Advertisement
ವೆದರ್ ಮಿರರ್

ಹವಾಮಾನ ವರದಿ | 23-11-2026 | ನ.24 ರಿಂದ ಮಲೆನಾಡು, ನ.25 ರಿಂದ ಕರಾವಳಿ ಮತ್ತು ದಕ್ಷಿಣ ಒಳನಾಡಿನಲ್ಲಿ ಮಳೆ ಸಾಧ್ಯತೆ

Share

ಕರ್ನಾಟಕದ ಹವಾಮಾನದಲ್ಲಿ ಮುಂದಿನ ಎರಡು ದಿನಗಳಲ್ಲಿ ಬದಲಾವಣೆ ಕಾಣಿಸಿಕೊಳ್ಳುವ ಸಾಧ್ಯತೆಯಿದೆ. ನವೆಂಬರ್ 24ರಂದು ಬೆಳಿಗ್ಗೆ 8 ಗಂಟೆಯವರೆಗಿನ ಮುನ್ಸೂಚನೆಯ ಪ್ರಕಾರ, ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಹಗಲು ಒಣ ಹವೆ ಮುಂದುವರಿಯಲಿದ್ದು, ಸಂಜೆ ಮತ್ತು ರಾತ್ರಿ ಕೆಲವು ಭಾಗಗಳಲ್ಲಿ ಮೋಡದ ವಾತಾವರಣ ಹಾಗೂ ತುಂತುರು ಮಳೆಯ ಸಾಧ್ಯತೆಗಳಿವೆ. ಮಲೆನಾಡಿನಲ್ಲಿ ನವೆಂಬರ್ 24ರಿಂದ, ಕರಾವಳಿ ಮತ್ತು ದಕ್ಷಿಣ ಒಳನಾಡಿನಲ್ಲಿ ನವೆಂಬರ್ 25ರಿಂದ ಅಲ್ಲಲ್ಲಿ ಮಳೆಯಾಗುವ ಸೂಚನೆಗಳಿವೆ.

ಕರಾವಳಿ: ನ.25ರಿಂದ ಮಳೆಯ ಸಾಧ್ಯತೆ :  ಕಾಸರಗೋಡು ಸೇರಿದಂತೆ ರಾಜ್ಯದ ಕರಾವಳಿ ಜಿಲ್ಲೆಗಳಲ್ಲಿ ಬಿಸಿಲು ಮತ್ತು ಒಣ ಹವೆ ಮುಂದುವರಿಯುವ ಸಾಧ್ಯತೆಯಿದೆ. ಸಂಜೆ ಮತ್ತು ರಾತ್ರಿ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳ ಘಟ್ಟದ ಕೆಳಗಿನ ಪ್ರದೇಶಗಳಲ್ಲಿ ಅಲ್ಲಲ್ಲಿ ಹಗುರ ಮೋಡದ ವಾತಾವರಣ ಕಂಡುಬರಬಹುದು.

ಪ್ರಸ್ತುತ ಮುನ್ಸೂಚನೆಯಂತೆ ನವೆಂಬರ್ 25ರಿಂದ ಕರಾವಳಿ ಭಾಗದಲ್ಲಿ ಮಳೆ ಆರಂಭವಾಗುವ ಲಕ್ಷಣಗಳಿವೆ. ಕರಾವಳಿಯ ಎಲ್ಲ ಪ್ರದೇಶಗಳಲ್ಲಿಯೂ ಒಂದೇ ರೀತಿಯ ಮಳೆಯಾಗಲಿದೆ ಎಂದು ನಿರೀಕ್ಷಿಸಲಾಗಿಲ್ಲ.

ಮಲೆನಾಡು: ನ.24ರಿಂದ ಮಳೆ ಆರಂಭದ ಸೂಚನೆ : ಮಲೆನಾಡಿನ ಜಿಲ್ಲೆಗಳಲ್ಲಿ ಹಗಲು ಒಣ ಹವೆ ಮುಂದುವರಿಯಲಿದೆ. ಸಂಜೆ ಮತ್ತು ರಾತ್ರಿ ಕೊಡಗು, ಹಾಸನ ಜಿಲ್ಲೆಯ ಸಕಲೇಶಪುರ ಹಾಗೂ ಚಿಕ್ಕಮಗಳೂರು ಜಿಲ್ಲೆಯ ಕೆಲವು ಭಾಗಗಳಲ್ಲಿ ಹಗುರ ಮೋಡದ ವಾತಾವರಣ ನಿರ್ಮಾಣವಾಗುವ ಸಾಧ್ಯತೆಯಿದೆ. ಪ್ರಸ್ತುತ ಮುನ್ಸೂಚನೆಯ ಪ್ರಕಾರ, ನವೆಂಬರ್ 24ರಿಂದಲೇ ಮಲೆನಾಡಿನ ಜಿಲ್ಲೆಗಳಲ್ಲಿ ಅಲ್ಲಲ್ಲಿ ಮಳೆ ಆರಂಭವಾಗುವ ಸೂಚನೆಗಳಿವೆ.

ಉತ್ತರ ಒಳನಾಡು: ಮೋಡದ ವಾತಾವರಣ, ಮಳೆಯ ನಿರೀಕ್ಷೆ ಕಡಿಮೆ : ಉತ್ತರ ಒಳನಾಡಿನ ಜಿಲ್ಲೆಗಳಲ್ಲಿ ಒಣ ಹವೆ ಮುಂದುವರಿಯುವ ಸಾಧ್ಯತೆಯಿದೆ. ಆದರೆ ಸಂಜೆ ಮತ್ತು ರಾತ್ರಿ ಬಳ್ಳಾರಿ, ರಾಯಚೂರು, ಕಲಬುರಗಿ, ಯಾದಗಿರಿ ಹಾಗೂ ಬೀದರ್ ಜಿಲ್ಲೆಗಳ ಕೆಲವು ಭಾಗಗಳಲ್ಲಿ ಹಗುರ ಮೋಡದ ವಾತಾವರಣ ಕಂಡುಬರಬಹುದು.

ನವೆಂಬರ್ 24ರಿಂದ ಉತ್ತರ ಒಳನಾಡಿನ ಬಹುತೇಕ ಜಿಲ್ಲೆಗಳಲ್ಲಿ ಅಲ್ಲಲ್ಲಿ ಮೋಡದ ವಾತಾವರಣದ ಸಾಧ್ಯತೆಯಿದ್ದರೂ ಸದ್ಯಕ್ಕೆ ಮಳೆಯ ನಿರೀಕ್ಷೆಯಿಲ್ಲ. ಆದರೆ ಗಾಳಿಯ ಒತ್ತಡದ ಪರಿಸ್ಥಿತಿ ಅನುಕೂಲಕರವಾದರೆ ಬಳ್ಳಾರಿ ಮತ್ತು ಸುತ್ತಮುತ್ತಲಿನ ಜಿಲ್ಲೆಗಳಲ್ಲಿ ಅನಿರೀಕ್ಷಿತ ಮಳೆಯಾಗುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ.

ದಕ್ಷಿಣ ಒಳನಾಡು: ಬೆಂಗಳೂರು ಭಾಗದಲ್ಲಿ ತುಂತುರು ಮಳೆ : ದಕ್ಷಿಣ ಒಳನಾಡಿನ ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಮತ್ತು ಬೆಂಗಳೂರು ನಗರ ಜಿಲ್ಲೆಗಳ ಕೆಲವು ಭಾಗಗಳಲ್ಲಿ ಸಂಜೆ ಹಾಗೂ ರಾತ್ರಿ ತುಂತುರು ಮಳೆಯಾಗುವ ಸಾಧ್ಯತೆಯಿದೆ. ಉಳಿದ ಜಿಲ್ಲೆಗಳಲ್ಲಿ ಸಂಜೆ ಮತ್ತು ರಾತ್ರಿ ಅಲ್ಲಲ್ಲಿ ಮೋಡದ ವಾತಾವರಣ ಕಂಡುಬರಬಹುದು. ಪ್ರಸ್ತುತ ಮುನ್ಸೂಚನೆಯಂತೆ ನವೆಂಬರ್ 25ರಿಂದ ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿಯೂ ಅಲ್ಲಲ್ಲಿ ಮಳೆಯಾಗುವ ಸಾಧ್ಯತೆಯಿದೆ.

ರೈತರು ಗಮನಿಸಬೇಕಾದ ಅಂಶ :  ಮಲೆನಾಡಿನಲ್ಲಿ ಮಳೆಯ ಸಾಧ್ಯತೆ ಈಗಾಗಲೇ ಕಾಣಿಸುತ್ತಿದ್ದು, ಕರಾವಳಿ ಮತ್ತು ದಕ್ಷಿಣ ಒಳನಾಡಿನಲ್ಲಿ ಮುಂದಿನ ದಿನಗಳಿಂದ ಮಳೆ ಆರಂಭವಾಗುವ ಸೂಚನೆಗಳಿವೆ.

ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ-ಹವಾಮಾನ ಬದಲಾವಣೆ ಹಾಗೂ ಇತರ ಮಾಹಿತಿಗಾಗಿ  ನಮ್ಮ “ದ ರೂರಲ್‌ ಮಿರರ್.ಕಾಂ”WhatsApp Channel  ಫಾಲೋಮಾಡಲು ಇಲ್ಲಿ ಕ್ಲಿಕ್‌ ಮಾಡಿ

Karnataka is likely to see a gradual change in weather over the next two days. Dry conditions will continue during the daytime across most regions on November 24, while isolated light clouds and drizzle are possible in some areas during the evening and night. Malnad districts may receive scattered rain from November 24. Coastal districts, including parts of Dakshina Kannada and Udupi, may see rain from November 25, particularly around the foothills. In South Interior Karnataka, isolated drizzle is possible around Bengaluru, Kolar and Chikkaballapur, with more scattered rain chances from November 25. North Interior Karnataka is likely to remain mostly dry, although cloud cover may increase in some districts.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ಸಾಯಿಶೇಖರ್ ಕರಿಕಳ

ಕೃಷಿಕ, ಹವಾಮಾನ ಆಸಕ್ತ

Published by
ಸಾಯಿಶೇಖರ್ ಕರಿಕಳ

Recent Posts

ಚಾಮಡ್ಕ ಜಲಪಾತದಲ್ಲಿ ಸ್ವಚ್ಛತಾ ಸಂಭ್ರಮ – ಮಕ್ಕಳ ಚಿತ್ರಗಳಲ್ಲಿ ಪರಿಸರ ಕಾಳಜಿಯ ಸಂದೇಶ

ಸುಳ್ಯ ತಾಲೂಕಿನ ಕುಕ್ಕುಜಡ್ಕದ ಚಾಮಡ್ಕ ಜಲಪಾತ ಪ್ರದೇಶದಲ್ಲಿ ‘ಸ್ವಚ್ಛ ಗ್ರಾಮ ಸುಂದರ, ನಮ್ಮ…

30 minutes ago

ಮತ್ತೆ ಇಳಿಕೆಯಾದ ರಬ್ಬರ್‌ ಬೆಲೆ – ರಬ್ಬರ್ ಬೆಳೆಗಾರರಿಗೆ ಮತ್ತೆ ಬೆಲೆ ಇಳಿಕೆಯ ಆತಂಕ

ನವೆಂಬರ್ ಮೊದಲ ವಾರದಲ್ಲಿ ಕೆ.ಜಿ.ಗೆ ₹300 ತಲುಪಿದ್ದ ಆರ್‌ಎಸ್‌ಎಸ್‌-4 ರಬ್ಬರ್ ಬೆಲೆ ಮೂರು…

1 hour ago

ಸುಬ್ರಾಯ ಚೊಕ್ಕಾಡಿ ಅವರಿಗೆ ‘ಮೋಹನ ಮುರಳಿ ಕವಿಸಮ್ಮಾನ’ ಪ್ರದಾನ

ಸುಳ್ಯ ಸಮೀಪದ ಬೊಕ್ಕಾಡಿಯಲ್ಲಿ ನವೆಂಬರ್ 22ರಂದು ಹಿರಿಯ ಕವಿ ಸುಬ್ರಾಯ ಚೊಕ್ಕಾಡಿ ಅವರಿಗೆ…

2 days ago

ಕಲ್ಮಡ್ಕದಲ್ಲೂ ಶುರುವಾಯಿತು ಸ್ವಚ್ಛತಾ ಆಂದೋಲನ – ಯುವಶಕ್ತಿಗೆ ಗ್ರಾಮಸ್ಥರ ಸಾಥ್!

ಸುಳ್ಯ ತಾಲೂಕಿನ ಅಮರಮುಡ್ನೂರಿನಲ್ಲಿ ಆರಂಭವಾದ ಸ್ವಚ್ಛತಾ ಅಭಿಯಾನ ಇದೀಗ ಪಕ್ಕದ ಕಲ್ಮಡ್ಕ ಗ್ರಾಮಕ್ಕೂ…

2 days ago

ಹವಾಮಾನ ವರದಿ | 22.11.2026 | ನವೆಂಬರ್ 23ರಿಂದ ಕರ್ನಾಟಕದಲ್ಲಿ ಮತ್ತೆ ಮಳೆ ಸಾಧ್ಯತೆ | ಕರಾವಳಿ, ಮಲೆನಾಡು ಸೇರಿದಂತೆ ಹಲವು ಜಿಲ್ಲೆಗಳಿಗೆ ಹಿಂಗಾರು ಮಳೆ ಮುನ್ಸೂಚನೆ

ಕಾಸರಗೋಡು ಸೇರಿದಂತೆ ಕರ್ನಾಟಕದಾದ್ಯಂತ ನವೆಂಬರ್ 22ರವರೆಗೆ ಒಣ ಹವೆ ಮುಂದುವರಿಯುವ ಸಾಧ್ಯತೆಯಿದೆ. ಅಕ್ವಾನ್…

2 days ago

ಎಲ್‌ಕೆಜಿಯಿಂದ 12ನೇ ತರಗತಿವರೆಗೆ ಉಚಿತ ನೋಟ್‌ಬುಕ್ – ಮುಂದಿನ ಶೈಕ್ಷಣಿಕ ವರ್ಷದಿಂದ ಜಾರಿ

ಮುಂದಿನ ಶೈಕ್ಷಣಿಕ ವರ್ಷದಿಂದ ರಾಜ್ಯದ ಸರ್ಕಾರಿ ಶಾಲೆಗಳ ಎಲ್‌ಕೆಜಿಯಿಂದ 12ನೇ ತರಗತಿವರೆಗಿನ ವಿದ್ಯಾರ್ಥಿಗಳಿಗೆ…

2 days ago