#CleanAir | ಶುದ್ಧಗಾಳಿ ಇರುವ ನಗರಗಳಲ್ಲಿ ಕರ್ನಾಟಕ ರಾಜ್ಯಕ್ಕೆ ಮೇಲುಗೈ : ಚಿಕ್ಕಮಗಳೂರಿಗೆ ದೇಶದಲ್ಲೇ 2ನೇ ಸ್ಥಾನ : ಹತ್ತರೊಳಗೆ ಇನ್ನಷ್ಟು ರಾಜ್ಯದ ಸಿಟಿಗಳು

October 6, 2023
3:04 PM
ರಾಜ್ಯದ 8 ನಗರಗಳಿಗೆ ಈ ಸ್ಥಾನ ದೊರೆಯುವ ಮೂಲಕ ಇಡೀ ದೇಶದಲ್ಲೇ ಕರ್ನಾಟಕ ಅತ್ಯಂತ ಶುದ್ಧಗಾಳಿ ಇರುವ ರಾಜ್ಯವೆಂಬ ಗರಿ ಕರುನಾಡಿಗೆ ಸಿಕ್ಕಿದೆ. ರೆಸ್ಪೈರರ್ ಲಿವಿಂಗ್ ಸೈನ್ಸಸ್‌ನ ವರದಿಯಲ್ಲಿ ಈ ಅಂಶ ತಿಳಿದು ಬಂದಿದೆ.

ಭಾರತದಲ್ಲಿ ಅತ್ಯಂತ ಶುದ್ಧಗಾಳಿ ಇರುವ ಅಗ್ರ 10 ಸ್ಥಳಗಳ ಪೈಕಿ ಕರ್ನಾಟಕ ಮೇಲುಗೈ ಸಾಧಿಸಿದ್ದು .ಅದರಲ್ಲೂ ಕಾಫಿನಾಡು ಚಿಕ್ಕಮಗಳೂರು ಟಾಪ್ 10ರ ಪೈಕಿ 2ನೇ ಸ್ಥಾನ ಲಭಿಸಿದ್ದು ಕಾಫಿ ನಾಡಿಗರು ಮತ್ತಷ್ಟು ಹೆಮ್ಮೆಪಡುವಂತಾಗಿದೆ.

Advertisement

ರಾಜ್ಯದ 8 ನಗರಗಳಿಗೆ ಈ ಸ್ಥಾನ ದೊರೆಯುವ ಮೂಲಕ ಇಡೀ ದೇಶದಲ್ಲೇ ಕರ್ನಾಟಕ ಅತ್ಯಂತ ಶುದ್ಧಗಾಳಿ ಇರುವ ರಾಜ್ಯವೆಂಬ ಗರಿ ಕರುನಾಡಿಗೆ ಸಿಕ್ಕಿದೆ. ರೆಸ್ಪೈರರ್ ಲಿವಿಂಗ್ ಸೈನ್ಸಸ್‌ನ ವರದಿಯಲ್ಲಿ ಈ ಅಂಶ ತಿಳಿದು ಬಂದಿದೆ. ರೆಸ್ಪೈರರ್ ಲಿವಿಂಗ್ ಸೈನ್ಸಸ್‌ ಎರಡು ರೀತಿಯಲ್ಲಿ ಗಾಳಿಯ ಗುಣಮಟ್ಟದ ಡೇಟಾವನ್ನು ವಿಶ್ಲೇಷಿಸುತ್ತದೆ. ಮೊದಲು ಸರ್ಕಾರದ PM2.5 ಡೇಟಾದಲ್ಲಿ ಎನ್‌ಸಿಆರ್ ಮತ್ತು ರಾಷ್ಟ್ರೀಯ ಶುದ್ಧ ಗಾಳಿ ಕಾರ್ಯಕ್ರಮದಲ್ಲಿ ಪಟ್ಟಿ ಮಾಡಲಾದ ಇತರ ನಗರಗಳಲ್ಲಿ ಹಿಂದಿನ ವರ್ಷಕ್ಕಿಂತ ಗಾಳಿಯ ಗುಣಮಟ್ಟದಲ್ಲಿ ಸುಧಾರಣೆಯನ್ನು ಪತ್ತೆಹಚ್ಚಲು ಕಳೆದ ಒಂದು ವರ್ಷದ (1 ಅಕ್ಟೋಬರ್, 2022 ರಿಂದ 30 ಸೆಪ್ಟೆಂಬರ್, 2023) ಮಾಹಿತಿಯನ್ನು ಕಲೆ ಹಾಕಿ ವಿಶ್ಲೇಷಣೆ ಮಾಡಲಾಗುವುದು.

ಇನ್ನೊಂದು ಕಡೆ ಚಳಿಗಾಲದಲ್ಲಿ PM2.5 ಡೇಟಾ, ಸರಿಸುಮಾರು ಅಕ್ಟೋಬರ್-ಮಾರ್ಚ್ ಮಾಲಿನ್ಯದ ಮಟ್ಟಗಳು ಹೆಚ್ಚಾದಾಗ ಅದರ ಮಾಹಿತಿ ಪಡೆದು ವಿಶ್ಲೇಷಣೆ ಮಾಡಿ ಅತ್ಯಂತ ಶುದ್ಧಗಾಳಿ ಇರುವ ನಗರವನ್ನು ಪತ್ತೆ ಮಾಡಲಾಗುತ್ತದೆ. ಅತ್ಯಂತ ಶುದ್ಧ ಗಾಳಿ ಇರುವ ಸ್ಥಳಗಳ ಪೈಕಿ ಮೊದಲ ಸ್ಥಾನವನ್ನು ಮಿಜೋರಾಂನ ಐಜ್ವಾಲ್‌ ಪಡೆದು ಕೊಂಡರೆ, ಎರಡನೇ ಸ್ಥಾನವನ್ನು ಕಾಫಿನಾಡು ಚಿಕ್ಕಮಗಳೂರು ಪಡೆದು ಕೊಂಡಿದೆ, ಮೂರನೇ ಸ್ಥಾನದಲ್ಲಿ ಹರಿಯಾಣದ ಮಂಡಿಖೇರಾ ನಗರವಿದೆ ಉಳಿದಂತೆ 7 ಸ್ಥಾನಗಳಲ್ಲೂ ಕರ್ನಾಟಕವೇ ಇದೆ. ಕ್ರಮವಾಗಿ ಚಾಮರಾಜನಗರ, ಮಡಿಕೇರಿ, ವಿಜಯಪುರ, ರಾಯಚೂರು, ಶಿವಮೊಗ್ಗ, ಗದಗ, ಮೈಸೂರು ಸ್ಥಾನ ಪಡೆದಿವೆ.

Advertisement

Advertisement

ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಹಾಲು ಮೊಸರು, ವಿದ್ಯುತ್ ದರ ದುಬಾರಿ | ಬೆಂಗಳೂರಿನಲ್ಲಿ ಕಸಕ್ಕೂ ತೆರಿಗೆ | ರೈತರಿಗೆ ಪ್ರೋತ್ಸಾಹಧನಕ್ಕೆ ನಿರ್ಧಾರ |
April 1, 2025
8:00 AM
by: The Rural Mirror ಸುದ್ದಿಜಾಲ
ವೃಶ್ಚಿಕ ರಾಶಿ ಯುಗಾದಿ ಸಂವತ್ಸರದ ಫಲಗಳು | ಹೇಗಿದೆ ಈ ವರ್ಷ..?
April 1, 2025
7:32 AM
by: ದ ರೂರಲ್ ಮಿರರ್.ಕಾಂ
ದೇವಸ್ಥಾನದ ಬ್ರಹ್ಮಕಲಶೋತ್ಸವಗಳಲ್ಲಿ “ರಾಜಕೀಯದ ಚಪ್ಪಲು” ಹೊರಗಿಡಬೇಕು |
April 1, 2025
7:23 AM
by: ಮಹೇಶ್ ಪುಚ್ಚಪ್ಪಾಡಿ
ಏಪ್ರಿಲ್ 3 ಹಾಗೂ 4 ರಾಜ್ಯದ ಹಲವು ಜಿಲ್ಲೆಗಳಲ್ಲಿ ಭಾರೀ ಮಳೆ ಸಾಧ್ಯತೆ | ಎಲ್ಲೋ ಅಲರ್ಟ್ ಘೋಷಿಸಿದ ಹವಾಮಾನ ಇಲಾಖೆ
March 31, 2025
11:40 PM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror

Join Our Group