ಟವರುಗಳನ್ನು ತೆಗೆದುಹಾಕುವಂತೆ ಕೋರ್ಟ್ ಗೆ ಅರ್ಜಿ | ವೈಜ್ಞಾನಿಕ ಬೆಂಬಲ ಇಲ್ಲದೆ ಯಾವ ಕ್ರಮವೂ ಅಸಾಧ್ಯ |

April 3, 2023
4:14 PM

ಮೊಬೈಲ್ಫೋನ್ ಈಗಂತೂ ಎಲ್ಲರ ಜೀವನದ ಅವಿಭಾಜ್ಯ ಅಂಗವಾಗಿದೆ. ಮೊಬೈಲ್ಇಲ್ಲದೆಯೇ ಜಗತ್ತೇ ನಿಂತು ಹೋಗಿ ಬಿಡುತ್ತದೆ ಅನ್ನೋ ಅಷ್ಟರ ಮಟ್ಟಿಗೆ ಹೆಚ್ಚಿನ ತರಂಗಾಂತರವಿರುವ ಸಿಗ್ನಲ್ಗಳನ್ನು ಸ್ವೀಕರಿಸಿಲು ಮತ್ತು ಹೊರಸೂಸಲು ಸಾಧ್ಯವಿರುವಂತಹ ಮೊಬೈಲ್ ಫೋನ್ಗಳ ಮೇಲೆ ಜನ ಅವಲಂಬಿತವಾಗಿದ್ದಾರೆ. ವಿಕಿರಣಗಳು ಮನುಷ್ಯನಿಗೂ ಅಷ್ಟೇ ಮಾರಕವಾಗಿವೆ. ಸೆಲ್ಫೋನ್ಗಳು ಹೊರಸೂಸುವ ವಿಕಿರಣಗಳಿಂದ ದೇಹದ ವಿವಿಧ ಕೋಶಗಳು ಹಾನಿಗೊಳಗಾಗುತ್ತವೆ ಎಂಬ ಅಂಶವನ್ನುಈಗಾಗಲೇ ಹಲವಾರು ಅಧ್ಯಯನಗಳು ಸಾಬೀತು ಮಾಡಿವೆ. ಒಟ್ಟಾರೆ ಇವು ಮಾರಕವಾಗಿದೆ ಅಂತಾ ಗೊತ್ತಿದ್ದರೂ ಇವುಗಳ ಬಳಕೆ ಮಾತ್ರ ಹೆಚ್ಚುತ್ತಿದೆ.

ಸೆಲ್ಫೋನ್ ಟವರ್ಗಳನ್ನು ತೆಗೆದುಹಾಕುವಂತೆ ಕೋರ್ಟ್ಗೆ ಅರ್ಜಿ : ಮೊಬೈಲ್‌ ಟವರ್‌ಗಳು ವ್ಯಾಪಾಕ ಪರಿಣಾಮ ಬೀರುತ್ತವೆ, ಅವುಗಳನ್ನು ತೆಗೆದು ಹಾಕಿ ಅಂತಾ ಈಗಾಗಲೇ ಜನ ಕೋರ್ಟ್‌ ಮೇಟ್ಟಿಲೇರುತ್ತಿದ್ದಾರೆ. ಇತ್ತೀಚಿನ ಒಂದು ಘಟನೆಯಲ್ಲಿ ಅರ್ಜಿದಾರರೊಬ್ಬರು ಸೆಲ್‌ಫೋನ್ ಟವರ್‌ಗಳನ್ನು ತೆಗೆದುಹಾಕುವಂತೆ ಮದ್ರಾಸ್ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದಾರೆ.

ವಿಕಿರಣವು ಜೀವಿತಾವಧಿಯನ್ನು ಕಡಿಮೆ ಮಾಡುತ್ತದೆಅರ್ಜಿದಾರ

ಮದ್ರಾಸ್ ಹೈಕೋರ್ಟ್‌ನಲ್ಲಿ ನಡೆದ ವಿಚಾರಣೆಯಲ್ಲಿ, ಅರ್ಜಿದಾರರು ಈ ಬಗ್ಗೆ ವಿವರಿಸಿದ್ದು, ಈ ಟವರ್‌ಗಳಿಂದ ಹೊರಸೂಸುವ ವಿಕಿರಣವು ಒಬ್ಬರ ಜೀವಿತಾವಧಿಯನ್ನು ಕಡಿಮೆ ಮಾಡುತ್ತದೆ. ಹೀಗಾಗಿ ಸೆಲ್‌ಫೋನ್ ಟವರ್‌ಗಳನ್ನು ತೆಗೆದುಹಾಕುವಂತೆ ಮನವಿ ಮಾಡಿದ್ದಾರೆ.

ಎಲ್ಲಾ ದೇಶಗಳಲ್ಲೂ ಮೊಬೈಲ್ಟವರ್ಗಳಿವೆಕೋರ್ಟ್ 

ಹಂಗಾಮಿ ಮುಖ್ಯ ನ್ಯಾಯಮೂರ್ತಿ (ಎಸಿಜೆ) ಟಿ. ರಾಜಾ ಅವರ ನೇತೃತ್ವದಲ್ಲಿ ಅರ್ಜಿ ವಿಚಾರಣೆ ನಡೆದಿದ್ದು, ಎಲ್ಲಾ ವಾದ-ಪ್ರತಿವಾದಗಳನ್ನು ಗಮನಿಸಿ ಅರ್ಜಿದಾರರ ಪರವಾದ ವಾದ ಮಂಡಿಸುತ್ತಿದ್ದ ವಕೀಲರಿಗೆ ವೈಜ್ಞಾನಿಕ ಬೆಂಬಲವಿಲ್ಲದೇ ಇದು ಅಸಾಧ್ಯ ಎಂದು ತಿಳಿಸಿದ್ದಾರೆ. ಸೆಲ್‌ಫೋನ್‌ಗಳು ಮತ್ತು ಟವರ್‌ಗಳು ನಮ್ಮ ದೇಶದಲ್ಲಿ ಮಾತ್ರವಲ್ಲದೇ ಆಫ್ರಿಕಾ, ಉತ್ತರ ಅಮೆರಿಕ, ದಕ್ಷಿಣ ಅಮೇರಿಕಾ ಮತ್ತು ಏಷ್ಯಾ ಸೇರಿದಂತೆ ಪ್ರತಿಯೊಂದು ದೇಶ ಮತ್ತು ಖಂಡಗಳಲ್ಲಿ ಅಸ್ತಿತ್ವದಲ್ಲಿವೆ ಎಂದು ಹೇಳಿದರು.

2019 ಒಂದು ಪ್ರಕರಣದಲ್ಲೂ ಇದೇ ಅಭಿಪ್ರಾಯ ವ್ಯಕ್ತಪಡಿಸಿದ ಕೋರ್ಟ್ : ಜೂನ್ 2019 ರ ಒಂದು ಪ್ರಕರಣದಲ್ಲಿ, ಮದ್ರಾಸ್ ಹೈಕೋರ್ಟ್‌ನ ನ್ಯಾಯಮೂರ್ತಿ ಎನ್ ಆನಂದ್ ವೆಂಕಟೇಶ್ ಅವರು ಸೆಲ್‌ಫೋನ್ ಟವರ್‌ಗಳಿಂದ ವಿಕಿರಣದ ಪರಿಣಾಮದ ಮೇಲಿನ ಆತಂಕಗಳು ಹೆಚ್ಚಾಗಿವೆ, ಆದರೆ ವೈಜ್ಞಾನಿಕ ಬೆಂಬಲವಿಲ್ಲ ಎಂದು ಪ್ರಕರಣದಲ್ಲಿ ಹೇಳಿದ್ದರು.

“ಸೆಲ್ ಫೋನ್ ಟವರ್‌ನಿಂದ ವಿಕಿರಣದ ಪರಿಣಾಮದ ಬಗ್ಗೆ ಕೇವಲ ಆತಂಕದ ಮೇಲೆ ಸೆಲ್ ಫೋನ್ ಟವರ್‌ಗಳನ್ನು ನಿರ್ಮಿಸುವುದನ್ನು ಯಾರೂ ತಡೆಯಲು ಸಾಧ್ಯವಿಲ್ಲ ಎಂದು ನ್ಯಾಯಾಲಯವು ಅಭಿಪ್ರಾಯ ಪಟ್ಟಿದೆ. ಆತಂಕಕ್ಕೆ ವೈಜ್ಞಾನಿಕ ಬೆಂಬಲವಿಲ್ಲ. ಸಕಾರಾತ್ಮಕ ಫಲಿತಾಂಶವನ್ನು ನೀಡುವವರೆಗೆ, ಸೆಲ್ ಫೋನ್ ಟವರ್‌ಗಳನ್ನು ಕೇವಲ ಆತಂಕದ ಮೇಲೆ ಸ್ಥಾಪಿಸುವುದನ್ನು ತಡೆಯಲು ಸಾಧ್ಯವಿಲ್ಲ” ಎಂದು ಅವರು ಹೇಳಿದ್ದರು. ಈ ತೀರ್ಪಿನ ನಂತರ ರಿಲಯನ್ಸ್ ಜಿಯೋಗೆ ಸೆಲ್‌ಫೋನ್ ಟವರ್‌ಗಳನ್ನು ನಿರ್ಮಿಸಲಾಯಿತು. ಈ ವೇಳೆಯಲ್ಲಿ ಯಾವುದೇ ಅನಾಹುತ ನಡೆಯದಂತೆ ನ್ಯಾಯಾಲಯವು ಪೊಲೀಸ್ ರಕ್ಷಣೆಯನ್ನು ಸಹ ನೀಡಿತ್ತು.

ಶಾಲೆ ಬಳಿ ಟವರ್ನಿರ್ಮಾಣಕ್ಕೆ ನಿಷೇಧ : ಮೊಬೈಲ್‌ ಟವರ್‌ ನಿರ್ಮಾಣದ ಬಗ್ಗೆ ಹಲವು ವಿರೋಧಗಳು ವ್ಯಕ್ತವಾದರೂ, ಮೊಬೈಲ್‌ ಈಗ ಅನಿವಾರ್ಯವಾಗಿರುವುದರಿಂದ ಅದನ್ನು ತೆಗೆದು ಹಾಕಲು ಆಗುತ್ತಿಲ್ಲ. ಆದರೆ ಕರ್ನಾಟಕ ಸೇರಿ ಇತರೆ ರಾಜ್ಯಗಳಲ್ಲಿ ಮೊಬೈಲ್‌ ಟವರ್‌ ಅಳವಡಿಕೆಗೆ ಕಟ್ಟುನಿಟ್ಟಿನ ನಿಯಮಗಳನ್ನು ರೂಪಿಸಲಾಗಿದೆ. ರಾಜ್ಯ ಸರ್ಕಾರಗಳ ಆದೇಶದಡಿ ಶಾಲಾ-ಕಾಲೇಜು, ಧಾರ್ಮಿಕ ಕಟ್ಟಡ ಹಾಗೂ ಆಸ್ಪತ್ರೆಗಳಿಂದ 50 ಮೀಟರ್‌ ಅಂತರದಲ್ಲಿ ಯಾವುದೇ ಟವರ್‌ ಅಳವಡಿಕೆ ಮಾಡುವಂತಿಲ್ಲ ಎಂಬ ನಿಯಮವಿದೆ.

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು[email protected] ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಮಳೆ ಕೊರತೆ ತೀವ್ರ – ಬೆಂಗಳೂರು ಗ್ರಾಮಾಂತರದಲ್ಲಿ ಕೇವಲ ಶೇ. 3 ಬಿತ್ತನೆ; ನೀರಿನ ಬಳಕೆಗೆ ಕಟ್ಟುನಿಟ್ಟಿನ ಕ್ರಮ
July 28, 2026
7:45 AM
by: ದ ರೂರಲ್ ಮಿರರ್.ಕಾಂ
ಕೇರಳದಲ್ಲಿ ಪ್ರತಿವರ್ಷ ₹1,200 ಕೋಟಿ ಮೌಲ್ಯದ ಹಲಸು ವ್ಯರ್ಥ..! ಮೌಲ್ಯವರ್ಧನೆಗೆ ಸರ್ಕಾರ ಮುಂದಾಗಲಿ ಎಂಬ ಒತ್ತಾಯ
July 27, 2026
6:33 AM
by: ದ ರೂರಲ್ ಮಿರರ್.ಕಾಂ
ಅವೈಜ್ಞಾನಿಕ ಮಳೆ ವರದಿ ಶೈಕ್ಷಣಿಕ ವಲಯಕ್ಕೆ ತೊಂದರೆ – ಹವಾಮಾನ ಮುನ್ಸೂಚನೆ ಕುರಿತು ಎಸ್.ಎಲ್. ಭೋಜೆಗೌಡ ಕಳವಳ
July 26, 2026
3:04 PM
by: ದ ರೂರಲ್ ಮಿರರ್.ಕಾಂ
18 ಕರಿಮೆಣಸು ತಳಿಗಳ ನರ್ಸರಿ ನಿರ್ಮಿಸಿ ಯಶಸ್ಸು ಕಂಡ ಯುವ ರೈತ
July 24, 2026
6:22 AM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror