ಪದ್ಮವಿಭೂಷಣ ಪ್ರಶಸ್ತಿ ವಿಜೇತ ಖ್ಯಾತ ಕಥಕ್ ನೃತ್ಯಗಾರ ಬಿರ್ಜು ಮಹಾರಾಜ್ (83) ಅವರು ಹೃದಯಾಘಾತದಿಂದ ಭಾನುವಾರ ತಡರಾತ್ರಿ ದೆಹಲಿಯ ತಮ್ಮ ನಿವಾಸದಲ್ಲಿ ನಿಧನರಾಗಿದ್ದಾರೆ.
ಫೆಬ್ರವರಿ 4,1937ರಂದು ಪ್ರಸಿದ್ಧ ಕಥನ್ ನೃತ್ಯ ಕುಟುಂಬದಲ್ಲಿ ಜನಿಸಿದರು. ಇವರ ಮೊದಲಿನ ಹೆಸರು ಮೋಹನ್ ನಾಥ್ ಮಿಶ್ರಾ. 28 ವರ್ಷದವರಾಗಿದ್ದಾಗ, ಬಿರ್ಜು ಮಹಾರಾಜ್ ಅವರ ನೃತ್ಯ ಪ್ರಕಾರದ ಪಾಂಡಿತ್ಯವು ಇವರಿಗೆ ಅಸ್ಕರ್ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿಯನ್ನು ತಂದುಕೊಟ್ಟಿತು.
ಅದ್ಬುತ ನೃತ್ಯ ಸಂಯೋಜಕರಾಗಿದ್ದ ಅವರು ನೃತ್ಯ- ನಾಟಕಗಳ ಮೂಲಕ ಜನಮನ ಗೆದ್ದಿದ್ದರು. ಬಿರ್ಜು ಮಹಾರಾಜ್ ಅವರು 1986 ರಲ್ಲಿ ಪದ್ಮವಿಭೂಷಣ ಸೇರಿದಂತೆ ಹಲವಾರು ಪ್ರಶಸ್ತಿಗಳನ್ನು ಪಡೆದಿದ್ದಾರೆ. ಅವರ ನೃತ್ಯದ ವಿಡಿಯೋ ಇಲ್ಲಿದೆ….
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel