ಕೆದಂಬಾಡಿ ರಾಮಯ್ಯ ಗೌಡ ಕಂಚಿನ ಪ್ರತಿಮೆ | ಸಂಪಾಜೆ ಬಳಿ ಅದ್ದೂರಿ ಸ್ವಾಗತ |

August 29, 2022
10:42 PM

ಮಂಗಳೂರಿನ ಬಾವುಟಗುಡ್ಡೆಯಲ್ಲಿ ಅನಾವರಣಗೊಳ್ಳರಲಿರುವ ಕೆಚ್ಚೆದೆಯ ಸ್ವಾತಂತ್ರ್ಯ ಹೋರಾಟಗಾರ, ಸಂಘಟನಾ ಚತುರ ಕೆದಂಬಾಡಿ ರಾಮಯ್ಯ ಗೌಡ ಇವರ ಕಂಚಿನ ಪ್ರತಿಮೆಯ ಮೆರವಣಿಗೆ ಸೋಮವಾರ  ಕೊಡಗು ಸಂಪಾಜೆ ಗ್ರಾಮದ ಚೆಕ್ ಪೋಸ್ಟ್ ಬಳಿ ಸ್ವಾಗತಿಸಲಾಯಿತು.

ಪ್ರಥಮ ಸ್ವಾತಂತ್ರ್ಯ ಸಂಗ್ರಾಮ ಆರಂಭವಾಗಿದ್ದು 1857 ರಲ್ಲಿ ಎಂದು‌ ಉಲ್ಲೇಖಿಸಲಾಗಿದ್ದರೂ ಅದಕ್ಕೂ‌ 20 ವರ್ಷ ಮೊದಲೇ ಬ್ರಿಟಿಷರ‌ ದಾಸ್ಯದ ಪದ್ಧತಿಯನ್ನು ವಿರೋಧಿಸಿ, ದೇಶದಲ್ಲೇ ಮೊದಲ ಸ್ವಾತಂತ್ರ್ಯದ ರಣ ಕಹಳೆ ಮೊಳಗಿಸಿದ್ದ, ಹಿರಿಯ ಸ್ವಾತಂತ್ರ್ಯ ಹೋರಾಟಗಾರ, ಸುಳ್ಯದ ಕೆದಂಬಾಡಿ ರಾಮಯ್ಯಗೌಡರ ಕಂಚಿನ ಪ್ರತಿಮೆಯನ್ನು ಮಂಗಳೂರಿನ ಬಾವುಟಗುಡ್ಡೆಯಲ್ಲಿ ಪ್ರತಿಷ್ಠಾಪಿಸಲು ಕೆದಂಬಾಡಿ ರಾಮಯ್ಯ ಗೌಡ ಸ್ಮಾರಕ ಉಸ್ತುವಾರಿ ಸಮಿತಿಯು ಸರ್ಕಾರಕ್ಕೆ ಮನವಿ ಮಾಡಿಕೊಂಡ ಮೇರೆಗೆ ಸರ್ಕಾರದಿಂದ ಅನುಮೋದನೆ ದೊರೆತಿದ್ದು ಇದೀಗ ಕೆದಂಬಾಡಿ ರಾಮಯ್ಯಗೌಡರ ಕಂಚಿನ ಪುತ್ಥಳಿಯ ಅದ್ದೂರಿ ಮೆರವಣಿಗೆ ನಡೆಯಿತು.

ಈ ಪುತ್ಥಳಿ ಆಂಧ್ರಪ್ರದೇಶದ ವಿಜಯವಾಡದಲ್ಲಿ ಕಂಚಿನಿಂದ ತಯಾರಾಗಿದ್ದು ಇದರ ಎತ್ತರ ಸುಮಾರು 11 ಅಡಿ ಇದ್ದು ಚಿನ್ನದ ಬಣ್ಣದಿಂದ ಕೂಡಿದೆ. ಸಕಲ ಕಾರ್ಯಕ್ರಮಗಳ ಬಳಿಕ ಮಂಗಳೂರಿನ ಬಾವುಟ ಗುಡ್ಡೆಯಲ್ಲಿ ಅನಾವರಣಗೊಳ್ಳಲಿದೆ.

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಹವಾಮಾನ ವರದಿ | 05-04-2026 | ರಾಜ್ಯದಲ್ಲಿ ಮಳೆ ಕಡಿಮೆಯ ಸೂಚನೆ – ಕರಾವಳಿ-ಮಲೆನಾಡಿನಲ್ಲಿ ತುಂತುರು ಮಳೆ, ರಾಜ್ಯಾದ್ಯಂತ ಬಿಸಿಲು ಏರಿಕೆ..!
April 5, 2026
1:27 PM
by: ಸಾಯಿಶೇಖರ್ ಕರಿಕಳ
ದೇಶಾದ್ಯಂತ 9.25 ಕೋಟಿ ರೈತ ಐಡಿ ನಿರ್ಮಾಣ | ರಸಗೊಬ್ಬರ ಬ್ಲಾಕ್‌ ಮಾರ್ಕೆಟ್‌ ವಿರುದ್ಧ ಕಟ್ಟುನಿಟ್ಟಾಗಿ ಕ್ರಮಕ್ಕೆ ಕೇಂದ್ರ ಕೃಷಿ ಸಚಿವರ ಸೂಚನೆ
April 4, 2026
7:34 AM
by: ದ ರೂರಲ್ ಮಿರರ್.ಕಾಂ
ಮಕ್ಕಳ ಆಟದ ಹಿಂದೆ ಅಡಗಿರುವ ಅಪಾಯ ಗೊತ್ತಾ? ಬೇಸಿಗೆ ರಜೆಯಲ್ಲಿ ಮಕ್ಕಳ ಸುರಕ್ಷತೆ ಬಗ್ಗೆ ಇರಲಿ ಎಚ್ಚರಿಕೆ
April 3, 2026
9:24 PM
by: ಮಹೇಶ್ ಪುಚ್ಚಪ್ಪಾಡಿ
ಹವಾಮಾನ ವರದಿ | 03-04-2026 | ಕರ್ನಾಟಕದಲ್ಲಿ ಗುಡುಗು-ಮಳೆಯ ಸರಣಿ | ಎ.5 ರಿಂದ ವಿರಾಮ, 10 ರಿಂದ ಮಳೆ ವಾಪಸ್..!
April 3, 2026
4:02 PM
by: ಸಾಯಿಶೇಖರ್ ಕರಿಕಳ

You cannot copy content of this page - Copyright -The Rural Mirror