ಮಾನವನಾಗಿ ಹುಟ್ಟಿದ ಮೇಲೆ ಸೋಲು ಗೆಲುವು ಸಾಮಾನ್ಯ,
ಅವುಗಳನೆಲ್ಲಾ ಎದುರಿಸಿ ನಿಲ್ಲು ನೀನಾಗುವೆ ಸನ್ಮಾನ್ಯ…
ನಿನ್ನಯ ಬದುಕನು ರೂಪಿಸೋ ಹೊಣೆಯು ನಿನ್ನದೇ ತಿಳಿಯೋ ಮನುಜ,
ಜೀವನ ರೂಪಿಸೊ ಹೋರಾಟದಲಿ ನೋವು ನಲಿವೆಲ್ಲಾ ಸಹಜ,
ಅವುಗಳಿಗೆಲ್ಲಾ ಹೆದರಿ ಕುಳಿತರೆ ಗೆಲ್ಲಲಾರೆ ನೀ ಬದುಕಿನಲಿ…
ಬದುಕಿನ ಪ್ರತಿದಿನ ಪ್ರತಿಕ್ಷಣ ನೀನು ಎಚ್ಚರದಿಂದ ಹೋರಾಡು,
ನಿನ್ನಯ ಬದುಕಿನ ಹಾದಿಯಲ್ಲಿ ನಿನ್ನವರಾರು ನೀ ತಿಳಿಯೋ,
ನಿನ್ನ ಸೋಲಿನಲ್ಲಿ ನಿನ್ನೊಂದಿಗಿದ್ದವರು ಮಾತ್ರ ಇಲ್ಲಿ ನಿನ್ನವರು…
ನಿನ್ನಯ ಏಳಿಗೆ ನೋಡಿ ಸಹಿಸದ ವ್ಯಕ್ತಿಗಳಿಹರು ತುಂಬಾ,
ಯಾರ ಎದುರು ತೋರಿಸಬೇಡ ಎಂದೆಂದಿಗೂ ನೀ ಜಂಭ…
ಬದುಕಲಿ ಎಷ್ಟೇ ಎತ್ತರ ಬೆಳೆದರೂ ಮೆರೆಯಬೇಡ ನೀ ತುಂಬಾ…
ನಿನ್ನಯ ಸೋಲಿಗೆ ಕಾಯುವ ಜನರಿಗೆ ಗೆಲುವಿನ ಮೂಲಕ ಉತ್ತರಿಸು,
ಕಷ್ಟದಿಂದ ಬಂದ ಜನರ ಕಷ್ಟಗಳಿಗೆ ನೀ ಸಹಕರಿಸು…
ನಿನ್ನಿಂದ ಸಹಾಯ ಪಡೆದವರ ಆಶಿರ್ವಾದವೇ ನಿನಗೆ ಶ್ರೀರಕ್ಷೆ…
ಹಣಕ್ಕಾಗಿ ನೀ ಬದುಕಬೇಡ, ಗುಣಕ್ಕಾಗಿ ನೀ ಬದುಕು…
ಜೀವನದಲ್ಲಿ ಸೋಲಿನ ಕಥೆಗಳೇ ನಿನ್ನಯ ಬದುಕಿಗೆ ಸ್ಪೂರ್ತಿ…
ನೂರು ಪಾಠವ ಕಲಿಸುವ ಸೋಲೇ, ಗೆಲುವಿನ ಹಾದಿಯ ತೋರುವುದು…
ಮಾನವನಾಗಿ ಹುಟ್ಟಿದ ಮೇಲೆ ಸೋಲು-ಗೆಲುವು ಸಾಮಾನ್ಯ,
ಅವುಗಳನೆಲ್ಲಾ ಎದುರಿಸಿ ನಿಲ್ಲು ನೀನಾಗುವೆ ಸನ್ಮಾನ್ಯ…
# ಉಲ್ಲಾಸ್ ಕಜ್ಜೋಡಿ
ಕರಾವಳಿ ಹಾಗೂ ಮಲೆನಾಡಿನ ಕೆಲವೆಡೆ ಸಂಜೆ ಗುಡುಗು ಸಹಿತ ಮಳೆಯ ಸಾಧ್ಯತೆಯಿದ್ದು, ಅ.9…
ಕರ್ನಾಟಕದಲ್ಲಿ ನೈಋತ್ಯ ಮುಂಗಾರು ಸಕ್ರಿಯವಾಗಿದ್ದು, ಕರಾವಳಿ ಮತ್ತು ಮಲೆನಾಡು ಸೇರಿದಂತೆ ಹಲವೆಡೆ ಉತ್ತಮ…
ರಾಜ್ಯದಲ್ಲಿ ಸದ್ಯ ಯಾವುದೇ ರೀತಿಯ ವಿದ್ಯುತ್ ಲೋಡ್‌ಶೆಡ್ಡಿಂಗ್ ಇಲ್ಲ ಎಂದು ಇಂಧನ ಸಚಿವ…
2027-28ನೇ ಸಾಲಿನಲ್ಲಿ ನವೋದಯ ವಿದ್ಯಾಲಯಗಳ 9 ಮತ್ತು 11ನೇ ತರಗತಿಯ ಖಾಲಿ ಸ್ಥಾನಗಳಿಗೆ…
1973ರ ಅಡಿಕೆ ಮಾರುಕಟ್ಟೆ ಬಿಕ್ಕಟ್ಟು ಉತ್ಪಾದನೆ ಹೆಚ್ಚಳಕ್ಕೆ ತಕ್ಕಂತೆ ಮಾರುಕಟ್ಟೆ ಹೀರಿಕೊಳ್ಳುವ ಸಾಮರ್ಥ್ಯವೂ…
ಅರಬ್ಬಿ ಸಮುದ್ರದ ಉಡುಪಿ–ದಕ್ಷಿಣ ಕನ್ನಡ ಕರಾವಳಿ ಸಮೀಪ ರೂಪುಗೊಂಡಿರುವ ಮೇಲ್ಮೈ ಸುಳಿಗಾಳಿಯಿಂದ ಕರಾವಳಿ,…