ಮರಳಿನ ಮೇಲೆ ಬರೆದೆಯೊಂದು ಓಲೆ
ಅಳಿಸಿಬಿಟ್ಟಿತು ಅಪ್ಪಳಿಸಿದ ಅಲೆ
ಅಳಿಯದೇ ಉಳಿಯಿತು,ನೆನಪಿನ ಕಲೆ
ನಿನ್ನ ಜೊತೆ ಕಟ್ಟಿದೆ ನೂರಾರು ಕನಸು
ಇಂದೇಕೋ ಮುಳುವಾಯ್ತು ನನ್ನ ವಯಸ್ಸು
ಕ್ಷಣ ಮಾತ್ರದಲ್ಲಿ ಮುರಿದು ಬಿಟ್ಟೆ ನನ್ನ ಮನಸ್ಸು
ಕಾಲ ಸಾಗಿದೆ,ನೆನಪುಗಳು ಕಾಡುತಿದೆ
ಮನಸ್ಸು ಮರಳಿ ಸಾಮಿಪ್ಯ ಬೇಡುತಿದೆ
ಕಣ್ಣ ರೆಪ್ಪೆಗಳು ಮುಚ್ಚದೇ ಕಾಯುತಿದೆ
ನೀನಾಗಿದ್ದೆ ನನಗೆ ಸಂಗೀತ ರಾಗ
ಕೊಟ್ಟುಬಿಟ್ಟಿದ್ದೆ ನಿನಗೆ ನನ್ನೆದೆಯ ಜಾಗ
ಇಂದು ಭಾದಿಸುತಿದೆ ನಿನ್ನ ನೆನಪಿನ ರೋಗ
ಕಳೆದು ಹೋದೆ ನಾನು ನಿನ್ನೊಳಗೆ
ತಿಳಿಯದೇ ಮರೆಯಾದೆ ನಾ ನನ್ನೊಳಗೆ
ಮರೆಯಾಗಿದೆ ನಿನ್ನನಗಲಿ ನನ್ನ ಮುಗುಳ್ನಗೆ
ಸಾಕಾಯ್ತು ನನಗೆ ನೆನಪುಗಳೊಡನೆ ಹೋರಾಟ
ಮುಗಿಯುವುದೆಂದೋ ನಾ ಕಾಣೆ ಈ ಸಂಕಟ
ಆದಷ್ಟು ಬೇಗ ಕೊನೆಗಾಣಬೇಕಿದೆ ಈ ಪರದಾಟ
# ಅಪೂರ್ವ ಚೇತನ್ ಪೆರಂದೋಡಿ
ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದ ಕಾವೇರಿ ನದಿ ತೀರದಲ್ಲಿ ಅಸ್ತಿ ವಿಸರ್ಜನೆ ಮಾಡಿ ನದಿ…
ದ ಕ ಜಿಲ್ಲೆಯಲ್ಲಿ ಅಡಿಕೆಗೆ ಕೊಳೆರೋಗ ಭಾದಿಸಿದ್ದು ಇದರಿಂದ ಅಡಿಕೆ ಬೆಳೆಗಾರರು ಸಂಕಷ್ಟಕ್ಕೆ…
15.08.2025ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ಕರಾವಳಿ :…
ಒಂದು ಹಸುವಿನ ಸಗಣಿಯಿಂದ ಪ್ರತಿ ವರ್ಷ 225 ಲೀಟರ್ ಪೆಟ್ರೋಲ್‌ಗೆ ಸಮಾನವಾದ ಮೀಥೇನ್…
ಕನ್ನಡದ ಸ್ಥಿತಿ ಇಂದು ಬೇಲಿ ಇಲ್ಲದ ತೋಟದಂತೆ, ಬಾಗಿಲಿಲ್ಲದ ಮನೆಯಂತಾಗಿದ್ದು, ನಾಲಿಗೆ ಶುದ್ಧೀಕರಣ,…