ಚುನಾವಣೆಗೆ ಇನ್ನು ಒಂದು ದಿನ ಮಾತ್ರ ಬಾಕಿ ಇದೆ. ಆದರೆ ಪೊಲೀಸರು ಮಾತ್ರ ಯಾವುದೇ ಅಹಿತಕರ ಘಟನೆ ನಡೆಯದಂತೆ ಮಾಡಲು ಏನೇನು ಬೇಕೋ ಅದಕ್ಕೆ ತಯಾರಿ ಮಾಡ್ಕೊಂಡಿದ್ದಾರೆ. ಮೊದಲ ಹಂತ ಅಂದರೆ ಮದ್ಯ ಮಾರಾಟ ನಿಷೇಧ.

ರಾಜ್ಯದಲ್ಲಿ ವಿಧಾನಸಭಾ ಚುನಾವಣಾ ಅಖಾಡ ರಂಗೇರಿದೆ. ಇಂದಿನಿಂದ ಮುಂದಿನ 3 ದಿನಗಳ ಕಾಲ ಮದ್ಯ ಮಾರಾಟ ನಿಷೇಧ ಮಾಡಿ ನಿರ್ಧಾರ ಮಾಡಲಾಗಿದೆ.
ಚುನಾವಣೆಗೆ ಯಾವುದೇ ಅಡೆತಡೆಗಳು ಆಗದಂತೆ ಚುನಾವಣಾ ಆಯೋಗ ಮದ್ಯದ ಅಂಗಡಿಗಳ ಮೇಲೆ ಹದ್ದಿನ ಕಣ್ಣಿಟ್ಟಿದ್ದು, ಎಲೆಕ್ಷನ್ ಮುಗಿಯುವ ತನಕ ಡ್ರೈ ಡೇ ಆಚರಿಸಲು ಸೂಚನೆ ನೀಡಲಾಗಿದೆ.

ಮೇ 8ರ ಸಂಜೆ 6 ಗಂಟೆಯಿಂದ ಮೇ 11 ರ ಬೆಳಗ್ಗೆ 6 ಗಂಟೆಯವರೆಗೂ ಮದ್ಯ ಮಾರಾಟಕ್ಕೆ ಬ್ರೇಕ್ ಹಾಕಲಾಗಿದೆ. ಈ ಕುರಿತಾಗಿ ಒಂದು ವಾರದ ಹಿಂದೆಯೇ ನೋಟಿಸ್ ನೀಡಲಾಗಿತ್ತು. ಇಂದು 6 ಗಂಟೆಯ ನಂತರ ಮದ್ಯದಂಗಡಿಗಳನ್ನ ಸಂಪೂರ್ಣವಾಗಿ ಮುಚ್ಚಲಾಗಿದೆ.
ರಾಜ್ಯದ 11 ಸಾವಿರ ಮದ್ಯದಂಗಡಿಗಳು ಕ್ಲೋಸ್ ಮಾಡಿದ್ದೇವೆ. ಇದರಿಂದ ಪ್ರತಿ ಬಾರ್ ಮಾಲೀಕರಿಗೂ ಒಂದೂವರೆ ಲಕ್ಷದಷ್ಟು ನಷ್ಟವಾಗಲಿದೆ. ಚುನಾವಣೆ ಸಂಹಿತೆ ಜಾರಿಯಾದ ಬಳಿಕ ನಾವು ನಷ್ಟದಲ್ಲಿದ್ದೇವೆ ಎಂದಿದ್ದಾರೆ.
ಇಂದಿನಿಂದ ಮದ್ಯದಂಗಡಿಗಳು ಮೂರು ದಿನ ಬಂದ್ ಆಗಲಿದ್ದು, ಮದ್ಯಪ್ರಿಯರು ಮಾತ್ರ ಸ್ಟಾಕ್ ಇಟ್ಟುಕೊಳ್ಳುವಂತಾಗಿದೆ. ಆದರೆ ಚುನಾವಣಾ ದೃಷ್ಟಿಯಿಂದ ನಿಷೇಧ ಮಾಡಿರುವ ಕ್ಷಮ ಸ್ವಾಗತಾರ್ಹ.
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel