ಮರಳಿನ ಮೇಲೆ ಬರೆದೆಯೊಂದು ಓಲೆ
ಅಳಿಸಿಬಿಟ್ಟಿತು ಅಪ್ಪಳಿಸಿದ ಅಲೆ
ಅಳಿಯದೇ ಉಳಿಯಿತು,ನೆನಪಿನ ಕಲೆ
ನಿನ್ನ ಜೊತೆ ಕಟ್ಟಿದೆ ನೂರಾರು ಕನಸು
ಇಂದೇಕೋ ಮುಳುವಾಯ್ತು ನನ್ನ ವಯಸ್ಸು
ಕ್ಷಣ ಮಾತ್ರದಲ್ಲಿ ಮುರಿದು ಬಿಟ್ಟೆ ನನ್ನ ಮನಸ್ಸು
ಕಾಲ ಸಾಗಿದೆ,ನೆನಪುಗಳು ಕಾಡುತಿದೆ
ಮನಸ್ಸು ಮರಳಿ ಸಾಮಿಪ್ಯ ಬೇಡುತಿದೆ
ಕಣ್ಣ ರೆಪ್ಪೆಗಳು ಮುಚ್ಚದೇ ಕಾಯುತಿದೆ
ನೀನಾಗಿದ್ದೆ ನನಗೆ ಸಂಗೀತ ರಾಗ
ಕೊಟ್ಟುಬಿಟ್ಟಿದ್ದೆ ನಿನಗೆ ನನ್ನೆದೆಯ ಜಾಗ
ಇಂದು ಭಾದಿಸುತಿದೆ ನಿನ್ನ ನೆನಪಿನ ರೋಗ
ಕಳೆದು ಹೋದೆ ನಾನು ನಿನ್ನೊಳಗೆ
ತಿಳಿಯದೇ ಮರೆಯಾದೆ ನಾ ನನ್ನೊಳಗೆ
ಮರೆಯಾಗಿದೆ ನಿನ್ನನಗಲಿ ನನ್ನ ಮುಗುಳ್ನಗೆ
ಸಾಕಾಯ್ತು ನನಗೆ ನೆನಪುಗಳೊಡನೆ ಹೋರಾಟ
ಮುಗಿಯುವುದೆಂದೋ ನಾ ಕಾಣೆ ಈ ಸಂಕಟ
ಆದಷ್ಟು ಬೇಗ ಕೊನೆಗಾಣಬೇಕಿದೆ ಈ ಪರದಾಟ
# ಅಪೂರ್ವ ಚೇತನ್ ಪೆರಂದೋಡಿ
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel