ರಾಜ್ಯದ ರಾಜಧಾನಿಯಲ್ಲಿ ಕಳೆದ ಹಲವು ದಿನಗಳಿಂದ ವರುಣ ಆರ್ಭಟ ಜೋರಾಗಿದ್ದು, ಬೆಳಿಗ್ಗೆಯಿಂದ ಸಂಜೆವರೆಗೂ ಬಿಸಿಲಿನ ವಾತಾವರಣ ಇರುತ್ತದೆ. ಆದರೆ ಸಂಜೆಯಾಗುತ್ತಿದ್ದಂತೆ ಮಳೆರಾಯನ ಆರ್ಭಟದಿಂದ ಸಿಲಿಕಾನ್ ಸಿಟಿಯ ಜನರು ತತ್ತರಿಸಿ ಹೋಗಿದ್ದಾರೆ. ರಾಜ್ಯದಲ್ಲಿ ಕೆಲವೆಡೆ ಕೃಷಿ ಸಂಬಂಧಿಸಿದ ಚಟುವಟಿಕೆಗಳು ಪ್ರಾರಂಭವಾಗಿದ್ದು, ರೈತರು ಮುಂಗಾರು ಮಳೆಗಾಗಿ ಕಾಯುತ್ತಿದ್ದಾರೆ. ಮಳೆ ಅವಶ್ಯಕತೆ ಇರುವಲ್ಲಿ ಬರದೇ ಬೇರೆ ಕಡೆ ಸುರಿಯುವುದ್ದರಿಂದ ಜನರು ಆತಂಕಗೊಂಡಿದ್ದಾರೆ. ಹೀಗಾಗಿ ಕೃಷಿ ಚುಟುವಟಿಕೆ ಆರಂಭಿಸಲು ಸರಿಯಾದ ರೀತಿಯಲ್ಲಿ ಮಳೆರಾಯನ ಆಗಮನವಿಲ್ಲದೇ ಆತಂಕಗೊಂಡಿದ್ದಾರೆ.
ಆದರೆ ಕರಾವಳಿ ಭಾಗಕ್ಕೆ ವಾಡಿಕೆಯಂತೆ ಕೇರಳದಲ್ಲಿ ಮುಂಗಾರು ಮಳೆಯಾದ ನಂತರ ಮಳೆಯಾಗಲಿದೆ. ಅಂದರೆ ಜೂನ್ ತಿಂಗಳ ಎರಡನೇ ವಾರದಲ್ಲಿ ಮುಂಗಾರು ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಸೂಚಿಸಿದೆ. ಈಗಾಗಲೇ ಕರಾವಳಿ ಭಾಗದ ಹೆಚ್ಚಿನ ರೈತರು ಮುಂದಿನ ಭತ್ತದ ಬೆಳೆಗಾಗಿ ಬಿತ್ತನೆ ಕೆಲಸದ ಸಕಲ ಸಿದ್ದತೆಗಳನ್ನು ಮಾಡಿಕೊಂಡಿದ್ದು, ವರುಣನ ಆಗಮನಕ್ಕಾಗಿ ಮುಗಿಲು ನೋಡುತ್ತಿದ್ದಾರೆ. ನಿರೀಕ್ಷೆಯಂತೆ ಮಾನ್ಸೂನ್ ಮಾರುತಗಳ ಆಗಮನ ಒಂದಾರೆ ಮುಂದಿನ ವರ್ಷ ಉತ್ತಮ ಫಸಲು ಪಡೆಯಬಹುದಾಗಿದೆ.