ಹವಾಮಾನ ವರದಿ | 20-11-2026 | ಕರ್ನಾಟಕದಲ್ಲಿ ನ.23ರಿಂದ ಮಳೆ ಆರಂಭ – ನ.27ರವರೆಗೆ ಮುಂದುವರಿಯುವ ಸಾಧ್ಯತೆ!

November 20, 2026
2:07 PM
ಅಕ್ವಾನ್ ಚಂಡಮಾರುತ ದುರ್ಬಲಗೊಂಡ ಹಿನ್ನೆಲೆಯಲ್ಲಿ ಕರ್ನಾಟಕದಲ್ಲಿ ಚಳಿಯ ಪ್ರಮಾಣ ಕಡಿಮೆಯಾಗಿ, ನವೆಂಬರ್ 23ರಿಂದ ದಕ್ಷಿಣ ಒಳನಾಡು ಮತ್ತು ಮಲೆನಾಡಿನಲ್ಲಿ ಹಾಗೂ ನವೆಂಬರ್ 24ರಿಂದ ಕರಾವಳಿ ಜಿಲ್ಲೆಗಳಲ್ಲಿ ಮಳೆಯಾಗುವ ಸಾಧ್ಯತೆಯಿದೆ. ನವೆಂಬರ್ 27ರವರೆಗೆ ಮಳೆ ಮುಂದುವರಿಯುವ ಮುನ್ಸೂಚನೆಯಿದ್ದು, ತಿಂಗಳ ಕೊನೆಯಲ್ಲಿ ಮತ್ತೊಂದು ವಾಯುಭಾರ ಕುಸಿತ ರೂಪುಗೊಳ್ಳುವ ಸಾಧ್ಯತೆಯೂ ಇದೆ.

ಕಾಸರಗೋಡು ಸೇರಿದಂತೆ ಕರ್ನಾಟಕದಾದ್ಯಂತ ನವೆಂಬರ್ 21ರಂದು ಒಣ ಹವೆ ಮುಂದುವರಿಯುವ ಸಾಧ್ಯತೆಯಿದೆ. ಆದರೆ ನಾಳೆ ಮುಂಜಾನೆಯಿಂದಲೇ ರಾಜ್ಯದಾದ್ಯಂತ ಚಳಿಯ ಪ್ರಮಾಣ ನಿಧಾನವಾಗಿ ಕಡಿಮೆಯಾಗುವ ಸೂಚನೆಗಳಿವೆ. ಬಂಗಾಳಕೊಲ್ಲಿಯಲ್ಲಿ ರೂಪುಗೊಂಡಿದ್ದ ಅಕ್ವಾನ್ ಚಂಡಮಾರುತ ದುರ್ಬಲಗೊಂಡಿರುವ ಹಿನ್ನೆಲೆಯಲ್ಲಿ ಹಿಂಗಾರು ಮಾರುತಗಳು ಮತ್ತೆ ಪ್ರಭಲಗೊಳ್ಳುವ ಸಾಧ್ಯತೆಯಿದ್ದು, ರಾಜ್ಯದಲ್ಲಿ ಮಳೆಯ ವಾತಾವರಣ ನಿರ್ಮಾಣವಾಗುವ ನಿರೀಕ್ಷೆಯಿದೆ.

ಒಡಿಸ್ಸಾ ಕರಾವಳಿಯಲ್ಲಿ ಅಕ್ವಾನ್ ದುರ್ಬಲ :  ಅಕ್ವಾನ್ ಚಂಡಮಾರುತವು ನಿರೀಕ್ಷೆಯಂತೆ ಒಡಿಸ್ಸಾದ ಪುರಿ ಮತ್ತು ಬ್ರಹ್ಮಪುರ ಕರಾವಳಿ ಭಾಗದಲ್ಲಿ ದುರ್ಬಲಗೊಂಡು ಭೂ ಪ್ರವೇಶಿಸಿದೆ. ಮುಂದಿನ ಎರಡು ದಿನಗಳಲ್ಲಿ ಈ ಹವಾಮಾನ ವ್ಯವಸ್ಥೆ ಸಂಪೂರ್ಣವಾಗಿ ಶಿಥಿಲಗೊಳ್ಳುವ ಸಾಧ್ಯತೆಯಿದೆ.

ಇದರ ಪರಿಣಾಮವಾಗಿ ಉತ್ತರ ಭಾರತದಿಂದ ದಕ್ಷಿಣದತ್ತ ಬೀಸುತ್ತಿರುವ ಶೀತ ಗಾಳಿಯ ಪ್ರಭಾವ ಕಡಿಮೆಯಾಗಿ, ಬಂಗಾಳಕೊಲ್ಲಿಯ ಹಿಂಗಾರು ಮಾರುತಗಳು ಪ್ರಬಲಗೊಳ್ಳುವ ಸೂಚನೆಗಳಿವೆ. ಇದರಿಂದ ಕರ್ನಾಟಕದಲ್ಲಿ ಚಳಿಯ ಪ್ರಮಾಣ ಕಡಿಮೆಯಾಗುವುದರ ಜೊತೆಗೆ ಮಳೆಯ ವಾತಾವರಣವೂ ನಿರ್ಮಾಣವಾಗಬಹುದು.

ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ-ಹವಾಮಾನ ಬದಲಾವಣೆ ಹಾಗೂ ಇತರ ಮಾಹಿತಿಗಾಗಿ  ನಮ್ಮ “ದ ರೂರಲ್‌ ಮಿರರ್.ಕಾಂ”WhatsApp Channel  ಫಾಲೋಮಾಡಲು ಇಲ್ಲಿ ಕ್ಲಿಕ್‌ ಮಾಡಿ

ನ.23ರಿಂದ ದಕ್ಷಿಣ ಒಳನಾಡು, ಮಲೆನಾಡಿನಲ್ಲಿ ಮಳೆ : ಸದ್ಯದ ಮುನ್ಸೂಚನೆಯ ಪ್ರಕಾರ, ನವೆಂಬರ್ 23ರಿಂದ ದಕ್ಷಿಣ ಒಳನಾಡು ಮತ್ತು ಮಲೆನಾಡು ಜಿಲ್ಲೆಗಳಲ್ಲಿ ಮಳೆ ಆರಂಭವಾಗುವ ಸಾಧ್ಯತೆಯಿದೆ. ನವೆಂಬರ್ 24ರಿಂದ ಕರಾವಳಿ ಜಿಲ್ಲೆಗಳಲ್ಲಿಯೂ ಮಳೆಯ ಲಕ್ಷಣಗಳಿವೆ.

ಈ ಮಳೆಯು ನವೆಂಬರ್ 27ರವರೆಗೆ ಮುಂದುವರಿಯುವ ಸಾಧ್ಯತೆಗಳಿವೆ. ಮಳೆಯ ಪ್ರಮಾಣ ಮತ್ತು ವ್ಯಾಪ್ತಿ ಜಿಲ್ಲೆಯಿಂದ ಜಿಲ್ಲೆಗೆ ಬದಲಾಗಬಹುದು. ಆದ್ದರಿಂದ ರೈತರು ಸ್ಥಳೀಯ ಹವಾಮಾನ ಮುನ್ಸೂಚನೆಯನ್ನು ಗಮನಿಸುವುದು ಅಗತ್ಯ.

ಮಳೆಯ ಬಳಿಕ ಚಳಿ ಮರಳಲು ಸಮಯ ಬೇಕಾಗಬಹುದು :  ಮಳೆಯ ಪರಿಣಾಮದಿಂದ ವಾತಾವರಣದಲ್ಲಿ ತೇವಾಂಶ ಹೆಚ್ಚಾಗುವ ಸಾಧ್ಯತೆಯಿದೆ. ಇದರಿಂದ ರಾತ್ರಿ ಮತ್ತು ಬೆಳಗಿನ ಚಳಿಯ ಪ್ರಮಾಣ ಕಡಿಮೆಯಾಗಬಹುದು. ಮಳೆಯ ನಂತರ ಮತ್ತೆ ಚಳಿ ಆರಂಭವಾಗಲು ಕೆಲವು ದಿನಗಳು ಬೇಕಾಗಬಹುದು.

ನವೆಂಬರ್ ಕೊನೆಯಲ್ಲಿ ಮತ್ತೊಂದು ವಾಯುಭಾರ ಕುಸಿತದ ಸಾಧ್ಯತೆ :  ನವೆಂಬರ್ 25ರ ನಂತರ ಬಂಗಾಳಕೊಲ್ಲಿಯ ಉತ್ತರ ಸುಮಾತ್ರ ಕರಾವಳಿ ಭಾಗದಲ್ಲಿ ಮತ್ತೊಂದು ವಾಯುಭಾರ ಕುಸಿತ ರೂಪುಗೊಳ್ಳುವ ಲಕ್ಷಣಗಳಿವೆ. ಈ ವ್ಯವಸ್ಥೆ ನವೆಂಬರ್ ಕೊನೆಯ ಭಾಗದಲ್ಲಿ ದಕ್ಷಿಣ ಶ್ರೀಲಂಕಾ ಕರಾವಳಿಯನ್ನು ದಾಟಿ ಅರಬ್ಬಿ ಸಮುದ್ರ ಪ್ರವೇಶಿಸುವ ಸಾಧ್ಯತೆಯಿದೆ.  ಈ ಬೆಳವಣಿಗೆ ಇನ್ನೂ ಮುನ್ಸೂಚನೆಯ ಹಂತದಲ್ಲಿದ್ದು, ಅದರ ಚಲನೆಯ ಹಾದಿ ಮತ್ತು ತೀವ್ರತೆ ಮುಂದಿನ ದಿನಗಳಲ್ಲಿ ಸ್ಪಷ್ಟವಾಗಬೇಕಿದೆ. ಇದು ಕರ್ನಾಟಕದ ಹವಾಮಾನದ ಮೇಲೂ ಪರಿಣಾಮ ಬೀರಬಹುದಾದ್ದರಿಂದ ಮುಂದಿನ ಬೆಳವಣಿಗೆಗಳನ್ನು ಗಮನಿಸಬೇಕಿದೆ.

ರೈತರು ಗಮನಿಸಬೇಕಾದ ಅಂಶ :  ನವೆಂಬರ್ 23ರಿಂದ ಮಳೆಯ ಸಾಧ್ಯತೆ ಇರುವುದರಿಂದ ಸ್ಥಳೀಯ ಮಳೆ ಮುನ್ಸೂಚನೆಗೆ ಅನುಗುಣವಾಗಿ ಯೋಜಿಸುವುದು ಸೂಕ್ತ.

ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ-ಹವಾಮಾನ ಬದಲಾವಣೆ ಹಾಗೂ ಇತರ ಮಾಹಿತಿಗಾಗಿ  ನಮ್ಮ “ದ ರೂರಲ್‌ ಮಿರರ್.ಕಾಂ”WhatsApp Channel  ಫಾಲೋಮಾಡಲು ಇಲ್ಲಿ ಕ್ಲಿಕ್‌ ಮಾಡಿ

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ಸಾಯಿಶೇಖರ್ ಕರಿಕಳ

ಕೃಷಿಕ, ಹವಾಮಾನ ಆಸಕ್ತ

ಇದನ್ನೂ ಓದಿ

ಕರ್ನಾಟಕದಲ್ಲಿ ನಾಗರಿಕ ಸೇವಾ ಕೇಂದ್ರಗಳಿಗೆ ಹೊಸ ಹೆಸರು – ಇನ್ನು ಮುಂದೆ ‘ಪ್ರಜಾ ಸೇವಾ ಕೇಂದ್ರ’
November 20, 2026
10:27 AM
by: ದ ರೂರಲ್ ಮಿರರ್.ಕಾಂ
ಹವಾಮಾನ ವರದಿ | 19-11-2026 | ಅಕ್ವಾನ್ ಚಂಡಮಾರುತ ಶಿಥಿಲ | ನ.24ರಿಂದ ಕರ್ನಾಟಕದ ಕೆಲವೆಡೆ ಮಳೆಯ ಸಾಧ್ಯತೆ
November 19, 2026
12:54 PM
by: ಸಾಯಿಶೇಖರ್ ಕರಿಕಳ
ದೆಹಲಿಯ ಯಮುನಾ ನದಿಯಲ್ಲಿ ಮೈಕ್ರೋಪ್ಲಾಸ್ಟಿಕ್ ಮತ್ತು ರಾಸಾಯನಿಕ ಮಾಲಿನ್ಯದ ಅಧ್ಯಯನ.
ಯಮುನಾ ನದಿಯಲ್ಲಿ ಮೈಕ್ರೋಪ್ಲಾಸ್ಟಿಕ್‌ಗಳ ಜೊತೆಗೆ ವಿಷಕಾರಿ ರಾಸಾಯನಿಕಗಳ ಮಿಶ್ರಣ ಪತ್ತೆ!
November 19, 2026
10:41 AM
by: ದ ರೂರಲ್ ಮಿರರ್.ಕಾಂ
ಮ್ಯಾನ್ಮಾರ್‌ನಿಂದ ಭಾರತಕ್ಕೆ ನಡೆಯುತ್ತಿದ್ದ ಅಡಿಕೆ ಕಳ್ಳಸಾಗಣೆ ಪ್ರಕರಣದ ತನಿಖೆ.
ಅಡಿಕೆ ಸಾಗಣೆಗೆ ತಿಂಗಳಿಗೆ 120 ವಾಹನಗಳು – ನಕಲಿ ಬಿಲ್, ಹವಾಲಾ ಜಾಲ ಬಯಲು
November 19, 2026
9:49 AM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror