ಬದುಕಿನ ದಾರಿಯಲ್ಲಿ, ಚಲಿಸುವ ಪಥಗಳಲ್ಲಿ ಏನೋ ಒಂದು ಕಥೆಗಳಿವೆ…
ಜೀವನದ ಹಾದಿಯಲ್ಲಿ, ಹುಟ್ಟು-ಸಾವು ಮದ್ಯದಲ್ಲಿ ಚರಿತ್ರೆ ಸೃಷ್ಟಿಸುವ ಅವಕಾಶಗಳಿವೆ…
ಪ್ರತಿಯೊಂದು ಹೆಜ್ಜೆಯಲ್ಲೂ ಸೋಲು ಒಂದು ಪಾಠವಾಗಿ, ಗೆಲುವು ಪ್ರತಿಫಲವಾಗಿ ದೊರೆಯುವುದು ಸಾಧನೆಯ ಹಾದಿಯಲ್ಲಿ…
ಸೋಲಿಗೆಂದು ಹೆದರದೆ-ಬೆದರದೆ,
ನೋವಿಗೆಂದು ಜಗ್ಗದೆ-ಕುಗ್ಗದೆ ಸಾಗುವುದೇ ಜೀವನ,
ಮುಂದೆ ಸಾಗುವುದೇ ಜೀವನ…
ರಾತ್ರಿ ಕಾಣುವ ಕನಸೆಲ್ಲಾ ಎಂದಿಗೂ ನನಸಾಗದು…
ಪ್ರಯತ್ನವು ಇಲ್ಲದೇ ಫಲವು ಎಂದಿಗೂ ದೊರೆಯದು…
ಬದುಕಿನ ದಾರಿಯಲ್ಲಿ, ಚಲಿಸುವ ಪಥಗಳಲ್ಲಿ ಏನೋ ಒಂದು ಕಥೆಗಳಿವೆ…
ಹೇಳಲು ಆಗದ ಕಥೆಗಳು, ಹೇಳಿಯೂ ತೀರದ ಕಥೆಗಳು ನಮ್ಮ-ನಿಮ್ಮ ಬದುಕಿನಲ್ಲಿ ನೂರಾರು…
ನಮ್ಮ ಬದುಕಿನ ಕಥೆಗಳೆಲ್ಲಾ ಮುಂದೆ ಒಂದು ಚರಿತ್ರೆಯಾಗಿ ಎಲ್ಲರಿಗೂ ಸ್ಪೂರ್ತಿಯಾಗಿ ಬದುಕುವುದೇ ಜೀವನ,
ನಾವು ಸತ್ತ ಮೇಲೂ ಬದುಕುವುದೇ ಜೀವನ…
# ಉಲ್ಲಾಸ್ ಕಜ್ಜೋಡಿ
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Rural Mirror Special |
Subscribe Our Channel