Advertisement
The Rural Mirror ಕಾಳಜಿ

ಮಳೆಗಾಲ ಬಂದರೆ ಇಲ್ಲಿಯ ಜನರಿಗೆ ಭಯ..! | ಅಧಿಕಾರಿ-ಜನಪ್ರತಿನಿಧಿಗಳಿಗೆ ನಿರಾತಂಕ..! | ಇದು ಗ್ರಾಮೀಣ ಪ್ರತಿಬಿಂಬ

Share
ಗ್ರಾಮೀಣ ಭಾಗಗಳಿಗೆ ಸ್ವಾತಂತ್ರ್ಯ ಎಂದು ? ಹೀಗೊಂದು ಪ್ರಶ್ನೆ ಈಗ ಕೇಳಲೇಬೇಕಾಗಿದೆ. ಏಕೆಂದರೆ ಇಂದಿಗೂ ಹಲವು ಗ್ರಾಮೀಣ ಪ್ರದೇಶಗಳು ಮೂಲಭೂತ ಸೌಕರ್ಯದಿಂದ ವಂಚಿತವಾಗಿದೆ. ಮಳೆಗಾಲ ಬಂದರೆ ಭಯಗೊಳ್ಳುವ ಸ್ಥಿತಿ ಇದೆ. ಇದಕ್ಕೆ ಉದಾಹರಣೆ ಸುಳ್ಯ ತಾಲೂಕಿನ ಕೊಲ್ಲಮೊಗ್ರ ಕಟ್ಟ ನಿವಾಸಿಗಳು. ಏನಿದು ಇವರ ಸಂಕಷ್ಟ ಇಲ್ಲಿದೆ.
ಸುಳ್ಯ ತಾಲೂಕಿನ ಕೊಲ್ಲಮೊಗ್ರದಿಂದ ಕಟ್ಟ – ಗೋವಿಂದನಗರಕ್ಕೆ ತೆರಳುವ ರಸ್ತೆ ಇದೆ. ಇದು ಮೂಲ ರಸ್ತೆಯೂ ಆಗಿದೆ. ಈ ರಸ್ತೆಯಲ್ಲಿ  ಕಿರು ಸೇತುವೆಯೊಂದು ಸಿಗುತ್ತದೆ. ಈ ಸೇತುವೆ ಕುಸಿದ ಒಡೆದು ಹೋಗಿದೆ. ತಳ ಭಾಗವೂ ಅರ್ಧದಷ್ಟು ಕುಸಿದಿದೆ.
ಇಂದೋ ನಾಳೆಯೋ ಕುಸಿಯುವ ಭೀತಿ ಎದುರಾಗಿದೆ. ಕಳೆದ ಆರು ವರ್ಷಗಳಿಂದ ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸಿದರೂ ಯಾವುದೇ ಪ್ರಯೋಜನ ಆಗಿಲ್ಲ. ಹೀಗಾಗಿ ಈಗ ಪ್ರತೀ ಮಳೆಗಾಲ ಬಂದರೆ ಸ್ಥಳೀಯರಿಗೆ  ರಸ್ತೆ ಸೇತುವೆ ಕೊಚ್ಚಿ ಹೋಗುವ ಭಯದಿಂದ ಇರುವ ಪರಿಸ್ಥಿತಿ ಇದೆ. ರಸ್ತೆ ಸಂಪರ್ಕ ಕಡಿತವಾಗುವ ಭೀತಿ ಎದುರಾಗಿದೆ.  ಮುಂದೆ ಸಂಪೂರ್ಣ ಕುಸಿಯುವ ಮುನ್ನ ಅಥವಾ ಅನಾಹುತವಾಗುವ ಮುನ್ನ ಯಾರಾದರೂ ಎಚ್ಚೆತ್ತುಕೊಂಡಾರೆಯೇ ಎಂದು ಜನರು ಕೇಳುವ ಸ್ಥಿತಿ ಬಂದಿದೆ. ಆಡಳಿತಕ್ಕೆ ಕೇಳಿಸೀತೇ ? ಜನಪ್ರತಿನಿಧಿಗಳು ಗಮನಿಸಿಯಾರೇ ?
ಕಳೆದ 6  ವರ್ಷಗಳಿಂದ ಕೊಲ್ಲಮೊಗ್ರದಿಂದ ಕಟ್ಟ – ಗೋವಿಂದನಗರದ ಕಿರು ಸೇತುವೆ ಕುಸಿದು ಹೋಗಿದೆ. ಈಗ ಸಂಪರ್ಕ ಕಡಿತದ ಭೀತಿ ಎದುರಾಗಿದೆ. ಸಂಬಂಧಿತರು ಈ ಕಡೆ ಸ್ಪಂದಿಸಿದರೆ ಉತ್ತಮ ಎನ್ನುತ್ತಾರೆ ಮಿಥುನ್‌ ಕುಮಾರ್.
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಕೋಲಾರ ಸಮೀಪ 10 ಟನ್ ಸಿಂಥೆಟಿಕ್‌ ಅಡಿಕೆ ವಶ…!?

ಕೋಲಾರದಿಂದ ಬೆಂಗಳೂರಿಗೆ ಸಾಗಿಸಲಾಗುತ್ತಿದ್ದ ಸುಮಾರು 10 ಟನ್ ಸಿಂಥೆಟಿಕ್‌ ಅಡಿಕೆಯನ್ನು ಅಧಿಕಾರಿಗಳು ವಶಪಡಿಸಿಕೊಂಡಿರುವುದಾಗಿ…

6 hours ago

ಮಂಗಳೂರಿನ ಸಚಿವ ಸಂಪುಟ ಸಭೆ | ‘ಅಡಿಕೆ ಜೈವಿಕ ಆರ್ಥಿಕತೆ ಮಿಷನ್’ ಘೋಷಣೆಗೆ ಆಗ್ರಹ

ಮಂಗಳೂರಿನಲ್ಲಿ ಸೆ.18ರಂದು ನಡೆಯಲಿರುವ ವಿಶೇಷ ಸಚಿವ ಸಂಪುಟ ಸಭೆಯಲ್ಲಿ ಅಡಿಕೆ ಬೆಳೆಗಾರರ ಸಮಸ್ಯೆಗಳಿಗೆ…

14 hours ago

ಮಳೆಗೆ ಬೆಂಗಳೂರು ತತ್ತರ – ಸಂಜೆ ಏಕಾಏಕಿ ಸುರಿದ ಧಾರಾಕಾರ ಮಳೆಗೆ ರಸ್ತೆಗಳು ಜಲಾವೃತ

ಬೆಂಗಳೂರಿನಲ್ಲಿ ಮಂಗಳವಾರ ಸಂಜೆ ಏಕಾಏಕಿ ಸುರಿದ ಭಾರೀ ಮಳೆಗೆ ಹಲವು ರಸ್ತೆಗಳು ಜಲಾವೃತವಾಗಿ…

15 hours ago

ಹವಾಮಾನ ವರದಿ | 15-09-2026 | ಕರ್ನಾಟಕದಲ್ಲಿ ಮಳೆ ಮತ್ತೆ ಚುರುಕಾಗುವ ಸೂಚನೆ

ಕರ್ನಾಟಕದಲ್ಲಿ ಸದ್ಯ ಬಿಸಿಲು ಮುಂದುವರಿದಿದ್ದರೂ ಸೆ.16ರಿಂದ ಮಲೆನಾಡು, ಸೆ.17ರಿಂದ ಉತ್ತರ ಒಳನಾಡಿನಲ್ಲಿ ಮೋಡ…

1 day ago

ಹವಾಮಾನ ವರದಿ | 14-09-2026 | ಸೆ.18ರ ಬಳಿಕ ಮಳೆ ಚಿತ್ರಣ ಬದಲಾಗಬಹುದೇ?

ಕರ್ನಾಟಕದಲ್ಲಿ ಸದ್ಯ ಬಿಸಿಲು ಮುಂದುವರಿದಿದ್ದರೂ ಸೆ.18ರಿಂದ ಮಳೆಯ ವ್ಯಾಪ್ತಿ ಹೆಚ್ಚಾಗುವ ಸೂಚನೆಗಳಿವೆ. ಸೆ.19ರಿಂದ…

2 days ago