Advertisement
MIRROR FOCUS

ಮುಂದಿನ ಜೂನ್‌ನಿಂದ ರಾಜ್ಯದಲ್ಲಿ 1,225 ಕರ್ನಾಟಕ ಪಬ್ಲಿಕ್ ಶಾಲೆ ಆರಂಭ – ಮಕ್ಕಳಿಗೆ ಉಚಿತ ಬಸ್ ವ್ಯವಸ್ಥೆ

Share

ರಾಜ್ಯದಲ್ಲಿ ಮುಂದಿನ ಜೂನ್‌ನಿಂದ 1,225 ಕರ್ನಾಟಕ ಪಬ್ಲಿಕ್ ಶಾಲೆಗಳನ್ನು ಆರಂಭಿಸಲು ಉದ್ದೇಶಿಸಲಾಗಿದ್ದು, ಈ ಶಾಲೆಗಳಿಗೆ ತೆರಳುವ ಮಕ್ಕಳಿಗೆ ಉಚಿತ ಬಸ್ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಮಧು ಬಂಗಾರಪ್ಪ ತಿಳಿಸಿದ್ದಾರೆ.

ಮೈಸೂರಿನಲ್ಲಿ ಮಕ್ಕಳ ದಸರಾ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಕರ್ನಾಟಕ ಪಬ್ಲಿಕ್ ಶಾಲೆಗಳಲ್ಲಿ ಎಲ್‌ಕೆಜಿಯಿಂದ ದ್ವಿತೀಯ ಪಿಯುಸಿವರೆಗೆ ಗುಣಮಟ್ಟದ ಶಿಕ್ಷಣ ನೀಡಲು ಯೋಜಿಸಲಾಗಿದೆ. ಪ್ರತಿ ತರಗತಿಗೆ ಒಬ್ಬ ಶಿಕ್ಷಕರನ್ನು ನೇಮಿಸುವುದರ ಜೊತೆಗೆ, ಕೌಶಲ್ಯ ಅಭಿವೃದ್ಧಿ, ನಾಟಕ, ದೈಹಿಕ ಶಿಕ್ಷಣ ಹಾಗೂ ಸಂಗೀತ ಶಿಕ್ಷಣಕ್ಕೆ ಪ್ರತ್ಯೇಕ ಶಿಕ್ಷಕರನ್ನು ಒದಗಿಸಲಾಗುವುದು ಎಂದು ಸಚಿವರು ತಿಳಿಸಿದರು.

ಇದರೊಂದಿಗೆ, ಮುಖ್ಯಮಂತ್ರಿಗಳ ಸಿಎಸ್‌ಆರ್‌ (CSR) ಅನುದಾನದಡಿ 1,000 ಶಾಲೆಗಳನ್ನು ಆರಂಭಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು. ಮಕ್ಕಳಿಗೆ ಗುಣಮಟ್ಟದ ಶಿಕ್ಷಣವನ್ನು ಒಂದೇ ಸೂರಿನಡಿ ಒದಗಿಸುವುದು ಹಾಗೂ ಶಾಲೆಗೆ ತೆರಳಲು ಸಾರಿಗೆ ಸೌಲಭ್ಯ ಕಲ್ಪಿಸುವುದು ಈ ಯೋಜನೆಯ ಪ್ರಮುಖ ಉದ್ದೇಶವಾಗಿದೆ.

ಮಕ್ಕಳ ದಸರಾ ಕಾರ್ಯಕ್ರಮದಲ್ಲಿ ಮಹಿಳಾ ಮತ್ತು ಮಕ್ಕಳ ಉಪಸಮಿತಿ ಉಪ ವಿಶೇಷಾಧಿಕಾರಿ ಹಾಗೂ ಉಪ ಕಾರ್ಯದರ್ಶಿ ಬಿ.ಎನ್. ಸವಿತಾ, ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಅರುಣ್ ಕುಮಾರ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

Karnataka plans to launch 1,225 Karnataka Public Schools from next June, according to Primary and Secondary Education Minister Madhu Bangarappa. Students attending these schools will be provided free bus services. The schools are expected to offer quality education from LKG to second-year pre-university level, with dedicated teachers for each class and separate teachers for skill development, drama, physical education and music. The state is also taking steps to establish 1,000 schools using the Chief Minister’s CSR funds.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಹವಾಮಾನ ವರದಿ | 20-10-2026 | ಅ.25ರವರೆಗೆ ಮಳೆ ಸಾಧ್ಯತೆ ; ಅ.26 ರಿಂದ ತಾತ್ಕಾಲಿಕ ಬಿಡುವು?

ಕರಾವಳಿ ಮತ್ತು ಮಲೆನಾಡು ಜಿಲ್ಲೆಗಳಲ್ಲಿ ಅಕ್ಟೋಬರ್ 25ರವರೆಗೆ ಮಳೆಯ ಸಾಧ್ಯತೆ ಮುಂದುವರಿದಿದ್ದು, ಅಕ್ಟೋಬರ್…

20 hours ago

ರಾವಣನನ್ನು ಸಂಹರಿಸುವುದಕ್ಕಿಂತ ನಮ್ಮೊಳಗಿನ ರಾವಣನನ್ನು ಗೆಲ್ಲುವುದು ಮುಖ್ಯ..!

ಮಹಾನವಮಿಯ ನಿಜವಾದ ಸಂದೇಶವೆಂದರೆ ರಾವಣ ಮತ್ತು ಮಹಿಷಾಸುರರ ಸಂಹಾರವನ್ನು ಸ್ಮರಿಸುವುದಷ್ಟೇ ಅಲ್ಲ, ನಮ್ಮೊಳಗಿನ…

1 day ago

ಮಿಜೋರಾಂನಲ್ಲಿ ಅಡಿಕೆ ಕೃಷಿಗೆ ವೈಜ್ಞಾನಿಕ ನೆರವು : ಕೀಟಬಾಧೆ ನಿಯಂತ್ರಣಕ್ಕೆ ಕ್ರಮ, ಕೋಕೋ ಅಂತರಬೆಳೆಗೂ ಚಿಂತನೆ

ಮಿಜೋರಾಂನಲ್ಲಿ ಅಡಿಕೆ ತೋಟಗಳಿಗೆ ಕಾಡುತ್ತಿರುವ ಕೀಟಬಾಧೆ ನಿಯಂತ್ರಿಸಲು ವೈಜ್ಞಾನಿಕ ಕ್ರಮಗಳು ಮತ್ತು ಆರ್ಥಿಕ…

1 day ago

ನಿಮ್ಮ ಮನೆಯ ಮೇಲ್ಛಾವಣಿಯೇ ವಿದ್ಯುತ್ ಉತ್ಪಾದನಾ ಕೇಂದ್ರವಾಗಲಿ..!

ಶಿವಮೊಗ್ಗ ಜಿಲ್ಲೆಯ ಸಾಗರದಲ್ಲಿ ಮೆಸ್ಕಾಂ ವತಿಯಿಂದ ಪ್ರಧಾನಮಂತ್ರಿ ಸೂರ್ಯಘರ್ ಯೋಜನೆಯ ಕುರಿತು ಸಾರ್ವಜನಿಕರಿಗೆ…

1 day ago

ಜೀವ ವೈವಿಧ್ಯ ಅನುದಾನ ಬಿಡುಗಡೆ – ಕರ್ನಾಟಕಕ್ಕೆ ₹10.49 ಲಕ್ಷ; ದೇಶದ 30 ಮಂಡಳಿಗಳಿಗೆ ₹1.19 ಕೋಟಿ

ರಾಷ್ಟ್ರೀಯ ಜೀವ ವೈವಿಧ್ಯ ಪ್ರಾಧಿಕಾರವು 29 ರಾಜ್ಯ ಜೀವ ವೈವಿಧ್ಯ ಮಂಡಳಿಗಳು ಮತ್ತು…

2 days ago

ಹವಾಮಾನ ವರದಿ | 19-10-2026 | ಬಂಗಾಳಕೊಲ್ಲಿಯಲ್ಲಿ ಚಂಡಮಾರುತದ ಲಕ್ಷಣ

ಕರಾವಳಿ ಮತ್ತು ಮಲೆನಾಡು ಜಿಲ್ಲೆಗಳಲ್ಲಿ ಅಕ್ಟೋಬರ್ 25ರವರೆಗೆ ಮಳೆ ಮುಂದುವರಿಯುವ ಸಾಧ್ಯತೆಯಿದ್ದು, ಉತ್ತರ…

2 days ago