ಈಗಾಗಲೇ ಮತ್ತೆ ಸುದ್ದಿಯಲ್ಲಿರುವ ಕಸ್ತೂರಿರಂಗನ್ ವರದಿ(Kasturirangan report) ಅನುಷ್ಠಾನ ಬಗ್ಗೆ ಪರ ವಿರೋಧ ಮತ್ತೊಮ್ಮೆ ಬಲವಾದ ಅಭಿಪ್ರಾಯ ವ್ಯಕ್ತಪಡಿಸಿರುವ ಚಿಂತಕ ಹಾಗು ಕಾಂಗ್ರೆಸ್ ಮುಖಂಡ ನಾಪಂಡ ಮುತ್ತಪ್ಪ ‘ಮೊದಲು ವರದಿಯನ್ನು ಕನ್ನಡಕ್ಕೆ ಅನುವಾದ(Kannada report) ಮಾಡುವ ಅವಶ್ಯಕತೆಯಿದೆ ಎಂದಿದ್ದಾರೆ. ಪಶ್ಚಿಮಘಟ್ಟಗಳು(western ghat) ಹಾದು ಹೋಗುವ ರಾಜ್ಯಗಳ ಸ್ಥಳೀಯ ಭಾಷೆಗಳಿಗೆ ಕಸ್ತೂರಿರಂಗನ್ ವರದಿ ತರ್ಜುಮೆಯಾದರೆ ಮಾತ್ರ ವರದಿ ಬಗ್ಗೆ ಸತ್ಯಾಂಶವನ್ನು ರೈತರು, ಕೃಷಿಕರು, ಹೈನುಗಾರರು, ಹಾಗು ರಾಜ್ಯದ ಜನ ವರದಿಯ ತಿರುಳನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವಿದೆ ಎಂದಿದ್ದಾರೆ.
52500 ಪದಗಳಿರುವ ಒಟ್ಟು 175 ಪುಟಗಳ ವರದಿಯನ್ನು ತಕ್ಷಣ ಸರಕಾರ ವಿಶೇಷ ಸಮಿತಿ ರಚಿಸಿ ತಕ್ಷಣ ಕ್ರಮ ಕೈಗೊಳ್ಳಲು ಸೂಚಿಸುವ ಅವಶ್ಯಕತೆಯಿದೆ ಎಂದಿರುವ ಮುತ್ತಪ್ಪ ಆಂಗ್ಲ ಭಾಷೆಯಲ್ಲಿ ಇರುವ ಈ ವರದಿಯನ್ನು ಕೆಲವೇ ಕೆಲವು ಮಂದಿ ತಮ್ಮ ಸ್ವ ಹಿತಾಶಕ್ತಿಗೆ ತಕ್ಕ ಹಾಗೆ ವ್ಯಾಖಾನಿಸುವ ಮೂಲಕ ಜನ ಸಾಮಾನ್ಯರ ಹಾದಿ ತಪ್ಪಿಸಲಾಗುತ್ತಿದೆ ಎಂದು ಅವರು ಗಂಭೀರವಾಗಿ ಆರೋಪಿಸಿದ್ದಾರೆ.
ಜನರ ಹಾದಿ ತಪ್ಪಿಸಲಾಗುತ್ತಿದೆ: ಕೊಡಗು ಸೇರಿದಂತೆ ಪಶ್ಚಿಮಘಟ್ಟ ಸೂಕ್ಷ್ಮವಲಯಗಳ ವ್ಯಾಪ್ತಿಯಲ್ಲಿರುವ ಉದ್ಯಮಿಗಳು, ಕೆಲವು ಪಟ್ಟಭದ್ರ ಹಿತಾಸಕ್ತಿಯುಳ್ಳವರು, ಹೋಟೆಲ್ಸ್ ಕಂಪೆನಿಗಳು. ರೆಸಾರ್ಟ್ಸ್ ಕಂಪೆನಿಗಳು, ಬೃಹತ್ ಕೈಗಾರಿಕಾ ಸಂಸ್ಥೆಗಳು, ಟಿಂಬರ್ ಮಾಫಿಯಾಗಳು, ಕೋರೆ ಮತ್ತು ಕ್ರಷರ್ ಮಾಫಿಯಾ ಮತ್ತು ಇವರ ಮಧ್ಯವರ್ತಿಗಳಂತಿರುವ ರಾಜಕಾರಣಿಗಳು ಮತ್ತು ಜನಪ್ರತಿನಿದಿಗಳು, ಸ್ಥಳೀಯ ಕೃಷಿಕರನ್ನು, ರೈತರನ್ನು ಹಾದಿ ತಪ್ಪಿಸುತ್ತಿದ್ದಾರೆ. ಸೂಕ್ಶ್ಮ ವಲಯಗಳಲ್ಲಿರುವ ಕಾಫಿ ತೋಟಗಳಲ್ಲಿ ನೆರಳು ತೆಗೆಯುವಂತಿಲ್ಲ, ಮರದ ಕೊಂಬೆ ಕಡಿಯುವಂತಿಲ್ಲ, ಎಂಬಿತ್ಯಾದಿ ತಪ್ಪು ಮಾಹಿತಿಯನ್ನು ಹರಡಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.
ಪರಿಗಣನೆಗೆ ತೆಗೆದುಕೊಳ್ಳಲಿ : ವರದಿ ಅನುಷ್ಠಾನಕ್ಕೆ ತರುವುದನ್ನು ಕೆಲವರು ಮಾತ್ರ ವಿರೋಧ ಮಾಡುತ್ತಿದ್ದು ಕೆಲವೇ ಕೆಲವು ಉದ್ಯಮಿಗಳು ವ್ಯವಸ್ಥಿತವಾಗಿ ಇದರ ವಿರುದ್ಧ ಹೋರಾಟ ಮಾಡಲು ಸಂಚು ರೂಪಿಸಿ ರೈತರನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಕಸ್ತೂರಿ ರಂಗನ್ ವರದಿ ಜಾರಿಗೆ ತರುವ ಮುನ್ನ ರೈತರು, ಕೃಷಿಕರು, ಹೈನುಗಾರರು, ದನಗಾಯಿಗಳು, ಕುರಿಗಾಯಿಗಳು ಮತ್ತು ಸೂಕ್ಶ್ಮ ಪ್ರದೇಶಗಳ ವ್ಯಾಪ್ತಿಗೆ ಬರುವ ಎಲ್ಲರನ್ನು ಪರಿಗಣನೆಗೆ ತೆಗೆದುಕೊಂಡು ವರದಿಯ ಸಾಧಕ ಬಾಧಕಗಳನ್ನು ಪರಿಶೀಲಿಸಿ ವರದಿ ಜಾರಿ ಮಾಡುವುದು ಸೂಕ್ತ ಎಂದು ಅವರು ತಿಳಿಸಿದ್ದಾರೆ.
ವರದಿಯಲ್ಲಿ ಯಾವುದಕ್ಕೆ ಅವಕಾಶವಿಲ್ಲ: ಕೇಂದ್ರ ಸರಕಾರ 56000 ಚದರ ಸೂಕ್ಶ್ಮ ಪ್ರದೇಶವೆಂದು ಘೋಷಿಸಿದೆ. ವರದಿಯಲ್ಲಿ ಗುರುತಿಸಿರುವ ಸೂಕ್ಷ್ಮ ಮತ್ತು ಅತಿ ಸೂಕ್ಷ್ಮ ಪ್ರದೇಶಗಳಲ್ಲಿ 2400 ಸ್ಕ್ವಯರ್ ಮೀಟರ್ ಗಿಂತ ದೊಡ್ಡ ಕಟ್ಟಡ ಕಟ್ಟಲು ಅವಕಾಶವಿಲ್ಲ. ರೆಡ್ಜೋನ್ ಮೈನಿಂಗ್ ಮಾಡಲು ಅವಕಾಶವಿಲ್ಲ. ಹೈಡ್ರೊ ಪ್ರಾಜೆಕ್ಟ್ ಮಾಡಲು ಅವಕಾಶವಿಲ್ಲ. ಸಿಮೆಂಟ್ ಕಾರ್ಖಾನೆ, ಕಬ್ಬಿಣದ ಕಾರ್ಖಾನೆ ಮಾಡಲು ಅವಕಾಶವಿಲ್ಲ. ಜಲವಿದ್ಯುತ್ ಘಟಕ ಸ್ಥಾಪಿಸಲು ಅವಕಾಶವಿಲ್ಲ. ಇವೆಲ್ಲವೂ ಪೂರ್ತಿ ಪಶ್ಚಿಮಘಟ್ಟದಲ್ಲಿ ಅಲ್ಲ. ಕೇವಲ ಸೂಕ್ಷ ಮತ್ತು ಅತಿಸೂಕ್ಷ ಪ್ರದೇಶಗಳಲ್ಲಿ ಮಾತ್ರ ಎಂದು ಮುತ್ತಪ್ಪ ವರದಿಯ ಸತ್ಯತೆ ವಿವರಿಸಿದ್ದಾರೆ.