ಡ್, ಕಾರ್ಮಿಕ ಇಲಾಖೆ ಆರೋಗ್ಯ ವಿಮೆ ಕಾರ್ಡ್, ಪಿಂಚಣಿ ದಾಖಲೆ,ಆಧಾರ್ ಕಾರ್ಡ್‌ ಬಳಕೆ ಮಾಡಿಯೂ ಮತ ಹಾಕಬಹುದು.

ಪ್ರತಿ ಚುನಾವಣೆಯಲ್ಲಿ ಗ್ರಾಮೀಣ ಭಾಗದಲ್ಲಿ ಹೆಚ್ಚಿನ ಮತದಾನ ನಡೆದರೆ ನಗರ ಪ್ರದೇಶದಲ್ಲಿ ಮತದಾನ ಪ್ರಮಾಣ ಕಡಿಮೆ ಇರುತ್ತದೆ. ಈ ಕಾರಣಕ್ಕೆ ಚುನಾವಣಾ ಆಯೋಗ ಮತದಾರರಿಗೆ ಸುಲಭವಾಗಿ ಮತಗಟ್ಟೆಯ ವಿವರ ತಿಳಿದುಕೊಳ್ಳಲು ಉತ್ತಮ ವ್ಯವಸ್ಥೆ ಮಾಡಿದೆ.

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು[email protected] ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಸಂಸ್ಕೃತ ಕೈಬಿಟ್ಟರೆ ಕನ್ನಡಕ್ಕೇ ನಷ್ಟ  | ಹಿರಿಯ ಸಾಹಿತಿ ಡಾ. ಎಸ್.ಎಲ್.ಭೈರಪ್ಪ ಅಭಿಪ್ರಾಯ
January 12, 2025
9:20 PM
by: The Rural Mirror ಸುದ್ದಿಜಾಲ
ದೇಶದಲ್ಲೇ ಅಪರೂಪವಾದ ಜೀವ ವೈವಿಧ್ಯತೆ ಉತ್ತರ ಕನ್ನಡ ಜಿಲ್ಲೆಯಲ್ಲಿದೆ
January 12, 2025
9:08 PM
by: The Rural Mirror ಸುದ್ದಿಜಾಲ
ಕಾಡಾನೆಗಳ ಹಾವಳಿ ತಪ್ಪಿಸಲು ರೈಲ್ವೆ ಬ್ಯಾರಿಕೇಡ್
January 12, 2025
9:04 PM
by: The Rural Mirror ಸುದ್ದಿಜಾಲ
 ತುಮಕೂರಿನಲ್ಲಿ ಸ್ವದೇಶಿ ಮೇಳ | ಸ್ವದೇಶಿ ಉತ್ಪನ್ನಗಳ ಬಳಕೆ ಬಗ್ಗೆ ಜಾಗೃತಿ
January 12, 2025
9:00 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror