ಚಂಡಮಾರುತ ಎಫೆಕ್ಟ್ : ಬೆಂಗಳೂರು, ಉಡುಪಿ, ರಾಯಚೂರು ಸೇರಿದಂತೆ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಮಳೆ

May 8, 2023
10:11 AM

ಬೆಂಗಳೂರು, ಉಡುಪಿ, ರಾಯಚೂರು, ಯಾದಗಿರಿ, ಕಲಬುರಗಿ, ವಿಜಯಪುರ, ಬೀದರ್, ಕೊಪ್ಪಳ, ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಮುಂದಿನ 3 ದಿನ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ದಕ್ಷಿಣ ಒಳನಾಡಿನ ಎಲ್ಲಾ ಜಿಲ್ಲೆಗಳ ಹಲವು ಕಡೆಗಳಲ್ಲಿ ಹಾಗೂ ಉತ್ತರ ಒಳನಾಡಿನ ಕೆಲವು ಕಡೆಗಳಲ್ಲಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ.

Advertisement
Advertisement

ಹುಣಸೂರಿನಲ್ಲಿ 7 ಸೆಂ.ಮೀ ಮಳೆಯಾಗಿದೆ, ರಾಮನಗರ, ಮಾಲೂರು, ಹೊಸಕೋಟೆ, ಕನಕಪುರ, ರಾಯಚೂರು, ಸರಗೂರು, ಪರಶುರಾಂಪುರ, ಕೃಷ್ಣರಾಜಸಾಗರ, ಸೈದಾಪುರ, ಹಾಸನ, ಕುಣಿಗಲ್, ಕೆಐಎಎಲ್​, ಖಜೂರಿ, ತಿರುಮಲ, ಚಾಮರಾಜನಗರ, ಕೃಷ್ಣರಾಜಪೇಟೆ, ಬೀದರ್, ಗೋಣಿಕೊಪ್ಪಲು, ಹರದನಹಳ್ಳಿ, ಶ್ರೀರಂಗಪಟ್ಟಣ, ಚಿಕ್ಕನಹಳ್ಳಿ, ಬೆಳ್ಳೂರು, ಮೈಸೂರಿನಲ್ಲಿ ಮಳೆಯಾಗಲಿದೆ.

Advertisement

ಕಲಬುರಗಿಯಲ್ಲಿ 37.0 ಡಿಗ್ರಿ ಸೆಲ್ಸಿಯಸ್​ ಅತಿ ಗರಿಷ್ಠ ಉಷ್ಣಾಂಶ ದಾಖಲಾಗಿದೆ. ಬೆಂಗಳೂರಿನಲ್ಲಿ ಸಾಮಾನ್ಯವಾಗಿ ಮೋಡಕವಿದ ವಾತಾವರಣವಿರಲಿದ್ದು, ಸಾಧಾರಣ ಮಳೆಯಾಗಲಿದೆ. ಎಚ್​ಎಎಲ್​ನಲ್ಲಿ 29.4 ಡಿಗ್ರಿ ಸೆಲ್ಸಿಯಸ್​ ಗರಿಷ್ಠ ಉಷ್ಣಾಂಶ, 20.4 ಡಿಗ್ರಿ ಸೆಲ್ಸಿಯಸ್​ ಕನಿಷ್ಠ ಉಷ್ಣಾಂಶ, ನಗರದಲ್ಲಿ 29.3 ಡಿಗ್ರಿ ಸೆಲ್ಸಿಯಸ್​ ಗರಿಷ್ಠ ಉಷ್ಣಾಂಶ, 21.1 ಡಿಗ್ರಿ ಸೆಲ್ಸಿಯಸ್​ ಕನಿಷ್ಠ ಉಷ್ಣಾಂಶ, ಕೆಐಎಎಲ್​ನಲ್ಲಿ 29.6 ಡಿಗ್ರಿ ಸೆಲ್ಸಿಯಸ್​ ಗರಿಷ್ಠ ಉಷ್ಣಾಂಶ, 21.4 ಡಿಗ್ರಿ ಸೆಲ್ಸಿಯಸ್​ ಕನಿಷ್ಠ ಉಷ್ಣಾಂಶ ದಾಖಲಾಗಿದೆ.

ಮೋಚಾ ಚಂಡಮಾರುತದ ಸೃಷ್ಟಿ ಮತ್ತು ನಂತರ ಅದರ ಪ್ರಭಾವ ತೀವ್ರಗೊಂಡಿದ್ದು, ವ್ಯಾಪಕವಾದ ಗುಡುಗು ಸಹಿತ ಮಳೆಗೆ ಕಾರಣವಾಗಲಿದೆ. ಮತದಾನ ಸಾಮಗ್ರಿಗಳೊಂದಿಗೆ ಇವಿಎಂಗಳು ಮತ್ತು ವಿವಿಪ್ಯಾಟ್ ಯಂತ್ರಗಳ ಸಾಗಣೆ ಮತ್ತು ಚಲನೆಯ ಮೇಲೆ ಪರಿಣಾಮ ಬೀರಿದೆ ಎಂದು ಕರ್ನಾಟಕದ ಮುಖ್ಯ ಚುನಾವಣಾ ಕಚೇರಿಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Advertisement

ಹವಾಮಾನ ತಜ್ಞರ ಪ್ರಕಾರ, ಆಗ್ನೇಯ ಬಂಗಾಳದಲ್ಲಿ ಶೀಘ್ರದಲ್ಲೇ ಚಂಡಮಾರುತದ ಪರಿಚಲನೆ ರಚನೆಯಾಗುವ ಸಾಧ್ಯತೆ ಇದೆ. ಇದರ ಪ್ರಭಾವದಿಂದ ಮೇ 7ರ ಸುಮಾರಿಗೆ ಇದೇ ಪ್ರದೇಶದಲ್ಲಿ ಅಪಾರ ಮಳೆಯಾಗುವ ಸಾಧ್ಯತೆ ಇದೆ. ಇದು ಮೇ 8 ರ ಸುಮಾರಿಗೆ ಇದು ಇನ್ನಷ್ಟು ಬಲಗೊಳ್ಳಲಿದೆ.

ಏಜೆನ್ಸಿ ಪ್ರಕಾರ, ತಾಪಮಾನ ಏರಿಕೆಯ ಹೊರತಾಗಿಯೂ, ಮುಂದಿನ ವಾರದವರೆಗೆ ಈ ರಾಜ್ಯಗಳಲ್ಲಿ ಶಾಖದ ಅಲೆಯು ಕಡಿಮೆ ಇರಲಿದೆ. ಮೇ ತಿಂಗಳ ಎರಡನೇ ವಾರದಿಂದ ಹವಾಮಾನವು ಸಂಪೂರ್ಣವಾಗಿ ಬದಲಾಗುತ್ತದೆ. ಜನರು ಆಗಾಗ ಬಿಸಿಲಿನ ತಾಪವನ್ನು ಎದುರಿಸಬೇಕಾಗುತ್ತದೆ.

Advertisement
Advertisement
Advertisement

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು[email protected] ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ವರುಣ ಕೃಪೆ ತೋರದಿದ್ರೆ ಭಾರಿ ಸಂಕಷ್ಟ : ಡೆಡ್ ಸ್ಟೋರೇಜ್ ತಲುಪಿದ ತುಂಗಭದ್ರಾ ಜಲಾಶಯ!
May 19, 2024
2:16 PM
by: The Rural Mirror ಸುದ್ದಿಜಾಲ
Karnataka Weather | 19-05-2024 | ಇಂದೂ ಮಳೆ ಇದೆ ಅಲ್ಲಲ್ಲಿ | ಮೇ.22 ನಂತರ ಚಂಡಮಾರುತ ಸಾಧ್ಯತೆ |
May 19, 2024
12:22 PM
by: ಸಾಯಿಶೇಖರ್ ಕರಿಕಳ
Karnataka Weather | 18-05-2024 | ರಾಜ್ಯದ ಹಲವು ಕಡೆ ಮಳೆ | ವಾಯುಭಾರ ಕುಸಿತದ ಲಕ್ಷಣ | ವಾಯುಭಾರ ಕುಸಿತದ ಪ್ರಭಲತೆಯ ಮೇಲೆ ಮುಂಗಾರು ಪರಿಣಾಮ |
May 18, 2024
1:02 PM
by: ಸಾಯಿಶೇಖರ್ ಕರಿಕಳ

You cannot copy content of this page - Copyright -The Rural Mirror