ಇರಾನ್ ಸೇಬುಗಳ ಅಕ್ರಮ ಆಮದು ನಿಲ್ಲಿಸಬೇಕು ಎಂದು ಕಾಶ್ಮೀರಿ ಸೇಬು ಬೆಳೆಗಾರರು ಒತ್ತಾಯ ಮಾಡಿದ್ದು, ತಕ್ಷಣವೇ ಕೇಂದ್ರ ಸರ್ಕಾರ ಮಧ್ಯಪ್ರವೇಶ ಮಾಡಬೇಕು ಎಂದು ಒತ್ತಾಯ ಮಾಡಿದ್ದಾರೆ.
Advertisement
ಇರಾನಿನ ಸೇಬನ್ನು ಅಫ್ಘಾನಿಸ್ತಾನದ ಮೂಲಕ ಕಾನೂನು ಬಾಹಿರವಾಗಿ ಆಮದು ಮಾಡಿಕೊಳ್ಳಲಾಗುತ್ತಿದೆ. ಪಂಜಾಬ್ ಮತ್ತು ಗುಜರಾತ್‌ನ ವಾಘಾ ಮಾರ್ಗದ ಮೂಲಕವೂ ದೇಶವನ್ನು ಈ ಸೇಬು ಪ್ರವೇಶಿಸುತ್ತಿದೆ ಎಂದು ಉತ್ತರ ಕಾಶ್ಮೀರ ಸೋಪೋರ್‌ನಲ್ಲಿರುವ ಏಷ್ಯಾದ ಎರಡನೇ ಅತಿದೊಡ್ಡ ಹಣ್ಣಿನ ಮಾರುಕಟ್ಟೆಯ ಅಧ್ಯಕ್ಷ ಫಯಾಜ್ ಅಹ್ಮದ್ ಹೇಳಿದ್ದಾರೆ.
Advertisement
ಭಾರತ ಮಾರುಕಟ್ಟೆಯಲ್ಲಿ ಕಡಿಮೆ ಬೆಲೆಯ ಇರಾನಿ ಸೇಬು ಮಾರಾಟದಿಂದ ಕಾಶ್ಮೀರದ ಹಣ್ಣು ಬೆಳೆಗಾರರು ಈಗಾಗಲೇ ನಷ್ಟವನ್ನು ಎದುರಿಸುತ್ತಿರುವುದಾಗಿ ಅವರು ಹೇಳಿದ್ದಾರೆ. ಜೊತೆಗೆ ಇರಾನ್ ಸೇಬಿಗೆ ನಿರ್ಬಂಧ ಹೇರಲು ಸಾಧ್ಯವಾಗದಿದ್ದಲ್ಲಿ ಅದರ ಮೇಲೆ ಹೆಚ್ಚಿನ ತೆರಿಗೆಯನ್ನು ವಿಧಿಸುವಂತೆ ಅವರು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ.
Advertisement
Advertisement
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel
Advertisement