Advertisement
MIRROR FOCUS

ಕಾಯಕ ಗ್ರಾಮ  ಯೋಜನೆ | ಹಿಂದುಳಿದ ಗ್ರಾಮಗಳನ್ನು ದತ್ತು ಸ್ವೀಕರಿಸುವಂತೆ ಸಲಹೆ

Share

ʼಕಾಯಕ ಗ್ರಾಮʼ ಯೋಜನೆಯಡಿ ಹಿಂದುಳಿ ದಿರುವ  ಗ್ರಾಮ ಪಂಚಾಯತಿಯನ್ನು  ದತ್ತು ಸ್ವೀಕಾರ ಮಾಡಬೇಕೆಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್   ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.

ಗ್ರಾಮೀಣ ಕರ್ನಾಟಕದ ಕುಡಿಯುವ ನೀರು ಸರಬರಾಜು  ಸ್ಥಿತಿಗತಿ ಕುರಿತು  ಏರ್ಪಡಿಸಿದ್ದ  ಒಂದು ದಿನದ ಕಾರ್ಯಾಗಾರದಲ್ಲಿ ಪಾಲ್ಗೊಂಡಿದ್ದ ಸಚಿವರು, ಗ್ರಾಮಗಳಲ್ಲಿ ಸುಸ್ಥಿರ ಜಲ ಹಾಗೂ ಸುಸ್ಥಿರ ವಿದ್ಯುತ್‌ ಸರಬರಾಜು ಮಾಡುವ ಮಹತ್ತರ ಆಶಯವನ್ನು ಈ ಬಾರಿ ಕಾರ್ಯಗತಗೊಳಿಸಲು ಮೊದಲ ಹೆಜ್ಜೆ ಇರಿಸಲಾಗಿದ್ದು, ಗ್ರಾಮಗಳ ಸುಧಾರಣೆ, ಆರ್ಥಿಕ ಸುಸ್ಥಿರತೆಯ ಬಗ್ಗೆ ಜಿಲ್ಲಾ ಪಂಚಾಯತಿಗಳ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಸ್ವತಂತ್ರವಾಗಿ ಯೋಚನೆ ಮಾಡಬೇಕು, ಪ್ರವಾಸಿ ಸ್ಥಳಗಳಲ್ಲಿನ ಗ್ರಾಮ ಪಂಚಾಯತಿ ಆಸ್ತಿಗಳನ್ನು ಆದಾಯ ಮೂಲ ಆಸ್ತಿಗಳನ್ನಾಗಿಸಬೇಕು ಎಂದು  ಸಲಹೆ ನೀಡಿದರು.

ದೇಶದಲ್ಲಿನ ಪಂಚಾಯತ್‌ ಸಂಸ್ಥೆಗಳಲ್ಲಿ ಕರ್ನಾಟಕ ಅಳವಡಿಸಿಕೊಂಡಿರುವ ಪದ್ಧತಿಗಳನ್ನು ಗುರುತಿಸಿ ಕೇಂದ್ರ ಸರ್ಕಾರ ಪ್ರಥಮ ಸ್ಥಾನ ನೀಡಿದೆ, ಈ ಬಾರಿ ಗ್ರಾಮ ಪಂಚಾಯತಿಗಳಲ್ಲಿ 1ಸಾವಿರದ 271 ಕೋಟಿ ರೂಪಾಯಿ  ಆಸ್ತಿ ತೆರಿಗೆ ಸಂಗ್ರಹಿಸುವ ಮೂಲಕ ಅತಿ ಹೆಚ್ಚು ಕರಸಂಗ್ರಹಣೆಯ ಹೆಗ್ಗಳಿಕೆಗೆ ಪಾತ್ರವಾಗಿದೆ. ಈ ಎರಡೂ ಸಾಧನೆಗಳಿಗೆ ಸಾರಥ್ಯವಹಿಸಿದ ಜಿಲ್ಲಾ ಪಂಚಾಯತಿಗಳ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳನ್ನು ಸಚಿವ ಪ್ರಿಯಾಂಕ್‌ ಖರ್ಗೆ ಶ್ಲಾಘಿಸಿದರು.  ಕಾರ್ಯಾಗಾರದಲ್ಲಿ  ಜಿಲ್ಲಾ ಪಂಚಾಯತಿಗಳ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಹಾಗೂ ಗ್ರಾಮೀಣ ನೀರು ಸರಬರಾಜು ಇಲಾಖೆಯ ಎಂಜನಿಯರ್‌ಗಳು ಪಾಲ್ಗೊಂಡಿದ್ದರು.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

Published by
The Rural Mirror ಸುದ್ದಿಜಾಲ

Recent Posts

ರಾಜ್ಯಾದ್ಯಂತ ನವರಾತ್ರಿ ಸಂಭ್ರಮ : ಶಕ್ತಿಪೀಠಗಳಲ್ಲಿ ವಿಶೇಷ ಪೂಜೆ, ಮಂಗಳೂರು–ಮಡಿಕೇರಿ–ಶ್ರೀರಂಗಪಟ್ಟಣದಲ್ಲಿ ದಸರಾ ಸಂಭ್ರಮ

ರಾಜ್ಯಾದ್ಯಂತ ನವರಾತ್ರಿ ಸಂಭ್ರಮ ಮನೆಮಾಡಿದ್ದು, ಶೃಂಗೇರಿ, ಹೊರನಾಡು, ಕಟೀಲು ಮತ್ತು ಕೊಲ್ಲೂರು ಸೇರಿದಂತೆ…

2 hours ago

ಪಶ್ಚಿಮ ಘಟ್ಟ ಉಳಿಸಿ, ಉತ್ತರ ಕನ್ನಡ ರಕ್ಷಿಸಿ : ಬೇಡ್ತಿ–ಅಘನಾಶಿನಿ ನದಿ ತಿರುವು ಯೋಜನೆಗೆ ವಿರೋಧ

ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ನಡೆದ ಬೃಹತ್ ಧರಣಿಯಲ್ಲಿ ಬೇಡ್ತಿ–ಅಘನಾಶಿನಿ ನದಿ ತಿರುವು ಯೋಜನೆಯನ್ನು…

2 hours ago

ನಗರೀಕರಣದ ನಡುವೆ ಪ್ರಕೃತಿ, ವನ್ಯಜೀವಿಗಳ ಸಮತೋಲನ ಕಾಪಾಡುವುದು ಆದ್ಯತೆಯಾಗಲಿ

ನಗರೀಕರಣದ ನಡುವೆ ಪ್ರಕೃತಿ ಮತ್ತು ವನ್ಯಜೀವಿಗಳ ನಡುವಿನ ಸಮತೋಲನ ಕಾಪಾಡುವುದು ಎಲ್ಲರ ಆದ್ಯತೆಯಾಗಬೇಕು…

22 hours ago

ಕೊರಿಯರ್ ಮೂಲಕ ಮಾದಕ ದ್ರವ್ಯ ಸಾಗಾಟ..! ಮಂಗಳೂರಿನಲ್ಲಿ 1.58 ಕೋಟಿ ರೂ. ಮೌಲ್ಯದ ಎಂಡಿಎಂಎ ವಶ

ಮಂಗಳೂರಿನಲ್ಲಿ ಕೊರಿಯರ್ ಮೂಲಕ ಎಂಡಿಎಂಎ ಸಾಗಾಟ ಮಾಡಿದ ಆರೋಪದ ಮೇಲೆ ಸಿಸಿಬಿ ಪೊಲೀಸರು…

22 hours ago

ಡಿಸೆಂಬರ್‌ನಲ್ಲಿ ಮತ್ತಷ್ಟು ತೀವ್ರಗೊಳ್ಳಲಿದೆಯೇ ಎಲ್‌ನಿನೋ..? ಬರ, ಪ್ರವಾಹದ ಅಪಾಯದ ಬಗ್ಗೆ ವಿಶ್ವ ಹವಾಮಾನ ಸಂಸ್ಥೆ ಎಚ್ಚರಿಕೆ

ಎಲ್‌ನಿನೋ ವಿದ್ಯಮಾನವು ಡಿಸೆಂಬರ್‌ನಲ್ಲಿ ಗರಿಷ್ಠ ತೀವ್ರತೆ ತಲುಪುವ ಸಾಧ್ಯತೆಯಿದ್ದು, 2027ರ ಫೆಬ್ರವರಿವರೆಗೆ ಮುಂದುವರಿಯಬಹುದು…

22 hours ago