Advertisement
MIRROR FOCUS

ಬರಗಾಲದಿಂದ ತತ್ತರಿಸಿದ ಕರ್ನಾಟಕದ ರೈತರು | ಸಂಕಷ್ಟಕ್ಕೆ ಈ ವರ್ಷ 456 ರೈತರು ಆತ್ಮಹತ್ಯೆ | ಏರುತ್ತಿದೆ ನಿತ್ಯ ವಸ್ತುಗಳ ಬೆಲೆ

Share

ಕರ್ನಾಟಕವು(Karnataka) ಈ ವರ್ಷ ತೀವ್ರ ಬರಗಾಲವನ್ನು(drought ) ಎದುರಿಸುತ್ತಿದೆ. ಬೆಳೆದ ಬೆಳೆಗಳಿಗೆ ನೀರಿನ ವ್ಯವಸ್ಥೆ ಇಲ್ಲದೆ ಒಣಗಿ(yields destroyed) ಕೈಗೆ ಬಾರದಾಗಿವೆ. ಇಳುವರಿ ಇಲ್ಲದೆ ಅಸ್ತಿತ್ವವೇ ನಾಶವಾಗಿ ರೈತರು(Farmer) ತೀವ್ರ ಸಂಕಷ್ಟದಲ್ಲಿದ್ದಾರೆ. ದುರಂತವೆಂದರೆ, ಈ ವರ್ಷ ಇಲ್ಲಿಯವರೆಗೆ 456 ರೈತರು ಸಾಲದ ಹೊರೆಗೆ ಸಿಲುಕಿ ತಮ್ಮ ಜೀವನವನ್ನು ಅಂತ್ಯಗೊಳಿಸಿದ್ದಾರೆ. ಬರಗಾಲ ದಾರುಣ ಪರಿಸ್ಥಿತಿಯನ್ನು ತಂದೊಡ್ಡಿದೆ.

ಹಾವೇರಿ, ಮೈಸೂರು, ಬೆಳಗಾವಿ, ಚಿಕ್ಕಮಗಳೂರು, ಕಲಬುರಗಿ, ಯಾದಗಿರಿ ಜಿಲ್ಲೆಗಳಲ್ಲಿ ರೈತರ ಆತ್ಮಹತ್ಯೆಗಳು ಹೆಚ್ಚಾಗುತ್ತಿದ್ದು, ರಾಜ್ಯ ಸರ್ಕಾರದ ಅಂಕಿಅಂಶಗಳು ಕೃಷಿಯಿಂದ ಹತಾಶೆಗೊಂಡಿರುವ ರೈತರ ಭಯಾನಕ ಕಥೆಯನ್ನು ಬಹಿರಂಗಪಡಿಸುತ್ತವೆ. ಹಿಂದಿನ ವರ್ಷದಲ್ಲಿ (ಏಪ್ರಿಲ್ 1, 2022, ಮಾರ್ಚ್ 31, 2023), 968 ರೈತರು ತಮ್ಮ ಜೀವನವನ್ನು ಕೊನೆಗೊಳಿಸಿದ್ದು, ಈ ಬಾರಿ ಸಾವಿನ ಸಂಖ್ಯೆ ಇನ್ನೂ ಹೆಚ್ಚಾಗಿದೆ. ಈ ಪೈಕಿ 849 ಪ್ರಕರಣಗಳನ್ನು ಪರಿಹಾರಕ್ಕೆ ಅರ್ಹವೆಂದು ಪರಿಗಣಿಸಲಾಗಿದೆ. ಸರ್ಕಾರದ ಪ್ರಕಾರ 2022-23ರ ಅವಧಿಯಲ್ಲಿ 849 ಸಂತ್ರಸ್ತ ಕುಟುಂಬಗಳಿಗೆ ಪರಿಹಾರ ವಿತರಣೆಯಾಗಿದೆ. ಈ ಅವಧಿಯಲ್ಲಿ ಒಟ್ಟು 354 ಪ್ರಕರಣಗಳಲ್ಲಿ 321 ಅರ್ಹ ಪ್ರಕರಣಗಳಿಗೆ ಉಪವಿಭಾಗಾಧಿಕಾರಿಗಳ ಸಮಿತಿ ಪರಿಹಾರ ನೀಡಿದೆ.

ಆತಂಕಕಾರಿ ವಿಷಯವೆಂದರೆ ಶಿವಮೊಗ್ಗ, ಧಾರವಾಡ, ಹಾವೇರಿ, ಬೆಳಗಾವಿ, ಬೀದರ್, ಚಿಕ್ಕಮಗಳೂರು, ಕಲಬುರಗಿ, ಮೈಸೂರು ಮತ್ತು ಯಾದಗಿರಿ ಜಿಲ್ಲೆಗಳಲ್ಲಿ ಕಳೆದ ವರ್ಷದಲ್ಲಿ ಹೆಚ್ಚಿನ ಸಂಖ್ಯೆಯ ರೈತರು ಸಾವನ್ನಪ್ಪಿದ್ದಾರೆ. ಆದಾಗ್ಯೂ, ಚಾಮರಾಜನಗರ, ಕೊಡಗು, ಕೋಲಾರ, ರಾಮನಗರ, ದಕ್ಷಿಣ ಕನ್ನಡ, ಉಡುಪಿ, ಬೆಂಗಳೂರು ಗ್ರಾಮಾಂತರ ಮತ್ತು ಉಡುಪಿ ಗ್ರಾಮಾಂತರ ಜಿಲ್ಲೆಗಳಲ್ಲಿ ಅಲ್ಲಿಗೆ ಹೋಲಿಸಿದ್ರೆ ಕಡಿಮೆ ಪ್ರಕರಣಗಳಿವೆ. ದಕ್ಷಿಣ ಕನ್ನಡದಲ್ಲಿ ಮೂರು ರೈತರ ಸಾವುಗಳು ವರದಿಯಾಗಿದ್ದು, ಬೆಂಗಳೂರು ಗ್ರಾಮಾಂತರ, ಉಡುಪಿ ಮತ್ತು ರಾಮನಗರದಲ್ಲಿ ಯಾವುದೇ ವರದಿಯಾಗಿಲ್ಲ. ಚಾಮರಾಜನಗರ ಮತ್ತು ಕೋಲಾರದಲ್ಲಿ ಕ್ರಮವಾಗಿ ಎರಡು ಮತ್ತು ಮೂರು ಸಾವುಗಳು ವರದಿಯಾಗಿವೆ.

ಕಾಡುತ್ತಿರುವ ಮಳೆಯ ಕೊರತೆ : ಈ ಬಾರಿ ಮುಂಗಾಋಉ ಕೈಕೊಟ್ಟಿರುವ ಹಿನ್ನೆಲೆ ಈ ಬಾರಿಗೆ ಭೀಕರ ಬರಗಾಲವು ರೈತರ ಬೆಳೆಗಳಿಗೆ ಅಡ್ಡಿಪಡಿಸಿದೆ. ಈ ಬಾರಿ ಭಾರಿ ಮಳೆಯ ಕೊರತೆಯನ್ನು ಉಂಟುಮಾಡಿದೆ. ಕಳೆದ ವರ್ಷ ರಾಜ್ಯದಲ್ಲಿ ಜೂನ್‌ನಿಂದ ಸೆಪ್ಟೆಂಬರ್‌ವರೆಗೆ ಸರಾಸರಿ 839 ಮಿ.ಮೀ ಮಳೆಯಾಗುವ ಬದಲು ಸರಾಸರಿ 633 ಮಿ.ಮೀ. ಅಕ್ಟೋಬರ್‌ನಿಂದ ಡಿಸೆಂಬರ್ ಮಧ್ಯದವರೆಗೆ ಈಶಾನ್ಯ ಮಾನ್ಸೂನ್ ಸಾಮಾನ್ಯವಾಗಿ 188 ಮಿಮೀ ಮಳೆಯ ವಿರುದ್ಧ ಕೇವಲ 113 ಮಿಮೀ ಮಳೆಯನ್ನು ದಾಖಲಿಸಿದೆ. ಪ್ರಸ್ತುತ 31 ಜಿಲ್ಲೆಗಳಲ್ಲಿ 24 ಜಿಲ್ಲೆಗಳಲ್ಲಿ ಮಳೆಯ ಕೊರತೆ ಬಂದಿದೆ. ಇದು ಕೃಷಿ ಬಿಕ್ಕಟ್ಟನ್ನು ಉಲ್ಬಣಗೊಳಿಸುತ್ತಿದೆ. ಕೃಷಿ ಇಲಾಖೆಯ ಪ್ರಕಾರ, ಈ ವರ್ಷ ನಿರೀಕ್ಷಿತ 148 ಲಕ್ಷ ಮೆಟ್ರಿಕ್ ಟನ್ ಆಹಾರ ಧಾನ್ಯ ಬೆಳೆ ಬರದಿಂದಾಗಿ 60 ಲಕ್ಷ ಮೆಟ್ರಿಕ್ ಟನ್‌ಗಳಿಗೆ ಭಾರಿ ಕುಸಿತವನ್ನು ಕಾಣಬಹುದು. ರಾಜ್ಯದ ಹಲವಾರು ಭಾಗಗಳಲ್ಲಿ ಬಿತ್ತನೆ ಚಟುವಟಿಕೆಗಳು ಕುಂಠಿತಗೊಂಡಿವೆ, ಇದು ಬೆಳೆ ಒಣಗಳು ಹಾಗೂ ಕಡಿಮೆ ಇಳುವರಿಯನ್ನು ಹೊಂದಲು ಕಾರಣವಾಗಿದೆ.

ಬೆಲೆಗಳು ಗಗನಕ್ಕೇರುತ್ತಿದೆ:  ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿದ್ದು, ಪ್ರತಿ ಕ್ವಿಂಟಲ್‌ಗೆ 7,000 ರೂ.ಗೆ ಮಾರಾಟವಾಗುತ್ತಿದ್ದ ಕಾಳು ಬೇಳೆ ಈಗ 12,000 ರೂ.ಗೆ ತಲುಪಿದೆ. ಬೇಳೆಕಾಳು ಬೆಲೆ ಕೆ.ಜಿ.ಗೆ 70 ರಿಂದ 120 ರೂ.ಗೆ ಏರುವ ಮೂಲಕ ಜನಸಾಮಾನ್ಯರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಇತರ ಪ್ರಮುಖ ವಸ್ತುಗಳು ಸಹ ಬೆಲೆ ಏರಿಕೆಗೆ ಸಾಕ್ಷಿಯಾಗಿದ್ದು, ಮುಂಬರುವ ದಿನಗಳಲ್ಲಿ ಮತ್ತಷ್ಟು ಹೆಚ್ಚಳವಾಗುವ ಸಾಧ್ಯತೆ ಇದೆ. ಸಿಯಾಸಟ್ ಡಾಟ್ ಕಾಮ್‌ನೊಂದಿಗೆ ಮಾತನಾಡಿದ ಫೆಡರೇಶನ್ ಆಫ್ ಕರ್ನಾಟಕ ಚೇಂಬರ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರಿ (ಎಫ್‌ಕೆಸಿಸಿಐ) ಅಧ್ಯಕ್ಷ ರಮೇಶ್ ಚಂದ್ರ ಲಹೋಟಿ, ಅಕ್ಕಿ ಮತ್ತು ಬೇಳೆಕಾಳುಗಳಲ್ಲಿ ಶೇಕಡಾ 30 ರಿಂದ 40 ರಷ್ಟು ಬೆಲೆ ವ್ಯತ್ಯಾಸದ ಬಗ್ಗೆ ಮುನ್ಸೂಚನೆ ನೀಡಿದ್ದಾರೆ. ಹೊಸ ಬೆಳೆಗಳು ಮಾರುಕಟ್ಟೆಗೆ ಬರುವವರೆಗೂ ಬೆಲೆ ಏರಿಕೆ ಮುಂದುವರಿಯುತ್ತದೆ ಎಂದು ಅವರು ಭವಿಷ್ಯ ನುಡಿದಿದ್ದಾರೆ. ಹೋಟೆಲ್‌ಗಳು ಮತ್ತು ರೆಸ್ಟೋರೆಂಟ್‌ಗಳು ಆಹಾರದ ಬೆಲೆಗಳನ್ನು ಮತ್ತಷ್ಟು ಹೆಚ್ಚಿಸುವ ಸಾಧ್ಯತೆಯನ್ನು ಲಹೋಟಿ ಹೇಳಿದ್ದಾರೆ. ಈ ಸಂಪೂರ್ಣ ಬಿಕ್ಕಟ್ಟಿಗೆ ಈಗ ಇರುವ ಬರಗಾಲವೇ ಕಾರಣ, ಅಲ್ಲದೆ ಮುಂದಿನ ವರ್ಷದ ಮಳೆಯಾಗುವವರೆಗೆ ಬೇರೆ ಯಾವುದೇ ಆಯ್ಕೆಯಿಲ್ಲ ಎಂದರು

ಸುದ್ದಿಮೂಲ : ಪ್ರಜಾವಾಣಿ

Karnataka is grappling with an acute drought this year, leaving crops unviable, existing yields destroyed, and farmers in severe distress. Tragically, the dire situation has led 456 farmers, burdened by the weight of debt, to end their lives this year so far.

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

Published by
The Rural Mirror ಸುದ್ದಿಜಾಲ

Recent Posts

ಮಿಜೋರಾಂನಲ್ಲಿ ಅಕ್ರಮವಾಗಿ ಅಡಿಕೆ ಸಾಗಾಟಕ್ಕೆ ತಡೆ – ₹54.88 ಲಕ್ಷ ಮೌಲ್ಯದ 98 ಚೀಲ ವಶ

ಮಿಜೋರಾಂದ ಚಾಂಫೈ ಜಿಲ್ಲೆಯಲ್ಲಿ ₹54.88 ಲಕ್ಷ ಮೌಲ್ಯದ 98 ಚೀಲ ಅಡಿಕೆ ವಶಪಡಿಸಲಾಗಿದೆ.…

8 hours ago

ಹವಾಮಾನ ವರದಿ | 18-04-2026 | ರಾಜ್ಯದ ಬಹುತೇಕ ಕಡೆ ಸೆಖೆ ಮುಂದುವರಿಕೆ – ಏಪ್ರಿಲ್ 19 ರಿಂದ ಕರಾವಳಿಯಲ್ಲಿ ಮಳೆ ಆರಂಭ!

ಕರಾವಳಿ ಮತ್ತು ಮಲೆನಾಡು ಜಿಲ್ಲೆಗಳಲ್ಲಿ ಏಪ್ರಿಲ್ 19ರಿಂದ ಮಳೆ ಆರಂಭವಾಗುವ ಲಕ್ಷಣಗಳು ಗೋಚರಿಸುತ್ತಿವೆ.…

17 hours ago

ಗ್ರಾಮೀಣ ಮೌಲ್ಯಗಳು ಮತ್ತು ನಗರ ಜೀವನ – ಸಮತೋಲನವೇ ನಿಜವಾದ ಮಾರ್ಗ!

ಗ್ರಾಮ ಮತ್ತು ನಗರ ಜೀವನ ಪರಸ್ಪರ ವಿರುದ್ಧವಲ್ಲ, ಪೂರಕ ಶಕ್ತಿಗಳು. ಸಮತೋಲನವೇ ಸಮೃದ್ಧ…

23 hours ago

ದೇಶಾದ್ಯಂತ ಹವಾಮಾನದಲ್ಲಿ ಬದಲಾವಣೆ..! 13 ರಾಜ್ಯಗಳಲ್ಲಿ ಮಳೆ-ಚಂಡಮಾರುತ ಎಚ್ಚರಿಕೆ, ಉತ್ತರ ಭಾರತದಲ್ಲಿ 40°C ದಾಟಿದ ಉಷ್ಣತೆ

ದೇಶದಲ್ಲಿ ಹವಾಮಾನ ತೀವ್ರ ಬದಲಾವಣೆ ಕಂಡುಬರುತ್ತಿದ್ದು, 13 ರಾಜ್ಯಗಳಲ್ಲಿ ಮಳೆ ಮತ್ತು ಗಾಳಿ…

23 hours ago

ಅಂಜನಾದ್ರಿ ಬೆಟ್ಟ ಏರುವವರಿಗೆ ಸಮಯ ನಿಗದಿ .! ಮಧ್ಯಾಹ್ನ 11ರಿಂದ 4ರವರೆಗೆ ಪ್ರವೇಶ ಬ್ಯಾನ್

ಅಂಜನಾದ್ರಿ ಬೆಟ್ಟ ಏರಲು ಮಧ್ಯಾಹ್ನ 11ರಿಂದ ಸಂಜೆ 4ರವರೆಗೆ ನಿರ್ಬಂಧ ವಿಧಿಸಲಾಗಿದೆ. ಬಿಸಿಲಿನ…

23 hours ago

ಕಲಬುರಗಿಯಲ್ಲಿ 43.2°C ತಾಪಮಾನ ದಾಖಲು..! ರಾಜ್ಯದಲ್ಲಿ ಬಿಸಿ ಏರಿಕೆ – ಮುಂದಿನ 5 ದಿನ ಎಚ್ಚರಿಕೆ

ರಾಜ್ಯದಲ್ಲಿ ಉಷ್ಣಾಂಶ ಏರಿಕೆ ಮುಂದುವರಿದಿದ್ದು, ಕಲಬುರಗಿಯಲ್ಲಿ 43.2°C ದಾಖಲಾಗಿದೆ. ಮುಂದಿನ ದಿನಗಳಲ್ಲಿ ಕರಾವಳಿಯಲ್ಲಿ…

23 hours ago