ಭಾರತದಲ್ಲಿ ವ್ಯವಸಾಯ ಪದ್ಧತಿಯು ಪ್ರಾಚೀನ ಕಾಲದಿಂದಲೂ ರೂಢಿಯಲ್ಲಿರುವ ಮಾನವನ ಪುರಾತನ ವೃತ್ತಿ ಮತ್ತು ಪ್ರಮುಖ ಪ್ರಾಥಮಿಕ ಚಟುವಟಿಕೆಯಾಗಿದೆ. ಭಾರತವು ಕೃಷಿ ಪ್ರಧಾನ ರಾಷ್ಟ್ರವಾಗಿದೆ. ಈ ಕೆಳಗಿನ ಅಂಶಗಳಿಂದ ವ್ಯವಸಾಯದ ಮಹತ್ವಗಳು ಮತ್ತು ಅವುಗಳ ಪ್ರಭಾವಗಳನ್ನು ಕಾಣಬಹುದು. ಭಾರತದಲ್ಲಿ ಕೃಷಿಯು ಜನರ ಪ್ರಮುಖ ವೃತ್ತಿಯಾಗಿದೆ. ಸುಮಾರು ಶೇ. 70 ಕ್ಕೂ ಹೆಚ್ಚು ಜನರು ತಮ್ಮ ಜೀವನೋಪಾಯಕ್ಕಾಗಿ ಪ್ರತ್ಯೇಕ್ಷವಾಗಿ ಮತ್ತು ಪರೋಕ್ಷವಾಗಿ ವ್ಯವಸಾಯವನ್ನೇ ಅವಲಂಬಿಸಿದ್ದಾರೆ.
ವ್ಯವಸಾಯವು ಜನರಿಗೆ ಅಗತ್ಯವಾದ ಆಹಾರ ಧಾನ್ಯಗಳು, ಹಣ್ಣು, ತರಕಾರಿ, ಸಾಂಬಾರು ಪಾದಾರ್ಧ ಹಾಗೂ ಸಾಕು ಪ್ರಾಣಿಗಳಿಗೆ ಮೇವನ್ನು ಪೂರೈಸುವುದು. ಉದ್ಯೋಗವನ್ನು ಒದಗಿಸುವಲ್ಲಿ ಕೃಷಿಯು ಒಂದು ದೊಡ್ಡ ಉದ್ಯಮವಾಗಿದ್ದು ಹೆಚ್ಚು ಉದ್ಯೋಗಾವಕಾಶವನ್ನು ಕಲ್ಪಿಸುತ್ತದೆ. ರಾಷ್ಟ್ರೀಯ ಆದಾಯದ ಮೇಲೆ ಕೃಷಿಯು ಮಹತ್ವದ ಪಾತ್ರ ವಹಿಸುತ್ತದೆ. ಕೃಷಿಯು ಅನೇಕ ಕೈಗಾರಿಕೆಗಳಿಗೆ ಕಚ್ಚಾ ವಸ್ತುಗಳನ್ನು ಪೂರೈಸುತ್ತದೆ. ಅಂತಹ ಕೈಗಾರಿಕೆಗಳಿಗೆ ಕೃಷಿ ಆಧಾರಿತ ಕೈಗಾರಿಕೆಗಳುಎನ್ನುವರು. ಹತ್ತಿ, ಸಕ್ಕರೆ, ಸೆಣಬಿನ ಕೈಗಾರಿಕೆ ಮುಂತಾದವು. ಭಾರತದಲ್ಲಿ ಅನೇಕ ವ್ಯವಸಾಯ ಉತ್ಪನ್ನಗಳನ್ನು ಉತ್ಪಾದಿಸಲಾಗುತ್ತಿದೆ. ಅವುಗಳಲ್ಲಿ ಕೆಲವನ್ನು ರಫ್ತು ಮಾಡಲಾಗುತ್ತಿದೆ. ಅವು ಚಹಾ, ಕಾಫಿ, ಸೆಣಬು, ಹೊಗೆಸೊಪ್ಪು, ಸಕ್ಕರೆ, ಸಾಂಬಾರ ಪಾದಾರ್ಥ ಮುಂತಾದವು.
ರಾಜ್ಯ ಮತ್ತು ಕೇಂದ್ರ ಸರ್ಕಾರಗಳಿಗೆ ಅತಿ ಹೆಚ್ಚು ಪ್ರಮಾಣದ ಕಂದಾಯವನ್ನು ವ್ಯವಸಾಯವು ಒದಗಿಸುತ್ತದೆ. ಆದರೆ, ಭಾರತದ ವ್ಯವಸಾಯವು ಹೆಚ್ಚಾಗಿ ಮ್ಯಾನ್ಸನ್ ಮಳೆಯನ್ನು ಅವಲಂಬಿಸಿದೆ. ಹೀಗಾಗಿ ” ಭಾರತದ ಬಜೆಟ್ ಮುಂಗಾರಿನ ಜೊತೆ ಜೂಜಾಟ” ವಾಗಿ ಪರಿಗಣಿಸಿದೆ. ಸಾರಿಗೆ ಮತ್ತು ಸಂಪರ್ಕ, ಬ್ಯಾಂಕು, ವಿಮೆ, ಮುಂತಾದವುಗಳ ಅಭಿವೃದ್ಧಿಗೆ ವ್ಯವಸಾಯವು ಹೆಚ್ಚು ಸಹಾಯಕವಾಗಿರುವುದು. ಭಾರತದಲ್ಲಿ ವ್ಯವಸಾಯ ಉತ್ಪನ್ನವು ಒಂದು ಪ್ರದೇಶದಿಂದ ಇನ್ನೊಂದಕ್ಕೆ ವ್ಯತ್ಯಾಸವಾಗಿರುತ್ತದೆ. ಹೆಚ್ಚು ಉತ್ಪಾದಿಸುವ ಪ್ರದೇಶಗಳಿಂದ ಕೊರತೆ ಇರುವ ಪ್ರದೇಶಗಳಿಗೆ ವ್ಯವಸಾಯ ಉತ್ಪನ್ನಗಳನ್ನು ಆಂತರಿಕ ವ್ಯಾಪಾರದ ಮೂಲಕ ಸರಬರಾಜು ಮಾಡಲಾಗುತ್ತದೆ. ಉದಾ – ಹತ್ತಿ, ಸೆಣಬು, ಚಹಾ, ಕಾಫಿ ಮುಂತಾದವು. ದೇಶದ ರಾಜಕೀಯ ಮತ್ತು ಸಾಮಾಜಿಕ ಪರಿಸ್ಥಿತಿಯು ಹೆಚ್ಚಾಗಿ ಉತ್ಪಾದಕರು ಹಾಗೂ ಕೃಷಿಕರಿಂದ ನಿರ್ಧರಿಸಲ್ಪಡುವುದು.
ವ್ಯವಸಾಯ ಮಾಡುವಾಗ ವಹಿಸಬೇಕಾದ ಕ್ರಮಗಳು:
– ಅಂತರ್ಜಾಲ ಮಾಹಿತಿ
ದೇಶದಲ್ಲಿ ಇಂಗಾಲದ ಹೊರಸೂಸುವಿಕೆಯನ್ನು ಕಡಿಮೆ ಮಾಡಲು ಮತ್ತು ರಾಷ್ಟ್ರೀಯ ಹೆದ್ದಾರಿಗಳನ್ನು ಹೆಚ್ಚು ಪರಿಸರ…
ಗ್ರಾಮೀಣ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ಒದಗಿಸಲು ಪ್ರತಿ ಗ್ರಾಮ ಪಂಚಾಯಿತಿಯಲ್ಲಿ ಆಧುನಿಕ ಮೂಲಭೂತ…
ದಾವಣಗೆರೆ ನಗರ ಸೇರಿದಂತೆ ಜಿಲ್ಲಾದ್ಯಂತ ಏಕ ಬಳಕೆಯ ಪ್ಲಾಸ್ಟಿಕ್ ಬಳಕೆ ಮತ್ತು ಮಾರಾಟವನ್ನು…
ಇತ್ತೀಚಿನ ದಿನಗಳಲ್ಲಿ ಯುವಕರು ಹೃದಯಾಘಾತಕ್ಕೆ ಒಳಗಾಗುತ್ತಿರುವುದರಿಂದ ಜನರಲ್ಲಿ ಹೃದಯದ ವಿಷಯದಲ್ಲಿ ಭಯದ ವಾತಾವರಣ…
ಸುಳ್ಳು ಸುದ್ದಿ ಹರಡುವವರು ಮತ್ತು ಪ್ರಚೋದನಾಕಾರಿ ಭಾಷಣ ಮಾಡುವವರ ವಿರುದ್ದ ಸೂಕ್ತ ಕಾನೂನು…
ಬಾಹ್ಯಕಾಶದಲ್ಲಿ ಧಾರವಾಡದ ಕೃಷಿ ವಿಶ್ವವಿದ್ಯಾಲಯದ ಹೆಸರುಕಾಳು ಹಾಗೂ ಮೆಂತ್ಯ ಕಾಳುಗಳ ಮೊಳಕೆಯೊಡೆಯುವ ಪ್ರಯೋಗಗಳನ್ನು…