Advertisement
ವೆದರ್ ಮಿರರ್

ಹವಾಮಾನ ವರದಿ | 20-06-2026 | ಕರ್ನಾಟಕದಲ್ಲಿ ದುರ್ಬಲ ಮುಂಗಾರು ಮುಂದುವರಿಕೆ – ಜೂನ್ 28 ರಿಂದ ಮಳೆ ಚೇತರಿಕೆ ಸಾಧ್ಯತೆ

Share

ರಾಜ್ಯದಲ್ಲಿ ಮುಂಗಾರು ಚಟುವಟಿಕೆ ಇನ್ನೂ ದುರ್ಬಲವಾಗಿಯೇ ಮುಂದುವರಿದಿದ್ದು, 2026 ರ ಜೂನ್ 21 ರ ಬೆಳಿಗ್ಗೆ 8 ಗಂಟೆಯವರೆಗಿನ ಹವಾಮಾನ ಮುನ್ಸೂಚನೆಯ ಪ್ರಕಾರ ಕರಾವಳಿ, ಮಲೆನಾಡು ಹಾಗೂ ದಕ್ಷಿಣ ಒಳನಾಡಿನ ಕೆಲ ಭಾಗಗಳಲ್ಲಿ ಮಾತ್ರ ಸಾಧಾರಣ ಮಳೆಯ ನಿರೀಕ್ಷೆಯಿದೆ. ಬಂಗಾಳಕೊಲ್ಲಿ ಹಾಗೂ ಅರಬ್ಬಿ ಸಮುದ್ರದಲ್ಲಿ ಯಾವುದೇ ವಾಯುಭಾರ ಕುಸಿತ ಅಥವಾ ಚಂಡಮಾರುತದ ವ್ಯವಸ್ಥೆಗಳು ಕಾಣಿಸದಿರುವುದರಿಂದ ರಾಜ್ಯಾದ್ಯಂತ ಮುಂಗಾರು ಬಲ ಪಡೆಯುವ ಸಾಧ್ಯತೆ ತಾತ್ಕಾಲಿಕವಾಗಿ ಕ್ಷೀಣಿಸಿದೆ.

ಕರಾವಳಿಯಲ್ಲಿ ಬಿಸಿಲು-ಮೋಡದ ವಾತಾವರಣ :  ಕಾಸರಗೋಡು, ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಬಿಸಿಲಿನ ಜೊತೆಗೆ ಮೋಡದ ವಾತಾವರಣ ಮುಂದುವರಿಯಲಿದ್ದು, ಮಧ್ಯಾಹ್ನ ಅಥವಾ ಸಂಜೆ ವೇಳೆಗೆ ಅಲ್ಲಲ್ಲಿ ತುಂತುರು ಮಳೆಯಾಗುವ ಸಾಧ್ಯತೆ ಇದೆ. ಕೆಲ ಸೀಮಿತ ಪ್ರದೇಶಗಳಲ್ಲಿ ಮಳೆಯ ಪ್ರಮಾಣ ಸ್ವಲ್ಪ ಹೆಚ್ಚಾಗಬಹುದು. ಉತ್ತರ ಕನ್ನಡ ಜಿಲ್ಲೆಯಲ್ಲಿ ಹೆಚ್ಚಿನ ಅವಧಿಯೂ ಬಿಸಿಲಿನ ವಾತಾವರಣವಿರುವ ನಿರೀಕ್ಷೆಯಿದೆ.

ಪ್ರಸ್ತುತ ಸ್ಥಿತಿಯಲ್ಲಿ ಕರಾವಳಿ ಜಿಲ್ಲೆಗಳಲ್ಲಿ ದುರ್ಬಲ ಮುಂಗಾರು ಮುಂದುವರಿಯಲಿದ್ದು, ಜೂನ್ 28ರ ಬಳಿಕ ಅಲ್ಪ ಪ್ರಮಾಣದ ಚೇತರಿಕೆ ಕಾಣುವ ಸಾಧ್ಯತೆ ಇದೆ. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ-ಹವಾಮಾನ ಬದಲಾವಣೆ ಹಾಗೂ ಇತರ ಮಾಹಿತಿಗಾಗಿ  ನಮ್ಮ “ದ ರೂರಲ್‌ ಮಿರರ್.ಕಾಂ”WhatsApp Channel  ಗೆ ಇಲ್ಲಿ ಕ್ಲಿಕ್‌ ಮಾಡಿ

ಮಲೆನಾಡಿನಲ್ಲಿ ಸಂಜೆ-ರಾತ್ರಿ ಮಳೆ : ಕೊಡಗು, ಹಾಸನ ಹಾಗೂ ಚಿಕ್ಕಮಗಳೂರು ಜಿಲ್ಲೆಗಳ ಕೆಲವು ಭಾಗಗಳಲ್ಲಿ ಸಂಜೆ ಮತ್ತು ರಾತ್ರಿ ವೇಳೆ ಮಳೆಯಾಗುವ ಮುನ್ಸೂಚನೆ ಇದೆ. ಕೆಲವೆಡೆ ಸಣ್ಣ ಪ್ರಮಾಣದ ಗುಡುಗು ಸಹ ಸಂಭವಿಸಬಹುದು. ಶಿವಮೊಗ್ಗ ಜಿಲ್ಲೆಯಲ್ಲಿ ಮೋಡ ಕವಿದ ವಾತಾವರಣದೊಂದಿಗೆ ತುಂತುರು ಮಳೆಯ ನಿರೀಕ್ಷೆಯಿದೆ.

ಮಲೆನಾಡು ಭಾಗದಲ್ಲಿ ಜೂನ್ 23ರವರೆಗೆ ಸಾಮಾನ್ಯ ಮಳೆ ಮುಂದುವರಿಯಲಿದ್ದು, ನಂತರ ಮಳೆ ಪ್ರಮಾಣ ಸ್ವಲ್ಪ ಕಡಿಮೆಯಾಗುವ ಸಾಧ್ಯತೆ ಇದೆ. ಜೂನ್ 28ರಿಂದ ಮತ್ತೆ ಮುಂಗಾರು ಚಟುವಟಿಕೆ ಚೇತರಿಕೆ ಕಾಣುವ ನಿರೀಕ್ಷೆ ಇದೆ.

ಉತ್ತರ ಒಳನಾಡಿನಲ್ಲಿ ಮಳೆಯ ನಿರೀಕ್ಷೆ : ಉತ್ತರ ಒಳನಾಡಿನ ಬಹುತೇಕ ಜಿಲ್ಲೆಗಳಲ್ಲಿ ಬಿಸಿಲು ಹಾಗೂ ಮೋಡದ ವಾತಾವರಣ ಇರಲಿದೆ. ಜೂನ್ 21ರಿಂದ ಈ ಭಾಗದಲ್ಲಿ ಮುಂಗಾರು ಮಳೆ ಚುರುಕುಗೊಳ್ಳುವ ಲಕ್ಷಣಗಳಿವೆ.

ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ :  ಮೈಸೂರು, ಚಾಮರಾಜನಗರ, ಮಂಡ್ಯ, ರಾಮನಗರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ಚಿತ್ರದುರ್ಗ, ದಾವಣಗೆರೆ ಹಾಗೂ ವಿಜಯನಗರ ಜಿಲ್ಲೆಗಳ ಕೆಲವು ಭಾಗಗಳಲ್ಲಿ ಮಳೆಯಾಗುವ ಸಾಧ್ಯತೆ ಇದೆ. ಸಾಮಾನ್ಯ ಪ್ರಮಾಣದ ಗುಡುಗು ಸಹ ಸಂಭವಿಸಬಹುದು.

ಈ ಭಾಗಗಳಲ್ಲಿ ಜೂನ್ 27ರವರೆಗೆ ಮಳೆ ಮುಂದುವರಿಯುವ ಲಕ್ಷಣಗಳು ಕಂಡುಬಂದಿವೆ.

ರೈತರಿಗೆ ಸಲಹೆ :  ಮುಂದಿನ ಕೆಲವು ದಿನಗಳಲ್ಲಿಯೂ ರಾಜ್ಯದಲ್ಲಿ ಮಳೆಯ ಕೊರತೆ ಮುಂದುವರಿಯುವ ಸಾಧ್ಯತೆ ಇರುವುದರಿಂದ ರೈತರು ಮಳೆ ನೀರಿನ ಕೊಯ್ಲು, ಸಂಗ್ರಹಣೆ ಹಾಗೂ ನೀರಿನ ಸಮರ್ಪಕ ಬಳಕೆಗೆ ಆದ್ಯತೆ ನೀಡುವುದು ಸೂಕ್ತ. ತೋಟಗಾರಿಕೆ ಹಾಗೂ ಮಳೆ ಆಧಾರಿತ ಬೆಳೆಗಳ ಪ್ರದೇಶಗಳಲ್ಲಿ ನೀರು ಸಂರಕ್ಷಣೆ ಕ್ರಮಗಳನ್ನು ಕೈಗೊಳ್ಳುವುದು ಅಗತ್ಯವಾಗಿದೆ.

Karnataka is likely to witness a weak monsoon phase until the end of June, with only scattered rainfall expected across coastal, Malnad and southern interior districts. Weather systems over the Bay of Bengal and Arabian Sea remain inactive, reducing chances of widespread rainfall. Coastal and Malnad regions may receive light showers, while southern interior districts could experience localized rain and thunderstorms. Farmers are advised to harvest and store rainwater due to the possibility of continued rainfall deficiency in the coming days.

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ಸಾಯಿಶೇಖರ್ ಕರಿಕಳ

ಕೃಷಿಕ, ಹವಾಮಾನ ಆಸಕ್ತ

Published by
ಸಾಯಿಶೇಖರ್ ಕರಿಕಳ

Recent Posts

ಅಡಿಕೆ-ಕಾಳುಮೆಣಸು ಬೆಳೆವಿಮೆ ನೋಂದಣಿಗೆ ಜುಲೈ 31 ಕೊನೆಯ ದಿನ – ದಕ್ಷಿಣ ಕನ್ನಡ ರೈತರಿಗೆ ಮಹತ್ವದ ಮಾಹಿತಿ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಡಿಕೆ ಹಾಗೂ ಕಾಳುಮೆಣಸು ಬೆಳೆಗಳಿಗೆ ಹವಾಮಾನ ಆಧಾರಿತ ಬೆಳೆವಿಮೆ…

2 hours ago

ಅಕ್ರಮ ಆಮದಿನ ಕರಾಳ ನೆರಳಲ್ಲಿ ಅಡಿಕೆ ಮಾರುಕಟ್ಟೆ – ಮಹಾರಾಷ್ಟ್ರ ಘಟನೆ ಬಿಚ್ಚಿಟ್ಟ ಕಹಿ ಸತ್ಯಗಳೇನು..?

ಮಹಾರಾಷ್ಟ್ರದಲ್ಲಿ 50ಕ್ಕೂ ಹೆಚ್ಚು ಅಡಿಕೆ ಲಾರಿಗಳನ್ನು ತಡೆಹಿಡಿದ ಘಟನೆ ಅಕ್ರಮ ಆಮದು ಮತ್ತು…

3 hours ago

“ಅನ್ನವೇ ಪರಮಾತ್ಮ” ಸಂದೇಶದೊಂದಿಗೆ ಗೋಕರ್ಣದಲ್ಲಿ ಈ ಬಾರಿ ರಾಘವೇಶ್ವರ ಶ್ರೀಗಳಿಂದ ‘ಅನ್ನಬ್ರಹ್ಮ ಚಾತುರ್ಮಾಸ್ಯ’

ಗೋಕರ್ಣದಲ್ಲಿ ನಡೆಯಲಿರುವ ‘ಅನ್ನಬ್ರಹ್ಮ ಚಾತುರ್ಮಾಸ್ಯ’ದ ಮೂಲಕ ಆಹಾರದ ಮಹತ್ವ ಹಾಗೂ ಅನ್ನ ವ್ಯರ್ಥ…

18 hours ago

ತಿರಸ್ಕೃತ ಮಾವು, ತೆಂಗಿನಿಂದಲೂ ಕೋಟಿ ಮೌಲ್ಯದ ಉದ್ಯಮ – ‘ಜೀರೋ ವೇಸ್ಟ್’ ಮಾದರಿ ರೈತರಿಗೆ ಹೊಸ ಆಶಾಕಿರಣ

ಮಾರುಕಟ್ಟೆಯಲ್ಲಿ ತಿರಸ್ಕೃತವಾಗುವ ಗ್ರೇಡ್-ಬಿ ಮಾವು ಮತ್ತು ತೆಂಗುಗಳನ್ನು ಮೌಲ್ಯವರ್ಧಿತ ಉತ್ಪನ್ನಗಳಾಗಿ ಪರಿವರ್ತಿಸಿ ರೈತರಿಗೆ…

19 hours ago

ಮಹಾರಾಷ್ಟ್ರದಲ್ಲಿ50 ಕ್ಕೂ ಹೆಚ್ಚು ಅಡಿಕೆ ಲಾರಿಗಳಿಗೆ ತಡೆ – ವ್ಯಾಪಾರಿಗಳಿಗೆ ಸಂಕಷ್ಟ- ಶಿವಮೊಗ್ಗ ಸಂಸದ, ಮಾಜಿ ಸಿಎಂ ಯಡಿಯೂರಪ್ಪ ಅವರಿಗೆ ಮನವಿ

ಮಹಾರಾಷ್ಟ್ರದಲ್ಲಿ ಅಡಿಕೆ ಲಾರಿಗಳ ತಡೆ ರಾಜ್ಯದ ಅಡಿಕೆ ವ್ಯಾಪಾರಿಗಳಿಗೆ ಹೊಸ ಸಂಕಷ್ಟ ತಂದೊಡ್ಡಿದೆ.…

1 day ago