ಕರ್ನಾಟಕದಲ್ಲಿ ಲೋಕಸಭೆ ಚುನಾವಣೆ ಮುಕ್ತಾಯ | ರಾಜ್ಯದಲ್ಲಿ 70.03% ಮತದಾನ

May 8, 2024
9:54 PM

ರಾಜ್ಯದಲ್ಲಿ ಲೋಕಸಭೆ ಚುನಾವಣೆಗೆ(Loksabha Elections 2024) ತೆರೆ ಬಿದ್ದಿದೆ. ಇನ್ನು ಫಲಿತಾಂಶಕ್ಕಾಗಿ ಕಾಯೋದೊಂದೇ   ಬಾಕಿ. ರಾಜಕೀಯ(Political) ಕೆಸರೆರಚಾಟದ ಮಧ್ಯೆ ರಾಜ್ಯದಲ್ಲಿ ಎರಡನೇ ಹಾಗೂ ಅಂತಿಮ ಹಂತದ ಚುನಾವಣೆ ಸುಗಮವಾಗಿ ನಡೆದಿದೆ. ಕೆಲ ಸಣ್ಣಪುಟ್ಟ ಘಟನೆಗಳನ್ನು ಹೊರತುಪಡಿಸಿ 14 ಲೋಕಸಭೆ  ಕ್ಷೇತ್ರಗಳಲ್ಲಿ ಶಾಂತಿಯುತ ಚುನಾವಣೆ ನಡೆದಿದೆ. ರಣಬಿಸಿಲನ್ನು ಲೆಕ್ಕಿಸದ ಮತದಾರರು ಉತ್ಸಾಹದಿಂದಲೇ ಮತಗಟ್ಟೆಗೆ ಬಂದು ಮತ ಚಲಾವಣೆ ಮಾಡಿದರು.

ಕೆಲವೆಡೆ ಸರತಿ ಸಾಲಲ್ಲಿ ನಿಂತಿದ್ದ ಕಾರಣ ಆರು ಗಂಟೆ ನಂತರವೂ ಮತದಾನ ನಡೀತು. ಮಾಹಿತಿ ಪ್ರಕಾರ 70.03% ರಷ್ಟು ಮತದಾನ ಆಗಿದೆ. ಇದೇ ವೇಳೆ, ಸುರಪುರ ವಿಧಾನಸಭೆ ಉಪಚುನಾವಣೆಯೂ ಮುಗಿದಿದೆ. ಕ್ಷೇತ್ರದ ಬಾದ್ಯಾಪುರದಲ್ಲಿ ಬಿಜೆಪಿ-ಕಾಂಗ್ರೆಸ್ ಕಾರ್ಯಕರ್ತರ ಮಧ್ಯೆ ಮಾರಾಮಾರಿ ನಡೆದಿದ್ದು, ಕಲ್ಲು ತೂರಾಟವಾಗಿದೆ. ಘಟನೆಯಲ್ಲಿ ಒಬ್ಬರ ತಲೆಗೆ ತೀವ್ರ ಸ್ವರೂಪದ ಗಾಯವಾಗಿದೆ. ಗ್ರಾಮದಲ್ಲಿ ಬಿಗುವಿನ ಸ್ಥಿತಿ ನಿರ್ಮಾಣವಾಗಿದೆ. ಕ್ಷೇತ್ರಗಳ ಪೈಕಿ ಚಿಕ್ಕೋಡಿಯಲ್ಲಿ (Chikkodi) ಅತಿ ಹೆಚ್ಚು 76.47% ಮತದಾನ ನಡೆದರೆ ಕಲಬುರಗಿಯಲ್ಲಿ (Kalaburagi) 61.73% ಮತದಾನ ನಡೆದಿದೆ. 2019ಕ್ಕೆ ಹೋಲಿಸಿದ್ರೆ ಉತ್ತರ ಕನ್ನಡ, ಬಾಗಲಕೋಟೆ ಹೊರತುಪಡಿಸಿ ಎಲ್ಲ ಕಡೆ ಶೇಕಡಾವಾರು ಮತದಾನದಲ್ಲಿ ಹೆಚ್ಚಳವಾಗಿದೆ.

ಕರ್ನಾಟಕದಲ್ಲಿ ಮೊದಲ ಸುತ್ತಿನಲ್ಲಿ  69.56% ಮತದಾನ ಹಾಗೂ ಎರಡನೇ ಸುತ್ತಿನಲ್ಲಿ 70.3% ಮತದಾನವಾಗಿದೆ. 2019ರಲ್ಲಿ  68.81% ಮತದಾನವಾಗಿತ್ತು.

ಎಲ್ಲೆಲ್ಲಿ ಎಷ್ಟೆಷ್ಟು ವೋಟಿಂಗ್? 

* ಚಿಕ್ಕೋಡಿ- 76.47%
* ಬೆಳಗಾವಿ- 71.00%
* ಬಾಗಲಕೋಟೆ- 70.10%
* ವಿಜಯಪುರ- 64.71%
* ಕಲಬುರಗಿ- 61.73%
* ರಾಯಚೂರು- 61.81%
* ಬೀದರ್-‌ 63.55%
* ಕೊಪ್ಪಳ- 69.87%
* ಬಳ್ಳಾರಿ- 72.35%
* ಹಾವೇರಿ- 74.75%
* ಧಾರವಾಡ- 72.12%
* ಉತ್ತರ ಕನ್ನಡ- 73.52%
* ದಾವಣಗೆರೆ- 76.23%
* ಶಿವಮೊಗ್ಗ- 76.05%

Source : ಅಂತರ್ಜಾಲ ಮಾಹಿತಿ

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು[email protected] ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಕೃಷಿಗೆ ಹವಾಮಾನ ಅಪಾಯ ಹೆಚ್ಚಳ | ರೈತರಿಗೆ ಕಠಿಣ ಕಾಲ ಬರುವ ಸೂಚನೆ ? ದೇಶದ 310 ಜಿಲ್ಲೆಗಳು ಅಪಾಯ ವಲಯದಲ್ಲಿ..!
March 26, 2026
7:04 AM
by: ದ ರೂರಲ್ ಮಿರರ್.ಕಾಂ
ಹವಾಮಾನ ವರದಿ | 25.03.2026 | ಕರಾವಳಿಯಲ್ಲಿ ಇಂದು ಸಂಜೆ ಮಳೆ ಸಾಧ್ಯತೆ | ಏಪ್ರಿಲ್‌ 5ರವರೆಗೆ ಬೇಸಿಗೆ ಮಳೆ ಸಕ್ರಿಯ!
March 25, 2026
12:30 PM
by: ಸಾಯಿಶೇಖರ್ ಕರಿಕಳ
ಹವಾಮಾನ ವರದಿ | 24-03-2026 | ಕರ್ನಾಟಕದಲ್ಲಿ ಮತ್ತೆ ಮಳೆ ಅಲರ್ಟ್‌ | ಈ ದಿನದಿಂದ ಮಳೆ ವ್ಯಾಪ್ತಿ ಹೆಚ್ಚಳ ಸಾಧ್ಯತೆ..!
March 24, 2026
12:24 PM
by: ಸಾಯಿಶೇಖರ್ ಕರಿಕಳ
ರಾಜ್ಯದ ವಿಶ್ವವಿದ್ಯಾಲಯಗಳಲ್ಲಿ 4 ಸಾವಿರ ಹುದ್ದೆಗಳು ಖಾಲಿ – ಆರಂಭದಲ್ಲಿ 1 ಸಾವಿರ ಹುದ್ದೆಗಳ ಭರ್ತಿಗೆ ಕ್ರಮ
March 24, 2026
7:12 AM
by: ಮಿರರ್‌ ಡೆಸ್ಕ್

You cannot copy content of this page - Copyright -The Rural Mirror