Advertisement
Opinion

ಮಳೆ ಹೆಚ್ಚಿಸಲು ಮೋಡ ಬಿತ್ತನೆಗೆ ಚಾಲನೆ – ಮೋಡ ಬಿತ್ತನೆಯಿಂದ ಮಳೆ ಬರುತ್ತದೆಯೇ?

Share

ಕರ್ನಾಟಕದಲ್ಲಿ ಮುಂಗಾರು ಮಳೆ ಕೊರತೆ ಎದುರಾಗಿರುವ ಹಿನ್ನೆಲೆಯಲ್ಲಿ ಮಳೆಯ ಪ್ರಮಾಣವನ್ನು ಹೆಚ್ಚಿಸುವ ಉದ್ದೇಶದಿಂದ ಸೆಪ್ಟೆಂಬರ್ 4, ರಂದು ರಾಜ್ಯದಲ್ಲಿ ಅಧಿಕೃತವಾಗಿ ಮೋಡ ಬಿತ್ತನೆ (Cloud Seeding) ಯೋಜನೆಗೆ ಚಾಲನೆ ನೀಡಲಾಗಿದೆ. ಸುಮಾರು ₹28.52 ಕೋಟಿ ವೆಚ್ಚದ ಈ ಯೋಜನೆ 60 ದಿನಗಳ ಕಾಲ ನಡೆಯಲಿದ್ದು, ಸೂಕ್ತ ಮೋಡಗಳು ಲಭ್ಯವಿರುವ ಸಂದರ್ಭಗಳಲ್ಲಿ ವಿಮಾನಗಳ ಮೂಲಕ ಮೋಡಗಳೊಳಗೆ ನಿರ್ದಿಷ್ಟ ರಾಸಾಯನಿಕ ಕಣಗಳನ್ನು ಸಿಂಪಡಿಸುವ ಮೂಲಕ ಮಳೆ ಪ್ರಮಾಣ ಹೆಚ್ಚಿಸಲು ಪ್ರಯತ್ನಿಸಲಾಗುತ್ತದೆ.

ಮೋಡ ಬಿತ್ತನೆ ಎಂದರೇನು? : ವಾತಾವರಣದಲ್ಲಿರುವ ಮೋಡಗಳಲ್ಲಿನ ತೇವಾಂಶವು ಮಳೆಯಾಗಿ ಸುರಿಯುವಂತೆ ಮಾಡಲು, ಕೃತಕವಾಗಿ ರಾಸಾಯನಿಕಗಳನ್ನು ಸಿಂಪಡಿಸಿ ಮಳೆಯಾಗುವ ಪ್ರಕ್ರಿಯೆಯನ್ನು ಚುರುಕುಗೊಳಿಸುವ ವೈಜ್ಞಾನಿಕ ವಿಧಾನವೇ ಮೋಡ ಬಿತ್ತನೆ.
ಮೋಡ ಬಿತ್ತನೆ ಎಂದರೆ ಕೃತಕವಾಗಿ ಮಳೆ ಬರಿಸಲು ಮೋಡಗಳ ಮೇಲೆ ನಿರ್ದಿಷ್ಟ ರಾಸಾಯನಿಕಗಳನ್ನು ವಿಮಾನದ ಮೂಲಕ ಸಿಂಪಡಿಸುವ ವೈಜ್ಞಾನಿಕ ವಿಧಾನವಾಗಿದೆ.

ಮೋಡ ಬಿತ್ತನೆ ಪ್ರಕ್ರಿಯೆ ಹೇಗೆ? : ಮೊದಲು ಮೋಡಗಳನ್ನು ರಾಡಾರ್ ಮತ್ತು ಉಪಗ್ರಹಗಳ ಸಹಾಯದಿಂದ ತೇವಾಂಶವಿರುವ ಸೂಕ್ತ ಮೋಡಗಳನ್ನು ಮೊದಲು ಗುರುತಿಸಲಾಗುತ್ತದೆ. ಬಳಿಕ ಸಿಲ್ವರ್ ಅಯೋಡೈಡ್, ಪೊಟ್ಯಾಸಿಯಮ್ ಅಯೋಡೈಡ್, ಒಣ ಮಂಜುಗಡ್ಡೆ (ಡ್ರೈ ಐಸ್) ಅಥವಾ ಸಾಮಾನ್ಯ ಉಪ್ಪನ್ನು (ಸೋಡಿಯಂ ಕ್ಲೋರೈಡ್) ಬಳಸಲಾಗುತ್ತದೆ. ವಿಶೇಷ ವಿಮಾನಗಳು ಅಥವಾ ನೆಲದ ಮೇಲಿನ ಜನರೇಟರ್‌ಗಳ ಮೂಲಕ ಈ ರಾಸಾಯನಿಕಗಳನ್ನು ಮೋಡಗಳ ಒಳಗೆ ಬಿಡಲಾಗುತ್ತದೆ. ರಾಸಾಯನಿಕ ಕಣಗಳು ಮೋಡದೊಳಗಿನ ಸಣ್ಣ ನೀರಿನ ಹನಿಗಳನ್ನು ಆಕರ್ಷಿಸಿ ಒಟ್ಟುಗೂಡಿಸುತ್ತವೆ. ಹನಿಗಳು ಭಾರವಾಗಿ ಮಂಜುಗಡ್ಡೆ ಅಥವಾ ಮಳೆಯ ಹನಿಗಳಾಗಿ ಪರಿವರ್ತನೆಗೊಂಡು ನೆಲಕ್ಕೆ ಬೀಳುತ್ತವೆ.

ಪ್ರಮುಖ ಮಿತಿಗಳು : ಈ ತಂತ್ರಜ್ಞಾನದಿಂದ ಮಳೆ ಬರಬೇಕಾದರೆ ಆಕಾಶದಲ್ಲಿ ಕಡ್ಡಾಯವಾಗಿ ತೇವಾಂಶವಿರುವ ಮೋಡಗಳು ಇರಬೇಕು. ಸಂಪೂರ್ಣ ಒಣ ಹವಾಮಾನ ಅಥವಾ ಮೋಡಗಳೇ ಇಲ್ಲದಾಗ ಇದನ್ನು ಮಾಡಲು ಸಾಧ್ಯವಿಲ್ಲ.ಇದು ಸಾಕಷ್ಟು ದುಬಾರಿ ಪ್ರಕ್ರಿಯೆಯಾಗಿದ್ದು, ಶೇಕಡಾ 100 ರಷ್ಟು ಯಶಸ್ಸು ಸಿಗುತ್ತದೆ ಎಂದು ಖಚಿತವಾಗಿ ಹೇಳಲು ಬರುವುದಿಲ್ಲ.

ಮೋಡ ಬಿತ್ತನೆ (Cloud Seeding) ಒಂದು ಹಂತದವರೆಗೆ ಪರಿಣಾಮಕಾರಿಯಾಗಿದೆ, ಆದರೆ ಇದು ಎಲ್ಲಾ ಪರಿಸ್ಥಿತಿಗಳಲ್ಲೂ ನೂರಕ್ಕೆ ನೂರು ಯಶಸ್ಸು ನೀಡುವುದಿಲ್ಲ. ಸಾಮಾನ್ಯವಾಗಿ, ಮೋಡ ಬಿತ್ತನೆಯಿಂದ ಮಳೆಯ ಪ್ರಮಾಣವನ್ನು ಶೇಕಡಾ 10 ರಿಂದ 30 ರಷ್ಟು ಹೆಚ್ಚಿಸಬಹುದು ಎಂದು ವಿವಿಧ ಸಂಶೋಧನೆಗಳು ತೋರಿಸಿವೆ.

ತಜ್ಞರ ಪ್ರಕಾರ, ಮೋಡ ಬಿತ್ತನೆಯು ಬರಗಾಲಕ್ಕೆ ಸಂಪೂರ್ಣ ಪರ್ಯಾಯ ಪರಿಹಾರವಲ್ಲ. ಮೋಡ ಬಿತ್ತನೆಯು ಬರಗಾಲಕ್ಕೆ ಸಂಪೂರ್ಣ ಪರ್ಯಾಯ ಪರಿಹಾರವಲ್ಲ. ಆದರೆ ತುರ್ತು ಪರಿಸ್ಥಿತಿಯಲ್ಲಿ ಮಳೆಯ ಕೊರತೆಯನ್ನು ಸ್ವಲ್ಪ ಮಟ್ಟಿಗೆ ನೀಗಿಸಲು ಇರುವ ಒಂದು ಪೂರಕ ತಂತ್ರಜ್ಞಾನ ಮಾತ್ರವಾಗಿದೆ

ದಕ್ಷಿಣ ಒಳನಾಡಿನಲ್ಲಿ ಸೆಪ್ಟೆಂಬರ್ ತಿಂಗಳು ಪೂರ್ವದಿಂದ ತೇವಾಂಶದ ಮೋಡ ಬಂದರೇ 25-30% ಮಳೆ ಬರಬಹುದು. ಆದರೇ ಬಂದ ಮಳೆಯನ್ನು ನೈಸರ್ಗಿಕ ಮಳೆ ಅಥವಾ ಮೋಡ ಬಿತ್ತನೆಯ ಮಳೆ ಎಂದು ವಿಭಾಗ ಮಾಡಿ ನಿಖರವಾಗಿ ಹೇಳಲು ಸಾಧ್ಯವಿಲ್ಲ. ರಾಜ್ಯದಲ್ಲಿ ಉತ್ತಮ ಹಿಂಗಾರು ಮಳೆ ಬೀಳಬಹುದು ಯೋಜನೆ ಯಶಸ್ವಿಯಾಗಲಿ ಅಂತ ಆಶಾವಾದಿಗಳಾಗೋಣ

ದಕ್ಷಿಣ ಒಳನಾಡಿನಲ್ಲಿ ಏನಾಗಬಹುದು?

ಹವಾಮಾನ ವಿಶ್ಲೇಷಕ ರಘುರಾಮ ಕಂಪದಕೋಡಿ ಅವರ ಅಭಿಪ್ರಾಯದಂತೆ, ಸೆಪ್ಟೆಂಬರ್‌ನಲ್ಲಿ ದಕ್ಷಿಣ ಒಳನಾಡಿನ ಭಾಗಗಳಿಗೆ ಪೂರ್ವ ದಿಕ್ಕಿನಿಂದ ತೇವಾಂಶ ಹೊಂದಿರುವ ಮೋಡಗಳು ಬಂದರೆ ಸುಮಾರು 25–30% ಮಳೆಯಾಗುವ ಸಾಧ್ಯತೆ ಇರಬಹುದು. ಆದರೆ ಸುರಿಯುವ ಮಳೆಯಲ್ಲಿ ಎಷ್ಟು ಭಾಗ ನೈಸರ್ಗಿಕ ಮಳೆ ಮತ್ತು ಎಷ್ಟು ಭಾಗ ಮೋಡ ಬಿತ್ತನೆಯ ಪರಿಣಾಮ ಎಂಬುದನ್ನು ನಿಖರವಾಗಿ ವಿಭಾಗಿಸುವುದು ಸಾಧ್ಯವಿಲ್ಲ.

ಹೀಗಾಗಿ ಮೋಡ ಬಿತ್ತನೆಯನ್ನು ಬರಗಾಲಕ್ಕೆ ಸಂಪೂರ್ಣ ಪರಿಹಾರವೆಂದು ನೋಡುವ ಬದಲು, ಲಭ್ಯವಿರುವ ತೇವಾಂಶದ ಮೋಡಗಳಿಂದ ಹೆಚ್ಚಿನ ಮಳೆ ಪಡೆಯಲು ಪ್ರಯತ್ನಿಸುವ ಪೂರಕ ತಂತ್ರಜ್ಞಾನ ಎಂದು ನೋಡುವುದು ಸೂಕ್ತ.

ಕರ್ನಾಟಕಕ್ಕೆ ಮುಂದಿನ ದಿನಗಳಲ್ಲಿ ಉತ್ತಮ ಹಿಂಗಾರು ಮಳೆ ದೊರೆಯುವ ನಿರೀಕ್ಷೆಯೂ ಇದೆ. ಮೋಡ ಬಿತ್ತನೆ ಯೋಜನೆಯೂ ಸೂಕ್ತ ಮೋಡಗಳ ಲಭ್ಯತೆಯೊಂದಿಗೆ ಯಶಸ್ವಿಯಾಗಿ ಕಾರ್ಯನಿರ್ವಹಿಸಿ ಮಳೆ ಕೊರತೆಯನ್ನು ಸ್ವಲ್ಪ ಮಟ್ಟಿಗಾದರೂ ತಗ್ಗಿಸಲಿ ಎಂಬುದು ಆಶಯ.

ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ-ಹವಾಮಾನ ಬದಲಾವಣೆ ಹಾಗೂ ಇತರ ಮಾಹಿತಿಗಾಗಿ  ನಮ್ಮ “ದ ರೂರಲ್‌ ಮಿರರ್.ಕಾಂ”WhatsApp Channel  ಫಾಲೋಮಾಡಲು ಇಲ್ಲಿ ಕ್ಲಿಕ್‌ ಮಾಡಿ

Karnataka has officially launched a ₹28.52-crore cloud-seeding programme on September 4, to enhance rainfall amid monsoon deficiency. The 60-day operation will use aircraft to seed suitable moisture-bearing clouds, but experts caution that cloud seeding cannot create rain without existing clouds and is only a supplementary measure, not a complete solution to drought.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಹಲವು ರಾಜ್ಯಗಳಲ್ಲಿ ಮುಂದಿನ 2 ದಿನ ಭಾರೀ ಮಳೆ ಸಾಧ್ಯತೆ – ಆರೆಂಜ್ ಅಲರ್ಟ್

ದೇಶದ ಹಲವು ರಾಜ್ಯಗಳಲ್ಲಿ ಮುಂದಿನ ಎರಡು ದಿನ ಭಾರೀ ಮಳೆಯಾಗುವ ಸಾಧ್ಯತೆಯಿದ್ದು, ಕರ್ನಾಟಕದ…

12 hours ago

ಬರಪೀಡಿತ ವಿಜಯಪುರದಲ್ಲಿ ಹಸಿರಿನ ಕ್ರಾಂತಿ

ವಿಜಯಪುರ ಜಿಲ್ಲೆಯಲ್ಲಿ ಕೋಟಿ ವೃಕ್ಷ ಅಭಿಯಾನ ಸೇರಿದಂತೆ ವಿವಿಧ ಯೋಜನೆಗಳ ಮೂಲಕ ಹಸಿರು…

12 hours ago

ಅಡಿಕೆ ತೋಟದಿಂದ ನ್ಯಾನೋತಂತ್ರಜ್ಞಾನದವರೆಗೆ…! ಬೆಳೆಗಾರರಿಗೆ ಹೊಸ ಮೌಲ್ಯ ಸೃಷ್ಟಿಸುವ ಸಂಶೋಧನೆ

ಅಡಿಕೆ ಸಿಪ್ಪೆ, ಸೋಗೆ ಮತ್ತು ಇತರ ಕೃಷಿ ಅವಶೇಷಗಳಿಂದ ಕಾರ್ಬನ್ ನ್ಯಾನೋಸ್ಫಿಯರ್‌ಗಳನ್ನು ಅಭಿವೃದ್ಧಿಪಡಿಸಿ,…

1 day ago

ದಕ್ಷಿಣ ಕನ್ನಡ ಜಿಲ್ಲೆ ಮರುನಾಮಕರಣಕ್ಕೆ ಬೆಳ್ಳಾರೆ ಬಳಕೆದಾರರ ವೇದಿಕೆ ವಿರೋಧ- ಜನಮತ ಸಂಗ್ರಹಕ್ಕೆ ಆಗ್ರಹ

ದಕ್ಷಿಣ ಕನ್ನಡ ಜಿಲ್ಲೆಯನ್ನು ಮಂಗಳೂರು ಜಿಲ್ಲೆ ಎಂದು ಮರುನಾಮಕರಣ ಮಾಡುವ ಪ್ರಸ್ತಾವನೆಗೆ ಬೆಳ್ಳಾರೆ…

1 day ago

ಗುತ್ತಿಗಾರಿನಲ್ಲಿ ಚಣಿಲ ಹೋಮಿಯೋಪಥಿ ಕ್ಲಿನಿಕ್‌ ಆರಂಭ

ಸುಬ್ರಹ್ಮಣ್ಯದಲ್ಲಿ ಐದು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದ ಶ್ರೀ ಹೋಮಿಯೋಕೇರ್‌ ಗುತ್ತಿಗಾರಿಗೆ ಸ್ಥಳಾಂತರಗೊಂಡಿದ್ದು, ಎಸ್‌ಎಂಎಸ್‌ಜಿ ಕಾಂಪ್ಲೆಕ್ಸ್‌ನಲ್ಲಿ…

1 day ago

ಹವಾಮಾನ ವರದಿ | 16-10-2026 | ಕರ್ನಾಟಕದಲ್ಲಿ ಇನ್ನೂ 10 ದಿನ ಮಳೆ? ಅ.19ರ ನಂತರ ಹಿಂಗಾರು ಮಾರುತಗಳ ಆಗಮನದ ನಿರೀಕ್ಷೆ

ಕರ್ನಾಟಕದ ಕರಾವಳಿ, ಮಲೆನಾಡು ಹಾಗೂ ಒಳನಾಡಿನ ಹಲವು ಜಿಲ್ಲೆಗಳಲ್ಲಿ ಮುಂದಿನ ದಿನಗಳಲ್ಲೂ ಗುಡುಗು…

1 day ago