ಹವಾಮಾನ ವರದಿ | 20-03-2026 | ಕರಾವಳಿ–ಮಲೆನಾಡಿಗೆ ಮಳೆ ಸೂಚನೆ..! | ರಾಜ್ಯದಲ್ಲಿ ಯಾವ ದಿನದಿಂದ ಮಳೆ ಚುರುಕು..?

March 20, 2026
12:07 PM
ರಾಜ್ಯದಲ್ಲಿ ಸಧ್ಯಕ್ಕೆ ಮಳೆ ಕಡಿಮೆಯಾಗಿದ್ದು ಬಹುತೇಕ ಜಿಲ್ಲೆಗಳಲ್ಲಿ ಬಿಸಿಲು–ಮೋಡದ ವಾತಾವರಣ ಮುಂದುವರಿಯಲಿದೆ. ಇಂದು ಸುಳ್ಯ ಹಾಗೂ ಸುಬ್ರಹ್ಮಣ್ಯ ಸುತ್ತಮುತ್ತ ಸಂಜೆ ಒಂದೆರಡು ಕಡೆ ತುಂತುರು ಮಳೆಯ ಸಾಧ್ಯತೆ ಇದೆ. ಕರಾವಳಿ ಹಾಗೂ ಮಲೆನಾಡಿನಲ್ಲಿ ಮಾರ್ಚ್‌ 23–24ರಿಂದ ಮತ್ತೆ ಸಾಮಾನ್ಯ ಮಳೆಯ ಲಕ್ಷಣಗಳು ಕಾಣಿಸುತ್ತಿವೆ.

ರಾಜ್ಯ ಹವಾಮಾನ ಮುನ್ಸೂಚನೆ (21.03.2026 ಬೆಳಿಗ್ಗೆ 8 ಗಂಟೆವರೆಗೆ): ಕರ್ನಾಟಕದಲ್ಲಿ ಸಧ್ಯಕ್ಕೆ ಮಳೆಯ ಚಟುವಟಿಕೆ ಕಡಿಮೆಯಾಗಿದ್ದು, ಬಹುತೇಕ ಜಿಲ್ಲೆಗಳಲ್ಲಿ ಬಿಸಿಲು ಹಾಗೂ ಮಧ್ಯಾಹ್ನ ನಂತರ ಮೋಡದ ವಾತಾವರಣ ಮುಂದುವರಿಯುವ ಲಕ್ಷಣಗಳು ಕಂಡುಬರುತ್ತಿವೆ. ಕರಾವಳಿ ಹಾಗೂ ಮಲೆನಾಡಿನ ಕೆಲವು ಸೀಮಿತ ಪ್ರದೇಶಗಳಲ್ಲಿ ಮಾತ್ರ ತುಂತುರು ಮಳೆಯ ಸಾಧ್ಯತೆ ಇದೆ.

ಕರಾವಳಿ ಭಾಗ :  ಕಾಸರಗೋಡು ಸೇರಿದಂತೆ ಕರಾವಳಿ ಜಿಲ್ಲೆಗಳಲ್ಲಿ ಬಿಸಿಲು ಹಾಗೂ ಮಧ್ಯಾಹ್ನ ನಂತರ ಮೋಡದ ವಾತಾವರಣ ಮುಂದುವರಿಯಲಿದೆ. ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ಹಾಗೂ ಸುಬ್ರಹ್ಮಣ್ಯ ಸುತ್ತಮುತ್ತ ಸಂಜೆ ಒಂದೆರಡು ಕಡೆ ತುಂತುರು ಮಳೆಯ ಸಾಧ್ಯತೆ ಇದೆ.
ಸಧ್ಯಕ್ಕೆ ಮಳೆಯ ಸಾಧ್ಯತೆ ಕಡಿಮೆಯಾಗಿದ್ದು, ಮಾರ್ಚ್‌ 24ರಿಂದ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಮಳೆ ಚಟುವಟಿಕೆ ಮತ್ತೆ ಆರಂಭವಾಗುವ ಲಕ್ಷಣಗಳು ಕಾಣಿಸುತ್ತಿವೆ.

ಮಲೆನಾಡು ಭಾಗ:  ಕೊಡಗು ಜಿಲ್ಲೆಯ ಕರಾವಳಿ ಜಿಲ್ಲೆಗಳಿಗೆ ಹೊಂದಿಕೊಂಡಿರುವ ಕೆಲವು ಪ್ರದೇಶಗಳಲ್ಲಿ ಸಂಜೆ ತುಂತುರು ಮಳೆಯ ಸಾಧ್ಯತೆ ಇದೆ. ಉಳಿದ ಭಾಗಗಳಲ್ಲಿ ಮೋಡದ ವಾತಾವರಣ ಮುಂದುವರಿಯಲಿದೆ.
ಹಾಸನ, ಚಿಕ್ಕಮಗಳೂರು ಹಾಗೂ ಶಿವಮೊಗ್ಗ ಜಿಲ್ಲೆಗಳಲ್ಲಿ ಬಿಸಿಲು ಜೊತೆಗೆ ಸಂಜೆ–ರಾತ್ರಿ ಮೋಡದ ಆವರಣೆ ಕಾಣಿಸಬಹುದು. ಮಾರ್ಚ್‌ 23ರಿಂದ ಮಲೆನಾಡಿನ ಕರಾವಳಿ ಅಂಚಿನ ಪ್ರದೇಶಗಳಲ್ಲಿ ಸಾಮಾನ್ಯ ಮಳೆಯ ಆರಂಭವಾಗುವ ಸೂಚನೆಗಳಿವೆ.

ಉತ್ತರ ಒಳನಾಡು :  ಬೀದರ್ ಜಿಲ್ಲೆಯ ಕೆಲವು ಕಡೆ ಸಂಜೆ ಸಾಮಾನ್ಯ ಮಳೆಯ ಸಾಧ್ಯತೆ ಇದೆ. ಉಳಿದ ಜಿಲ್ಲೆಗಳಲ್ಲಿ ಮೋಡದ ವಾತಾವರಣ ಮಾತ್ರ ಕಂಡುಬರುವ ಲಕ್ಷಣ. ಮುಂದಿನ 10 ದಿನಗಳವರೆಗೆ ಉತ್ತರ ಒಳನಾಡಿನಲ್ಲಿ ಮಳೆಯ ಸಾಧ್ಯತೆ ಕಡಿಮೆ ಎಂದು ಅಂದಾಜಿಸಲಾಗಿದೆ.

ದಕ್ಷಿಣ ಒಳನಾಡು:  ಬಹುತೇಕ ಜಿಲ್ಲೆಗಳಲ್ಲಿ ಬಿಸಿಲು ಹಾಗೂ ಮಧ್ಯಾಹ್ನ ನಂತರ ಮೋಡದ ವಾತಾವರಣ ಮುಂದುವರಿಯಲಿದೆ.
ಸಧ್ಯಕ್ಕೆ ಮಳೆಯ ಲಕ್ಷಣ ಕಾಣಿಸುತ್ತಿಲ್ಲ. ಆದರೆ ಮಾರ್ಚ್‌ 24ರಿಂದ ಮೋಡದ ಪ್ರಮಾಣ ಹೆಚ್ಚಾಗುವ ಸಾಧ್ಯತೆ ಇದೆ. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ ಹಾಗೂ ಇತರ ಮಾಹಿತಿಗಾಗಿ  ನಮ್ಮ “ದ ರೂರಲ್‌ ಮಿರರ್.ಕಾಂ”WhatsApp Channel  ಗೆ ಇಲ್ಲಿ ಕ್ಲಿಕ್‌ ಮಾಡಿ

ಹವಾಮಾನ ಹಿನ್ನೆಲೆ :  ಬಂಗಾಳಕೊಲ್ಲಿಯ ಪ್ರತ್ಯಾವರ್ತ ಮಾರುತ (Anti-cyclonic circulation) ಶಿಥಿಲಗೊಂಡಿದ್ದು, ಅರಬ್ಬಿ ಸಮುದ್ರದ ಪ್ರತ್ಯಾವರ್ತ ಮಾರುತ ಮುಂದುವರಿದಿರುವ ಪರಿಣಾಮ ಗಾಳಿಯ ಭೂಪ್ರವೇಶ ಪ್ರಕ್ರಿಯೆ ದುರ್ಬಲಗೊಂಡಿದೆ. ಇದರಿಂದ ಮಳೆಯ ಚಟುವಟಿಕೆ ಕಡಿಮೆಯಾಗಿದೆ.

Rain activity has weakened across Karnataka due to weakening anti-cyclonic circulation over the Bay of Bengal, while Arabian Sea circulation continues. Most regions will experience sunny to partly cloudy conditions, with light showers likely in limited coastal and Malnad pockets, and a possible revival of rain from March 23–24.

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ಸಾಯಿಶೇಖರ್ ಕರಿಕಳ

ಕೃಷಿಕ, ಹವಾಮಾನ ಆಸಕ್ತ

ಇದನ್ನೂ ಓದಿ

ಅಡಿಕೆ ಮಾರುಕಟ್ಟೆ | ಗುಣಮಟ್ಟದ ಅಡಿಕೆಗೆ ಬೇಡಿಕೆ….!
March 20, 2026
10:41 AM
by: ದ ರೂರಲ್ ಮಿರರ್.ಕಾಂ
ಕಾಳುಮೆಣಸು ಕೃಷಿಯಲ್ಲಿ ಟೆಕ್ ಕ್ರಾಂತಿ | ಟಿಶ್ಯೂ ಕಲ್ಚರ್‌ ವಿಧಾನದಿಂದ ಇಳುವರಿ ಹೆಚ್ಚಳ – ಕೃಷಿ ಸಚಿವರ ಭೇಟಿ
March 20, 2026
6:59 AM
by: ದ ರೂರಲ್ ಮಿರರ್.ಕಾಂ
ಹವಾಮಾನ ವರದಿ | 19-03-2026 | ಇಂದು ಗುಡುಗು ಮಳೆ ಅಬ್ಬರ… ನಾಳೆಯಿಂದ ರಾಜ್ಯದಲ್ಲಿ ಮಳೆ ಕಡಿಮೆಯಾಗುತ್ತದಾ?
March 19, 2026
1:44 PM
by: ಸಾಯಿಶೇಖರ್ ಕರಿಕಳ
ಶಾಸ್ತ್ರ ಮತ್ತು ಆಧುನಿಕತೆಯ ಸಮನ್ವಯದ ಹಬ್ಬ — ಯುಗಾದಿ
March 19, 2026
8:15 AM
by: ಕುಮಾರಸುಬ್ರಹ್ಮಣ್ಯ ಮುಳಿಯಾಲ

You cannot copy content of this page - Copyright -The Rural Mirror