ಗ್ರಾಮೀಣ ಭಾಗಗಳಿಗೆ ಸ್ವಾತಂತ್ರ್ಯ ಎಂದು ? ಹೀಗೊಂದು ಪ್ರಶ್ನೆ ಈಗ ಕೇಳಲೇಬೇಕಾಗಿದೆ. ಏಕೆಂದರೆ ಇಂದಿಗೂ ಹಲವು ಗ್ರಾಮೀಣ ಪ್ರದೇಶಗಳು ಮೂಲಭೂತ ಸೌಕರ್ಯದಿಂದ ವಂಚಿತವಾಗಿದೆ. ಮಳೆಗಾಲ ಬಂದರೆ ಭಯಗೊಳ್ಳುವ ಸ್ಥಿತಿ ಇದೆ. ಇದಕ್ಕೆ ಉದಾಹರಣೆ ಸುಳ್ಯ ತಾಲೂಕಿನ ಕೊಲ್ಲಮೊಗ್ರ ಕಟ್ಟ ನಿವಾಸಿಗಳು. ಏನಿದು ಇವರ ಸಂಕಷ್ಟ ಇಲ್ಲಿದೆ.
ಸುಳ್ಯ ತಾಲೂಕಿನ ಕೊಲ್ಲಮೊಗ್ರದಿಂದ ಕಟ್ಟ – ಗೋವಿಂದನಗರಕ್ಕೆ ತೆರಳುವ ರಸ್ತೆ ಇದೆ. ಇದು ಮೂಲ ರಸ್ತೆಯೂ ಆಗಿದೆ. ಈ ರಸ್ತೆಯಲ್ಲಿ ಕಿರು ಸೇತುವೆಯೊಂದು ಸಿಗುತ್ತದೆ. ಈ ಸೇತುವೆ ಕುಸಿದ ಒಡೆದು ಹೋಗಿದೆ. ತಳ ಭಾಗವೂ ಅರ್ಧದಷ್ಟು ಕುಸಿದಿದೆ.
ಇಂದೋ ನಾಳೆಯೋ ಕುಸಿಯುವ ಭೀತಿ ಎದುರಾಗಿದೆ. ಕಳೆದ ಆರು ವರ್ಷಗಳಿಂದ ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸಿದರೂ ಯಾವುದೇ ಪ್ರಯೋಜನ ಆಗಿಲ್ಲ. ಹೀಗಾಗಿ ಈಗ ಪ್ರತೀ ಮಳೆಗಾಲ ಬಂದರೆ ಸ್ಥಳೀಯರಿಗೆ ರಸ್ತೆ ಸೇತುವೆ ಕೊಚ್ಚಿ ಹೋಗುವ ಭಯದಿಂದ ಇರುವ ಪರಿಸ್ಥಿತಿ ಇದೆ. ರಸ್ತೆ ಸಂಪರ್ಕ ಕಡಿತವಾಗುವ ಭೀತಿ ಎದುರಾಗಿದೆ. ಮುಂದೆ ಸಂಪೂರ್ಣ ಕುಸಿಯುವ ಮುನ್ನ ಅಥವಾ ಅನಾಹುತವಾಗುವ ಮುನ್ನ ಯಾರಾದರೂ ಎಚ್ಚೆತ್ತುಕೊಂಡಾರೆಯೇ ಎಂದು ಜನರು ಕೇಳುವ ಸ್ಥಿತಿ ಬಂದಿದೆ. ಆಡಳಿತಕ್ಕೆ ಕೇಳಿಸೀತೇ ? ಜನಪ್ರತಿನಿಧಿಗಳು ಗಮನಿಸಿಯಾರೇ ?




ಕಳೆದ 6 ವರ್ಷಗಳಿಂದ ಕೊಲ್ಲಮೊಗ್ರದಿಂದ ಕಟ್ಟ – ಗೋವಿಂದನಗರದ ಕಿರು ಸೇತುವೆ ಕುಸಿದು ಹೋಗಿದೆ. ಈಗ ಸಂಪರ್ಕ ಕಡಿತದ ಭೀತಿ ಎದುರಾಗಿದೆ. ಸಂಬಂಧಿತರು ಈ ಕಡೆ ಸ್ಪಂದಿಸಿದರೆ ಉತ್ತಮ ಎನ್ನುತ್ತಾರೆ ಮಿಥುನ್ ಕುಮಾರ್.
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel