ಪ್ರಧಾನಿ ನರೇಂದ್ರ ಮೋದಿ ಅವರಿಂದ ಕಾಶಿ ವಿಶ್ವನಾಥ ಕಾರಿಡಾರ್ ಉದ್ಘಾಟನೆ | ಗಂಗೆಯಲ್ಲಿ ಮಿಂದೆದ್ದ ಪ್ರಧಾನಿ ಮೋದಿ ಉಪಸ್ಥಿತಿಯಲ್ಲಿ ಗಂಗಾರತಿಯ ವೈಭವ |

December 13, 2021
8:40 PM

ಕಾಶಿ ವಿಶ್ವನಾಥ ಕಾರಿಡಾರ್ ಯೋಜನೆಯನ್ನು ಪ್ರಧಾನಿ ನರೇಂದ್ರ ಮೋದಿ ಸೋಮವಾರ ಉದ್ಘಾಟಿಸಿದರು. ಸುಮಾರು  5,000 ಹೆಕ್ಟೇರ್ ಪ್ರದೇಶದಲ್ಲಿ ನಿರ್ಮಾಣವಾಗುವ  ಪ್ರಧಾನಮಂತ್ರಿಯವರ ಕನಸಿನ ಯೋಜನೆ ಇದಾಗಿದೆ. ವಾರಣಾಸಿಯಲ್ಲಿರುವ ಕಾಶಿ ವಿಶ್ವನಾಥ ದೇವಾಲಯ  ಮತ್ತು ಗಂಗಾ ನದಿಯ ಉದ್ದಕ್ಕೂ ಇರುವ ಘಾಟ್‌ಗಳನ್ನು ಈ ಯೋಜನೆ ಸಂಪರ್ಕಿಸುತ್ತದೆ.

Advertisement
Advertisement
Advertisement

Advertisement

ಕಾಶಿ ವಿಶ್ವನಾಥ ಕಾರಿಡಾರ್ ಯೋಜನೆ ಉದ್ಘಾಟನೆಗೆ ಉತ್ತರ ಪ್ರದೇಶದ ವಾರಣಾಸಿಗೆ ಆಗಮಿಸಿರುವ ಪ್ರಧಾನಿ ನರೇಂದ್ರ ಮೋದಿ ಅವರು ಆರಂಭದಲ್ಲಿ ಗಂಗಾನದಿಯಲ್ಲಿ ಪುಣ್ಯಸ್ನಾನ ಮಾಡಿ ರುದ್ರಾಕ್ಷಿ ಹಿಡಿದು  ಜಪ  ಮಾಡಿ ಸೂರ್ಯದೇವನಿಗೆ ಅರ್ಘ್ಯ ಸಮರ್ಪಿಸಿದರು. ನಂತರ ವಾರಣಾಸಿಯ ಕಾಲಭೈರವ ದೇಗುಲಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿ, ಕಾಲಭೈರವನಿಗೆ ಆರತಿ ಬೆಳಗಿದರು. ಬಳಿಕ ಕಾಶಿ ವಿಶ್ವನಾಥ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ, ಕ್ಷೀರಾಭಿಷೇಕ ಮಾಡಿ ಮಹಾಮಂಗಳಾರತಿ ಬೆಳಗಿದರು. ಸಂಜೆ ಗಂಗಾ ಆರತಿ ಕಾರ್ಯಕ್ರಮದಲ್ಲಿ ಭಾಗವಹಿಸಿದರು.

Advertisement

ದೇಶದ ಪುಣ್ಯಕ್ಷೇತ್ರ ಕಾಶಿ ವಿಶ್ವನಾಥ ಮಂದಿರಕ್ಕೆ ಕಾಯಕಲ್ಪ ನೀಡಬೇಕು ಎಂಬ ಪ್ರಧಾನಿ ಮೋದಿ ಅವರ ಕನಸಿನ ಯೋಜನೆಯಾಗಿತ್ತು. ಆಧ್ಯಾತ್ಮಿಕ ಕೇಂದ್ರದ ಕಳೆದುಹೋದ ವೈಭವವನ್ನು ಮರುಸ್ಥಾಪಿಸುವ ಉದ್ದೇಶದಿಂದ 2019 ರ ಮಾರ್ಚ್‌ನಲ್ಲಿ ತಮ್ಮ ಸಂಸದೀಯ ಕ್ಷೇತ್ರದಲ್ಲಿ  ಈ ಯೋಜನೆಯನ್ನು ಪ್ರಾರಂಭಿಸಿದರು. ಹೀಗಾಗಿ ಸುಮಾರು 339 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿರುವ ಕಾಶಿ ವಿಶ್ವನಾಥ ಕಾರಿಡಾರ್ ಯೋಜನೆ ರೂಪಿಸಿದ್ದರು. ಒಟ್ಟು 800 ಕೋಟಿ ವೆಚ್ಚದ ಈ ಯೋಜನೆಯು ಪುರಾತನ ದೇವಾಲಯವನ್ನು ಗಂಗಾನದಿಯ ದಡಕ್ಕೆ ಸಂಪರ್ಕಿಸುತ್ತದೆ.

Advertisement

ಈ ಯೋಜನೆಯಿಂದ  ಘಾಟ್‌ಗಳು ಮತ್ತು ದೇವಾಲಯದ ನಡುವೆ ಯಾತ್ರಾರ್ಥಿಗಳು ಮತ್ತು ಭಕ್ತರ ಸುಗಮ ಸಂಚಾರದ ಗುರಿಯನ್ನು ಹೊಂದಿದೆ.  ಮೊದಲನೇ ಹಂತದಲ್ಲಿ  ಈ ಯೋಜನೆಯು 339 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿದೆ. ಇದು ಸುಮಾರು 5 ಲಕ್ಷ ಚದರ ಅಡಿ ವಿಸ್ತೀರ್ಣದಲ್ಲಿ ಹರಡಿದೆ ಮತ್ತು 23 ಕಟ್ಟಡಗಳನ್ನು ಒಳಗೊಂಡಿದೆ. ಇಲ್ಲಿ 40 ಕ್ಕೂ ಹೆಚ್ಚು ಮರೆಯಾದ  ದೇವಾಲಯಗಳನ್ನು ಮರುಶೋಧಿಸಲಾಗಿದೆ. ಈ  ದೇವಾಲಯಗಳಿಗೆ ಶತಮಾನಗಳ ಹಿಂದಿನ ಇತಿಹಾಸವಿದೆ.

Advertisement

ಕಾರಿಡಾರ್‌ ಯೋಜನೆ ಉದ್ಘಾಟಿಸಿದ ಪ್ರಧಾನಿ ನರೇಂದ್ರ ಮೋದಿ ಅವರು, ಪುಣ್ಯಭೂಮಿ ಕಾಶಿಯು ಅಹಿಂಸೆಯ ಸಂಕೇತ ಎಂದ ಅವರು ದೇಶಕ್ಕಾಗಿ  ಸ್ವಚ್ಛತೆ, ಸೃಜನಶೀಲನೆ ಮತ್ತು ಆತ್ಮ ನಿರ್ಭರ ಭಾರತದ ಸಂಕಲ್ಪ ಇಂದು ಅಗತ್ಯವಿದೆ ಎಂದು ಹೇಳಿದರು.

Advertisement

ಸಂಜೆ ಪ್ರಧಾನಿಗಳ ಉಪಸ್ಥಿತಿಯಲ್ಲಿ ಗಂಗಾರತಿ ನಡೆಯಿತು. ಇಲ್ಲಿ ನಡೆಯುವ ಗಂಗಾರತಿಗೆ ಬಹಳಷ್ಟು ಮಹತ್ವ ಇದೆ.  ಗಂಗಾ ಆರತಿ ಭಾರತದಲ್ಲಿ ಹರಿದ್ವಾರ , ಋಷಿಕೇಶ್ ಮತ್ತು ವಾರಣಾಸಿಯ ಮೂರು ಪವಿತ್ರ ನಗರಗಳಲ್ಲಿ ನಡೆಸುವುದು  ಹೆಚ್ಚು ಶ್ರೇಷ್ಟ. ಇದು ಅತ್ಯಂತ ಶಕ್ತಿಶಾಲಿ ಮತ್ತು ಉನ್ನತಿಗೇರಿಸುವ ಆಧ್ಯಾತ್ಮಿಕ ಆಚರಣೆಯಾಗಿದೆ ಎನ್ನುವುದು  ನಂಬಿಕೆ.

Advertisement
Advertisement
Advertisement

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ವಿಶೇಷ ಪ್ರತಿನಿಧಿ

ರೂರಲ್‌ ಮಿರರ್‌ ವಿಶೇಷ ಪ್ರತಿನಿಧಿ.

ಇದನ್ನೂ ಓದಿ

ತೀರ್ಥಹಳ್ಳಿ ಮೊದಲ ಮಳೆ ವ್ಯಕ್ತಿ ಬಲಿ | ಶಿವಮೊಗ್ಗದಲ್ಲೂ ಗಾಳಿ ಮಳೆ |
April 19, 2024
10:02 AM
by: ದ ರೂರಲ್ ಮಿರರ್.ಕಾಂ
ದಕ್ಷಿಣ ಕನ್ನಡ ಜಿಲ್ಲೆಯ ಹಲವು ಕಡೆ ಮಳೆ
April 18, 2024
10:09 PM
by: ದ ರೂರಲ್ ಮಿರರ್.ಕಾಂ
ಮರುಭೂಮಿ ನಾಡು ದುಬೈನಲ್ಲಿ 75 ವರ್ಷಗಳಲ್ಲೇ ದಾಖಲೆ ಮಳೆ…! | ಪ್ರವಾಹಕ್ಕೆ UAE ತತ್ತರ |
April 18, 2024
3:49 PM
by: The Rural Mirror ಸುದ್ದಿಜಾಲ
ಎಚ್ಚರ….. ತಾಯಂದಿರೇ ನಿಮ್ಮ ಮಕ್ಕಳಿಗೆ ಸೆರೆಲಾಕ್ ತಿನ್ನಿಸುತ್ತೀರಾ..? | ಬಯಲಾಯ್ತು ಶಾಕಿಂಗ್ ನ್ಯೂಸ್…! | ವರದಿ ಬಹಿರಂಗದ ಬಳಿಕ ನೆಸ್ಲೆ ಪ್ರತಿಕ್ರಿಯೆ ಏನು..?
April 18, 2024
3:21 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror