ಹುಟ್ಟಿದಾಗ ದೃಷ್ಟಿ ಕಳೆದುಕೊಂಡಾತ
ಜಗತ್ತನ್ನು ಕಾಣಲಾಗಲಿಲ್ಲವೆಂದು,
ಬದುಕನ್ನು ಕಳೆದುಕೊಂಡಿದ್ದರೆ
ಜಗದಲ್ಲಿ ಕುರುಡರೇ
ಕಾಣಸಿಗುತ್ತಿರಲಿಲ್ಲ….!
ಕಿವಿಗಳಿಲ್ಲದವರು ತನ್ನವರ
ನುಡಿಗಳ ಕೇಳಿಸಿಕೊಳ್ಳಲಾಗುತ್ತಿಲ್ಲವೆಂದು
ಬದುಕಿಗೆ ಅಂತ್ಯವಿಡುತ್ತಿದ್ದರೆ
ಇಂದು ಕಿವುಡರೇ
ಕಾಣ ಸಿಗುತ್ತಿರಲಿಲ್ಲ…..!
ಪ್ರೀತಿ ಸಿಗದೇ ಇದ್ದವರೆಲ್ಲಾ,
ತಮ್ಮ ಬದುಕನ್ನು
ಅಂತ್ಯಗಾಣಿಸುತ್ತಿದ್ದರೆ,
ಅನಾಥವೆಂಬ ಪದಕೆ
ಅರ್ಥವೇ ಇರುತ್ತಿರಲಿಲ್ಲ…!
ಕಷ್ಟಕ್ಕೆ ಹೆದರಿ ಎಲ್ಲರೂ
ಬದುಕನ್ನು ಕಳೆದುಕೊಂಡಿದ್ದರೆ
ಬದುಕಿನ ಸುಂದರ ಕ್ಷಣಗಳ
ಯಾರು ಅನುಭವಿಸುತ್ತಿರಲಿಲ್ಲ..!
ಕಷ್ಟಗಳ ಬದುಕಿನ ದಾರಿಯಾಗಿಸಬೇಕು
ನೋವುಗಳನ್ನೇ ಬದುಕಿನ ಬೆಳಕಾಗಿಸಬೇಕು
ಬದುಕಿ ಏನನ್ನೂ ಸಾಧಿಸಲಾಗಲಿಲ್ಲವೆಂದ ಮೇಲೆ,
ಸತ್ತು ಸಾಧಿಸುವುದೇನಿದೆ….?
#ಅಪೂರ್ವ ಕೊಲ್ಯ
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel