ಮೊದಲೆಲ್ಲ ಪ್ರತಿಯೊಂದು ಮನೆಯಲ್ಲೂ ಪೇರಳೆ ಮರ ಇರುತ್ತಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಹೆಚ್ಚಿನವರು ಮಾರುಕಟ್ಟೆಯಿಂದ ಎಲ್ಲವನ್ನೂ ತರುತ್ತಾರೆ. ಆದರಲ್ಲೂ ಬಾಳೆಎಲೆ ಸಹ ಈಗ ಮಾರುಕಟ್ಟೆಯಲ್ಲೇ ಸಿಗುತ್ತದೆ. ಆತರ ಕಾಲ ಬದಲಾವಣೆ ಹೊಂದಿದೆ. ಈಗ ಮಾರುಕಟ್ಟೆಯಲ್ಲಿ ಪೇರಳೆ ಹಣ್ಣಿನದೇ ಕಾರುಬಾರು ಅಂದರೆ ತಪ್ಪಾಗಲಾರದು.
ಈ ಪೇರಳೆ ಹಣ್ಣು ಹೊರಗೆ ಸುಂದರವಾಗಿ ಕಾಣುವ ಪ್ರತಿಯೊಂದು ಹಣ್ಣು ಒಳಗೆ ಸಿಹಿಯಾಗಿರುವುದಿಲ್ಲ. ಕೆಲವು ಹೊರಗೆ ಸಿಹಿಯಾಗಿರುವಂತೆ ಕಂಡರೂ ಆದರೆ ಒಳಗೆ ಹುಳಿಯಾಗಿರುತ್ತದೆ. ಹೀಗಾಗಿ ಉತ್ತಮ ಸಿಹಿಯಾದ ಪೇರಳೆ ಹಣ್ಣುಗಳನ್ನು ಆಯ್ಕೆ ಮಾಡಲು ಕೆಲವೊಂದು ಟಿಪ್ಸ್ ಗಳು ಇಲ್ಲಿದೆ:
- ಸಿಪ್ಪೆಯ ಲಕ್ಷಣಗಳು: ಉತ್ತಮ ಪೇರಳೆಯೂ ನಯವಾದ, ಹೊಳೆಯುವ ಸಿಪ್ಪೆನ್ನು ಹೊಂಇರಬೇಕು. ಹಣ್ಣಿನ ಮೇಲೆ ಅನೇಕ ಕಪ್ಪು ಕಲೆಗಳು, ಸುಕ್ಕುಗಳ ಇಲ್ಲದೆ ಇರುವುದನ್ನು ಗಮನಿಸಬೇಕು.
- ಕೈಯಲ್ಲಿ ಹಿಡಿದು ಪರೀಕ್ಷಿಸುವುದು: ಹಣ್ಣು ತುಂಬ ಮೃದುವಾಗಿದ್ದರೆ, ವಾಸನೆ ಬರುತ್ತಿದ್ದರೆ ಅದು ಕೊಳೆತು ಹೋಗಿದೆ. ಒಂದು ವೇಳೆ ನೀವು ಕೈಯಲ್ಲಿ ಒತ್ತಿದ ಸ್ವಲ್ಪ ಸಮಯದ ನಂತರ ಮೃದುವಾದ ಅನುಭ ನೀಡಿದರೆ ಅದು ಸಿಹಿ ಮತ್ತು ರುಚಿಕರವಾದ ಪೇರಳೆಯಾಗಿದೆ.
- ತೂಕ ಮತ್ತು ಗಾತ್ರ: ಉತ್ತಮವಾದ ಪೇರಳೆಯು ಸಾಮಾನ್ಯವಾಗಿ ಅದರ ಗಾತ್ರಕ್ಕೆ ಸೂಕ್ತವಾದ ತೂಕವನ್ನು ಹೊಂದಿರುತ್ತದೆ. ಒಂದೇ ಗಾತ್ರದ ಎರಡು ಹಣ್ಣುಗಳನ್ನು ಹೋಲಿಸಿದಾಗ, ಭಾರವಾದದ್ದು ಹೆಚ್ಚು ತಿರುಳು ಮತ್ತು ರಸವನ್ನು ಹೊಂದಿರುತ್ತದೆ ಮತ್ತು ಸಿಹಿಯಾಗಿರುತ್ತದೆ. ಹಗುರವಾದ ಹಣ್ಣುಗಳು ಒಳಗೆ ಒಣಗಬಹುದು ಅಥವಾ ಹೆಚ್ಚು ಬೀಜಗಳನ್ನು ಹೊಂದಿರಬಹುದು ಮತ್ತು ಅಷ್ಟು ರುಚಿಯಾಗಿಲ್ಲದೇ ಇರಬಹುದು.
- ಸಿಹಿ ಪರಿಮಳ: ಒಳ್ಳೆ ಪೇರಳೆಯೂ ಸಿಹಿ ಪರಿಮಳವನ್ನು ನೀಡುತ್ತದೆ. ವಾಸನೆ ಬರುತ್ತಿದ್ದರೆ ಅದು ಕೆಟ್ಟಿದೆ ಎಂದು ತಿಳಿದು ಕೊಳ್ಳಿ.
- ಬಣ್ಣದಿಂದ ಗುರುತಿಸುವಿಕೆ: ಪೇರಳೆ ಹಣ್ಣು ತೂಂಬಾ ಕಡು ಹಸಿರು ಬಣ್ಣದ್ದಾಗಿದ್ದರೆ, ಅದು ಇನ್ನೂ ಕಾಯಿ ಆಗಿದೆ ಎಂದರ್ಥ. ಅವು ಗಟ್ಟಿಯಾಗಿರುತ್ತದೆ. ಮತ್ತು ತಿನ್ನಲು ಸ್ವಲ್ಪ ಕುರುಕಲು ಆಗಿರುತ್ತದೆ. ಹಣ್ಣು ಸಿಹಿಯಾಗಿರಲು ತಿಳಿ ಹಸಿರು ಅಥವಾ ಸ್ವಲ್ಪ ಹಳದಿ ಬಣ್ಣಕ್ಕೆ ತಿರುಗಲೇಬೇಕು. ಇದು ಸರಿಯಾದ ಪಕ್ವತೆಯ ಸಂಕೇತವಾಗಿದೆ.
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel
Advertisement

