ಕವನ | ಮನದ ತೊಳಲಾಟ

November 29, 2021
10:30 AM

ಕಾರಣವೇ ಇಲ್ಲದೆ ಮನದಲ್ಲಿ
ಮೌನದ ಮೋಡ ಕವಿದಿದೆ.
ಹೆಜ್ಜೆಯ ಜೊತೆ ಗೆಜ್ಜೆಯ ಸಪ್ಪಳವಿದ್ದರೂ
ನಡಿಗೆಯಲಿ ಏಕಾಂಗಿತನದ ನೆರಳಿದೆ.
ಮನದ ಮೋಡಗಳ ನಡುವೆ ಅದೇಕೋ ಗುದ್ದಾಟ..
ಯಾಕೆ…..ಈ ಸಂಘರ್ಷ…?

Advertisement
Advertisement

ಹನಿಯಾಗಿ ಹರಿಯುತ್ತಿಲ್ಲ.. ಅಲ್ಲೇ ಬತ್ತಿದ ಭಾವ..
ಏನೀ … ತೊಳಲಾಟ…?
ಹೊತ್ತು ಸರಿದಷ್ಟು ಗಾಢ ಕತ್ತಲು ಆವರಿಸುತ್ತಿದೆ…
ಮೌನ ರಕ್ಕಸತನದಿ ಮೆರೆಯುತಿದೆ
ಮಾತು ಹೊರಬರಲು ಅಂಜುತಿದೆ
ಮೊಗದ ಕನ್ನಡಿಯಲಿ…..
ಪ್ರಶ್ನೆಗಳದೇ ಸುರಿಮಳೆ
ಎಲ್ಲಿದೆ …..ಉತ್ತರ…?

ಉತ್ತರದ ಹುಡುಕಾಟದಲ್ಲಿ ಮತ್ತದೇ ಪ್ರಶ್ನೆ
ಕಣ್ಣ ರೆಪ್ಪೆಗಳೂ ಮುಚ್ಚದೇ ಕಾಯುತಿದೆ
ತುಟಿಯಂಚಿನಲಿ ಮಾತು ಹೊರಬರಲು ಯತ್ನಿಸುತಿದೆ
ಮನಸ್ಸು ಮೌನದ ಬೇಗೆಯಿಂದ
ಬೇರ್ಪಡಲು ತವಕಿಸುತಿದೆ…
ಮೌನದ ರಕ್ಕಸ ನರ್ತನಕೆ
ಮನಸ್ಸು ಶರಣಾಗಿದೆ…
ಸೋತು ಬಸವಳಿದಿದೆ…..

ಆದರೂ ಅದೆಲ್ಲೋ ಮೂಲೆಯಲಿ
ನಾಳಿನ ಬೆಳಕು ಕಾಣುವ
ಭರವಸೆಯ ಕಿಡಿಯು ಗೋಚರಿಸುತಿದೆ

# ಅಪೂರ್ವ ಚೇತನ್ ಪೆರಂದೋಡಿ

Advertisement
Advertisement

Advertisement

Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ಅಪೂರ್ವಚೇತನ್ ಪೆರಂದೋಡಿ

ಶಿಕ್ಷಕಿ

ಇದನ್ನೂ ಓದಿ

ಬದುಕು ಪುರಾಣ | ಯಕ್ಷಪ್ರಶ್ನೆಯೊಳಗೆ ಧರ್ಮ ಗೂಢತೆಯ ಗೊಂಚಲು
July 27, 2025
8:16 PM
by: ನಾ.ಕಾರಂತ ಪೆರಾಜೆ
ಹೊಸರುಚಿ | ಹಲಸಿನ ಬೀಜದ ಖಾರದ ಕಡ್ಡಿ
July 26, 2025
7:27 AM
by: ದಿವ್ಯ ಮಹೇಶ್
ಕಾಡೆಂದರೇನು…? , ಅರಣ್ಯ ಸಚಿವರಿಗೆ ಇದೊಂದು ಮನವಿ..
July 24, 2025
12:43 PM
by: ಪ್ರಬಂಧ ಅಂಬುತೀರ್ಥ
ಸಾಮಾನ್ಯ ಜನರ ಗ್ರಹಿಕೆಗೆ ಸಿಲುಕದ ವಿದ್ಯಮಾನಗಳು
July 23, 2025
8:56 PM
by: ಡಾ.ಚಂದ್ರಶೇಖರ ದಾಮ್ಲೆ

You cannot copy content of this page - Copyright -The Rural Mirror

Join Our Group