ಕೃಷಿಯ ಮಹತ್ವಗಳು ಹಾಗೂ ವ್ಯವಸಾಯ ಮಾಡುವಾಗ ಇವೆಲ್ಲವನ್ನೂ ನೆನಪಿನಲ್ಲಿಡಿ…

August 7, 2024
10:02 AM

ಭಾರತದಲ್ಲಿ ವ್ಯವಸಾಯ ಪದ್ಧತಿಯು ಪ್ರಾಚೀನ ಕಾಲದಿಂದಲೂ ರೂಢಿಯಲ್ಲಿರುವ ಮಾನವನ ಪುರಾತನ ವೃತ್ತಿ ಮತ್ತು ಪ್ರಮುಖ ಪ್ರಾಥಮಿಕ ಚಟುವಟಿಕೆಯಾಗಿದೆ. ಭಾರತವು ಕೃಷಿ ಪ್ರಧಾನ ರಾಷ್ಟ್ರವಾಗಿದೆ. ಈ ಕೆಳಗಿನ ಅಂಶಗಳಿಂದ ವ್ಯವಸಾಯದ ಮಹತ್ವಗಳು ಮತ್ತು ಅವುಗಳ ಪ್ರಭಾವಗಳನ್ನು ಕಾಣಬಹುದು. ಭಾರತದಲ್ಲಿ ಕೃಷಿಯು ಜನರ ಪ್ರಮುಖ ವೃತ್ತಿಯಾಗಿದೆ. ಸುಮಾರು ಶೇ. 70 ಕ್ಕೂ ಹೆಚ್ಚು ಜನರು ತಮ್ಮ ಜೀವನೋಪಾಯಕ್ಕಾಗಿ ಪ್ರತ್ಯೇಕ್ಷವಾಗಿ ಮತ್ತು ಪರೋಕ್ಷವಾಗಿ ವ್ಯವಸಾಯವನ್ನೇ ಅವಲಂಬಿಸಿದ್ದಾರೆ.

Advertisement

ವ್ಯವಸಾಯವು ಜನರಿಗೆ ಅಗತ್ಯವಾದ ಆಹಾರ ಧಾನ್ಯಗಳು, ಹಣ್ಣು, ತರಕಾರಿ, ಸಾಂಬಾರು ಪಾದಾರ್ಧ ಹಾಗೂ ಸಾಕು ಪ್ರಾಣಿಗಳಿಗೆ ಮೇವನ್ನು ಪೂರೈಸುವುದು. ಉದ್ಯೋಗವನ್ನು ಒದಗಿಸುವಲ್ಲಿ ಕೃಷಿಯು ಒಂದು ದೊಡ್ಡ ಉದ್ಯಮವಾಗಿದ್ದು ಹೆಚ್ಚು ಉದ್ಯೋಗಾವಕಾಶವನ್ನು ಕಲ್ಪಿಸುತ್ತದೆ. ರಾಷ್ಟ್ರೀಯ ಆದಾಯದ ಮೇಲೆ ಕೃಷಿಯು ಮಹತ್ವದ ಪಾತ್ರ ವಹಿಸುತ್ತದೆ. ಕೃಷಿಯು ಅನೇಕ ಕೈಗಾರಿಕೆಗಳಿಗೆ ಕಚ್ಚಾ ವಸ್ತುಗಳನ್ನು ಪೂರೈಸುತ್ತದೆ. ಅಂತಹ ಕೈಗಾರಿಕೆಗಳಿಗೆ ಕೃಷಿ ಆಧಾರಿತ ಕೈಗಾರಿಕೆಗಳುಎನ್ನುವರು. ಹತ್ತಿ, ಸಕ್ಕರೆ, ಸೆಣಬಿನ ಕೈಗಾರಿಕೆ ಮುಂತಾದವು. ಭಾರತದಲ್ಲಿ ಅನೇಕ ವ್ಯವಸಾಯ ಉತ್ಪನ್ನಗಳನ್ನು ಉತ್ಪಾದಿಸಲಾಗುತ್ತಿದೆ. ಅವುಗಳಲ್ಲಿ ಕೆಲವನ್ನು ರಫ್ತು ಮಾಡಲಾಗುತ್ತಿದೆ. ಅವು ಚಹಾ, ಕಾಫಿ, ಸೆಣಬು, ಹೊಗೆಸೊಪ್ಪು, ಸಕ್ಕರೆ, ಸಾಂಬಾರ ಪಾದಾರ್ಥ ಮುಂತಾದವು.

ರಾಜ್ಯ ಮತ್ತು ಕೇಂದ್ರ ಸರ್ಕಾರಗಳಿಗೆ ಅತಿ ಹೆಚ್ಚು ಪ್ರಮಾಣದ ಕಂದಾಯವನ್ನು ವ್ಯವಸಾಯವು ಒದಗಿಸುತ್ತದೆ. ಆದರೆ, ಭಾರತದ ವ್ಯವಸಾಯವು ಹೆಚ್ಚಾಗಿ ಮ್ಯಾನ್ಸನ್ ಮಳೆಯನ್ನು ಅವಲಂಬಿಸಿದೆ. ಹೀಗಾಗಿ ” ಭಾರತದ ಬಜೆಟ್ ಮುಂಗಾರಿನ ಜೊತೆ ಜೂಜಾಟ” ವಾಗಿ ಪರಿಗಣಿಸಿದೆ. ಸಾರಿಗೆ ಮತ್ತು ಸಂಪರ್ಕ, ಬ್ಯಾಂಕು, ವಿಮೆ, ಮುಂತಾದವುಗಳ ಅಭಿವೃದ್ಧಿಗೆ ವ್ಯವಸಾಯವು ಹೆಚ್ಚು ಸಹಾಯಕವಾಗಿರುವುದು. ಭಾರತದಲ್ಲಿ ವ್ಯವಸಾಯ ಉತ್ಪನ್ನವು ಒಂದು ಪ್ರದೇಶದಿಂದ ಇನ್ನೊಂದಕ್ಕೆ ವ್ಯತ್ಯಾಸವಾಗಿರುತ್ತದೆ. ಹೆಚ್ಚು ಉತ್ಪಾದಿಸುವ ಪ್ರದೇಶಗಳಿಂದ ಕೊರತೆ ಇರುವ ಪ್ರದೇಶಗಳಿಗೆ ವ್ಯವಸಾಯ ಉತ್ಪನ್ನಗಳನ್ನು ಆಂತರಿಕ ವ್ಯಾಪಾರದ ಮೂಲಕ ಸರಬರಾಜು ಮಾಡಲಾಗುತ್ತದೆ. ಉದಾ – ಹತ್ತಿ, ಸೆಣಬು, ಚಹಾ, ಕಾಫಿ ಮುಂತಾದವು.  ದೇಶದ ರಾಜಕೀಯ ಮತ್ತು ಸಾಮಾಜಿಕ ಪರಿಸ್ಥಿತಿಯು ಹೆಚ್ಚಾಗಿ ಉತ್ಪಾದಕರು ಹಾಗೂ ಕೃಷಿಕರಿಂದ ನಿರ್ಧರಿಸಲ್ಪಡುವುದು.

ವ್ಯವಸಾಯ ಮಾಡುವಾಗ ವಹಿಸಬೇಕಾದ ಕ್ರಮಗಳು:

  1. ಬೆಳೆಯಲ್ಲಿ ಕಬ್ಬಿಣ ಇದ್ದರೆ ಹುಳು ಬರುವುದಿಲ್ಲ.
  2. ಬೆಳೆಯಲ್ಲಿ ಸಲ್ಫರ್ ಇದ್ದರೆ ಫಂಗಸ್ ಬೆಳೆಯುವುದಿಲ್ಲ.
  3. ಬೆಳೆಯಲ್ಲಿ ಸತುವು ಇದ್ದರೆ ವೈರಾಣು ಹರಡುವುದಿಲ್ಲ.
  4. ಬೆಳೆಯಲ್ಲಿ ತಾಮ್ರ ಮತ್ತು ಮ್ಯಾಂಗನೀಸ್ ಇದ್ದರೆ ಬ್ಯಾಕ್ಟೀರಿಯಾ ಬ್ಲಾಸ್ಟ್‌ನಂತಹ ರೋಗಗಳು ಬರುವುದಿಲ್ಲ.
  5. ಬೆಳೆಯಲ್ಲಿ ಕ್ಯಾಲ್ಸಿಯಂ ಇದ್ದರೆ ಹೀರುವ ಕೀಟಗಳು ಬರುವುದಿಲ್ಲ.
  6. ಪ್ರಸ್ತುತ, ಮೇಲೆ ತಿಳಿಸಿದ ಖನಿಜ ಅಂಶಗಳು ಮಣ್ಣಿನ ಮೇಲಿನ ಮೇಲ್ಮೈಯಲ್ಲಿ ಇರುವುದಿಲ್ಲ, ಅದಕ್ಕಾಗಿಯೇ ಬೆಳೆಗಳು ರೋಗಗಳಿಂದ ಬಳಲುತ್ತಿವೆ. ಖನಿಜ ಅಂಶಗಳ ಕೊರತೆಯಿಂದಾಗಿ ಬೆಳೆ ಇಳುವರಿಯೂ ಕಡಿಮೆಯಾಗುತ್ತದೆ.
  7.  ಬೆಳೆಯಲ್ಲಿ ಬೋರಾನ್ ಮತ್ತು ಕ್ಯಾಲ್ಸಿಯಂ ಇಲ್ಲದಿದ್ದರೆ, ಹೊಸ ಮೊಗ್ಗುಗಳು ಮತ್ತು ಹೂವುಗಳು ಕಾಣಿಸಿಕೊಳ್ಳುವುದಿಲ್ಲ ಮತ್ತು ಹಣ್ಣುಗಳು ಬಿರುಕು ಬಿಡುತ್ತವೆ.
  8. ಬೆಳೆಯಲ್ಲಿ ರಂಜಕ ವಿಲ್ಲದಿದ್ದರೆ ಎಲೆಗಳು ವಕ್ರವಾಗುತ್ತವೆ ಮತ್ತು ಬೆಳೆಯ ಎತ್ತರ ಹೆಚ್ಚಾಗುವುದಿಲ್ಲ.
  9. ಬೆಳೆಯಲ್ಲಿ ಪೊಟಾಸ್ ಇಲ್ಲದಿದ್ದರೆ ಬೆಳೆಯಲ್ಲಿ ಬೀಜಗಳು ಬರುವುದಿಲ್ಲ, ಕಡಿಮೆ ಹಣ್ಣುಗಳು ಉತ್ಪತ್ತಿಯಾಗುತ್ತವೆ ಮತ್ತು ಹಣ್ಣುಗಳು ಚಿಕ್ಕದಾಗಿ ಉಳಿಯುತ್ತವೆ.
  10. ಬೆಳೆಯಲ್ಲಿ ಜಿಂಕ್ ಸಲ್ಫರ್ ಇಲ್ಲದಿದ್ದರೆ ಹಣ್ಣುಗಳು ರುಚಿಯಾಗುವುದಿಲ್ಲ.

– ಅಂತರ್ಜಾಲ ಮಾಹಿತಿ

Advertisement

Advertisement

ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಭದ್ರ ಜಲಾಶಯದಿಂದ ತುಂಗಭದ್ರಾ ನದಿಗೆ 8 ಸಾವಿರ ಕ್ಯೂಸೆಕ್ ನೀರು | ನದಿಪಾತ್ರದ ಜನರಿಗೆ ಜಿಲ್ಲಾಡಳಿತ ಎಚ್ಚರಿಕೆ
April 1, 2025
9:38 PM
by: The Rural Mirror ಸುದ್ದಿಜಾಲ
ಮನ್ರೇಗಾ ಕೂಲಿ ದರ ದಿನಕ್ಕೆ 370 ರೂಪಾಯಿಗೆ ಏರಿಕೆ
April 1, 2025
9:28 PM
by: The Rural Mirror ಸುದ್ದಿಜಾಲ
ನಾಳೆಯಿಂದ ರಾಜ್ಯದ ಹಲವೆಡೆ ಮಳೆ | ಹವಾಮಾನ ಇಲಾಖೆ ಎಚ್ಚರಿಕೆ |
April 1, 2025
8:46 PM
by: The Rural Mirror ಸುದ್ದಿಜಾಲ
15 ದಶಲಕ್ಷ ಮಹಿಳೆಯರಿಗೆ ಸ್ತನ ಕ್ಯಾನ್ಸರ್ ತಪಾಸಣೆ | 200 ಡೇ-ಕೇರ್ ಕ್ಯಾನ್ಸರ್ ಕೇಂದ್ರ ಸ್ಥಾಪನೆ
April 1, 2025
8:20 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror

Join Our Group