Advertisement
ವಿಶೇಷ ವರದಿಗಳು

ಪರಿಸರ ಸ್ವಚ್ಛತೆಗೆ ಇಳಿದ ಯುವಕರ ತಂಡ | ಕಾಡಿನ ರಸ್ತೆಯಲ್ಲಿ 2 ಲೋಡ್‌ ತ್ಯಾಜ್ಯ…! | ಕಾಡಿನಲ್ಲಿ ಸಿಸಿಟಿವಿ ಅಳವಡಿಕೆ |

Share

ಯುವಕರ ತಂಡವೊಂದು ಪರಿಸರ ಸ್ವಚ್ಛತಾ ಕಾರ್ಯಕ್ರಮ ಹಮ್ಮಿಕೊಂಡಿತು. ಅವರು ಆಯ್ಕೆ ಮಾಡಿಕೊಂಡಿರುವ ದಾರಿ ಕಾಡಿನ ರಸ್ತೆ. ಉದ್ದೇಶ, ಕಾಡು-ಪರಿಸರ ಸಂರಕ್ಷಣೆ, ಸ್ವಚ್ಛತೆ. ಹೀಗೆ ಇಳಿದ ಯುವಕರಿಗೆ ದೊರೆತದ್ದು 2 ಲೋಡ್‌ ಪಿಕ್‌ಅಪ್‌ನಲ್ಲಿ ತುಂಬುವಷ್ಟು ತ್ಯಾಜ್ಯ. ಅಂದರೆ ಕಾಡಿನಲ್ಲಿ ಜನರು ಎಸೆದಿರುವ ತ್ಯಾಜ್ಯ ಇಷ್ಟೇ ಇಲ್ಲ..! ಇನ್ನೂ ಇದೆ. ಇದು ಒಂದು ದಿನ ಕೆಲಸ ಮಾತ್ರಾ. …..ಮುಂದೆ ಓದಿ….

ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ಸೇರಿದಂತೆ ಆಸುಪಾಸಿನ ತಾಲೂಕುಗಳು ಮಲೆನಾಡಿನಿಂದ ಕೂಡಿದೆ. ಕಾಡಿನ ನಡುವೆ ಬಹುಪಾಲು ರಸ್ತೆಗಳು ಇದೆ. ಬುದ್ದಿವಂತ ಜನರು ಇದೇ ಕಾಡಿನಲ್ಲಿ ಕಸ ಎಸೆದು ಹೋಗುವುದು ಈಚೆಗೆ ಹೆಚ್ಚಾಗಿದೆ. ಬಾಟಲಿಗಳು, ಪ್ಲಾಸ್ಟಿಕ್‌ ಗಳು, ಸಿಮೆಂಟ್‌ ತ್ಯಾಜ್ಯಗಳನ್ನು ಕಾಡಿನ ರಸ್ತೆ ಬದಿ ಎಸೆದು ಹೋಗುವುದು ಕಂಡುಬರುತ್ತಿದೆ. ಈ ಬಗ್ಗೆ ಎಚ್ಚರಿಸಿದರೂ ಮತ್ತೆ ಕಾಡಿನಲ್ಲಿ ಕಸದ ರಾಶಿ ಕಂಡುಬರುತ್ತದೆ. ಇದಕ್ಕಾಗಿ ಯುವಕರ ತಂಡವೊಂದು ಜಾಗೃತವಾಗಿದೆ.

ಸುಳ್ಯದ ಗುತ್ತಿಗಾರು ಗ್ರಾಮದ ಕಮಿಲದ ಬಾಂಧವ್ಯ ಗೆಳೆಯರ ಬಳಗವು ಭಾನುವಾರ ಬಳ್ಪ-ಕಮಿಲ ರಸ್ತೆಯ ಸುಮಾರು 2 ಕಿಮೀ ಕಾಡಿನ ನಡುವೆ ಹಾದು ಹೋಗುವ ರಸ್ತೆಯ ಇಕ್ಕೆಲೆಗಳಲ್ಲಿ ಸ್ವಚ್ಛತೆಯನ್ನು ಮಾಡಿದರು. ಅದರ ಜೊತೆಗೇ ಜಾಗೃತಿ ಫಲಕಗಳನ್ನು ಅಳವಡಿಕೆ ಮಾಡಿದರು. ಅರಣ್ಯ ಇಲಾಖೆ ಕೂಡಾ ಸಹಯೋಗ ನೀಡಿ ಸಿಸಿಟಿವಿ ಅಳವಡಿಕೆ ಮಾಡಿ ಕಸ ಎಸೆಯುವವರ ಪತ್ತೆ ಮಾಡುವ ಹಂತಕ್ಕೂ ಈ ಕೆಲಸ ಬಂದಿದೆ. ಇಲಾಖೆಯೂ ಬಹಳ ಆಸಕ್ತಿಯಿಂದ ಯುವಕರ ತಂಡಕ್ಕೆ ಸಹಕಾರ ನೀಡಿದೆ. ಮುಂದೆ ಯುವಕರ ತಂಡವು ಕಾಡಿನ ದಾರಿಯಲ್ಲಿ ವೀಕ್ಷಣೆ ಮಾಡುತ್ತದೆ, ತ್ಯಾಜ್ಯ ಎಸೆಯುವವರನ್ನು ಸಿಸಿಟಿವಿಯಲ್ಲಿ ಮಾತ್ರವೇ ಅಲ್ಲ‌, ಯಾರೇ ಆಗಲಿ ಕಸ ಎಸೆಯುವವರನ್ನು ಕಂಡರೆ ತಕ್ಷಣವೇ ಫೋಟೋ ಸಹಿತ ಇಲಾಖೆಗಳಿಗೆ ಮಾಹಿತಿ ನೀಡುವ ಬಗ್ಗೆಯೂ ಯುವಕರು ನಿರ್ಧರಿಸಿದ್ದಾರೆ.…..ಮುಂದೆ ಓದಿ….

Advertisement

ಇದರ ಜೊತೆಗೆ ಕಾಡಿನ ರಸ್ತೆಯ ಬದಿಯಲ್ಲಿ ವಿಷಪೂರಿತ ಹಾವುಗಳನ್ನೂ ಬಿಡದಂತೆ ಮನವಿಯನ್ನೂ ಮಾಡಿದ್ದರು ಯುವಕರು, ಇದಕ್ಕಾಗಿ ಈಗ ಫಲಕವೂ ಇದೇ ವೇಳೆ ಅಳವಡಿಕೆ ಮಾಡಲಾಯಿತು. ರಸ್ತೆ ಬದಿ ತ್ಯಾಜ್ಯ ಎಸೆದರೆ ಅದು ನೀರಿಗೆ ಸೇರಿ ಅದೇ ನೀರನ್ನು ಸ್ಥಳೀಯರು ಕುಡಿಯಬೇಕಾದ ಪರಿಸ್ಥಿತಿ ಇರುತ್ತದೆ. ಅಷ್ಟೇ ಅಲ್ಲ ಕಾಡುಪ್ರಾಣಿಗಳೂ ಈ ಪ್ಲಾಸ್ಟಿಕ್‌ಗಳನ್ನು ತಿಂದು ಸಂಕಷ್ಟ ಉಂಟಾಗುವ ಸಾಧ್ಯತೆಯೂ ಇದೆ. ಈ ಎಲ್ಲಾ ಕಾರಣಗಳಿಂದ ಯುವಕರ ತಂಡವು ಮಾದರಿ ಕಾರ್ಯ ಮಾಡಿದೆ.…..ಮುಂದೆ ಓದಿ….

ಕಾಡಿನ ದಾರಿಯಲ್ಲಿ ಎಲ್ಲೆಂದರಲ್ಲಿ ಕಸ ಎಸೆದು ಹೋಗುತ್ತಾರೆ. ಅದರ ಜೊತೆಗೆ ವಿಷಪೂರಿತ ಹಾವುಗಳನ್ನು ರಸ್ತೆ ಬದಿಯೇ ಬಿಟ್ಟು ಹೋಗುತ್ತಾರೆ. ಇಂತಹ ಕೆಲಸಗಳು ನಡೆಯಬಾರದು. ಪರಿಸರ ಸ್ವಚ್ಛತೆಯ ಕಾರ್ಯವನ್ನು ಮಾಡಿದ್ದೇವೆ. ಮುಂದೆ ಈ ಪ್ರದೇಶದಲ್ಲಿ ನಮ್ಮ ಯುವಕರೂ ತ್ಯಾಜ್ಯ ಎಸೆಯುವುದರ ಬಗ್ಗೆ ಗಮನಿಸುತ್ತಾರೆ ಎಂದು ಹೇಳುತ್ತಾರೆ ಬಾಂಧವ್ಯ ಗೆಳೆಯರ ಬಳಗದ ಅಧ್ಯಕ್ಷ ತುಂಗನಾಥ ಕಾಯನಕೋಡಿ.

ಕಾಡು ಉಳಿಯಬೇಕು, ಪರಿಸರ ಸೌಂದರ್ಯ ಆಸ್ವಾದಿಸಬೇಕು ಎಂದು ಬಯಸುವ ಎಲ್ಲರೂ ಕಮಿಲದ ಬಾಂಧವ್ಯ ಗೆಳೆಯರ ಬಳಗದ ಕಾರ್ಯವನ್ನು ಶ್ಲಾಘಿಸಿದ್ದಾರೆ. ಇದೇ ಮಾದರಿ ಎಲ್ಲಾ ಕಡೆಯೂ ಕಾಡು ರಸ್ತೆಯಲ್ಲಿ ತ್ಯಾಜ್ಯ ಎಸೆಯದಂತೆ ಯುವಕರ ತಂಡವು ಎಚ್ಚರಿಸಿ ವಹಿಸಿ ಜಾಗೃತಿ ಮೂಡಿಸುವ ಕೆಲಸ ನಡೆಸಬೇಕಿದೆ. ಈ ಮೂಲಕವೂ ಪರಿಸರ ಪ್ರೀತಿಯನ್ನು, ಪರಿಸರ ಉಳಿವನ್ನು ಮಾಡಲು ಸಾಧ್ಯವಿದೆ.…..ಮುಂದೆ ಓದಿ….

ಈ ಸಂದರ್ಭ ಪ್ರಮುಖರಾದ ತಾಪಂ ಮಾಜಿ ಸದಸ್ಯ ಅಶೋಕ್‌ ನೆಕ್ರಾಜೆ, ಗ್ರಾಪಂ ಸದಸ್ಯರುಗಳಾದ ಲತಾ ಆಜಡ್ಕ, ಭರತ್ ಕಮಿಲ, ಗುತ್ತಿಗಾರು ಪ್ರಾಥಮಿಕ ಸಹಕಾರಿ ಸಂಘದ ನಿರ್ದೇಶಕ ಜಯಪ್ರಕಾಶ್‌ ಮೊಗ್ರ, ಪ್ರಮುಖರಾದ ರಾಧಾಕೃಷ್ಣ ತುಪ್ಪದಮನೆ, ಅರಣ್ಯ ಇಲಾಖೆಯ ಅಧಿಕಾರಿಗಳು ಹಾಗೂ ಸಿಬಂದಿಗಳಾದ ಸಂತೋಷ್‌ , ಧರ್ಣಪ್ಪ, ಭರಮಪ್ಪ, ಧನಂಜಯ , ಗಣೇಶ್‌ ಹೆಗ್ಡೆ  ಇದ್ದರು.  ಬಾಂಧವ್ಯ ಗೆಳೆಯರ ಬಳಗದ ಅಧ್ಯಕ್ಷ ತುಂಗನಾಥ ಕಾಯನಕೋಡಿ, ಕಾರ್ಯದರ್ಶಿ ಹರ್ಷಿತ್‌ ಕಾಂತಿಲ, ಸದಸ್ಯರುಗಳಾದ ಚೇತನ್‌ ಕಾಂತಿಲ, ಪವನ್‌ ಕಾಂತಿಲ, ನಿತ್ಯಾನಂದ  ಅಂಬೆಕಲ್ಲು ಕಮಿಲ, ವಿನಯಚಂದ್ರ ಕಾಂತಿಲ, ಉದಯಕುಮಾರ್‌ ಕಾಂತಿಲ, ಭರತ್‌ ಕಾಂತಿಲ, ಕುಸುಮಾಧರ ಕಾಂತಿಲ, ತನ್ವಿತ್‌ , ನಿರಂಜನ ಕಾಂತಿಲ, ಪ್ರಣಾಮ್‌, ಜಯಪ್ರಕಾಶ್‌ ಕಾಂತಿಲ, ವೆಂಕಟ್ರಮಣ ಮೊದಲಾದವರಿದ್ದರು.

Advertisement

A group of young people Bhandavya Geleyara Balaga in Kamila, Sullia, have taken it upon themselves to raise awareness and issue warnings about littering along the forest road. The Forest Department has supported their efforts. This task serves as a great example of the positive impact that can be made by taking action. Let’s work together to keep our environment clean and beautiful. Let’s make these types of activities a regular occurrence in every community. Let’s inspire others to join us in this important mission. Together, we can make a difference.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಅಡಿಕೆ ಸಿಂಗಾರ ಒಣಗುತ್ತಿದೆಯೇ..? ನಿಮ್ಮ ತೋಟದ ಶತ್ರು ನೀವು ಬಳಸುವ ಬೇವಿನ ಎಣ್ಣೆಯೇ ಇರಬಹುದು…!

ಅಡಿಕೆ ತೋಟಗಳಲ್ಲಿ ಹೂಗೊಂಚಲುಗಳು ಅರಳಿದರೂ ಕಾಯಿ ಕಟ್ಟದಿರುವುದಕ್ಕೆ ರೈತರು ಬಳಸುವ ಬೇವಿನ ಎಣ್ಣೆಯೇ…

3 hours ago

ಕಳಪೆ ಅಡಿಕೆ ಪತ್ತೆ | 15.5 ಲಕ್ಷ ದಂಡ ವಿಧಿಸಿದ ನ್ಯಾಯಾಲಯ

ಕಳಪೆ ಗುಣಮಟ್ಟದ ಅಡಿಕೆ ಸಾಗಣೆ ಪ್ರಕರಣ ಪತ್ತೆಯಾಗಿದ್ದು, ಆಹಾರ ಸುರಕ್ಷತೆ ಮತ್ತು ಮಾನದಂಡಗಳ…

3 hours ago

ತೆಂಗಿನಕಾಯಿಯಿಂದ Gen-Z ಫೇವರಿಟ್ ಫುಡ್‌…! ವೆಗನ್ ಕುಲ್ಫಿ ಮತ್ತು ಚಾಕೊಲೇಟ್ ಬಿಡುಗಡೆ

ಕಾಸರಗೋಡು CPCRI ತನ್ನ 110ನೇ ಸಂಸ್ಥಾಪನಾ ದಿನಾಚರಣೆಯ ಅಂಗವಾಗಿ ಜನರೇಷನ್‌ Z ಗಾಗಿ…

12 hours ago

ತೆಂಗು ರೈತರಿಗೆ ಹೊಸ ದಾರಿ | ಮೌಲ್ಯವರ್ಧನೆ ಮತ್ತು ಬಹುಬೆಳೆ ಪದ್ಧತಿಗೆ ಉತ್ತೇಜನ

ಮಹಿಳಾ ಉದ್ಯಮಶೀಲತೆ, ತೆಂಗು ಮೌಲ್ಯವರ್ಧನೆ ಹಾಗೂ ರೈತರ ಆದಾಯ ವೃದ್ಧಿಯಲ್ಲಿ ತೆಂಗು ಅಭಿವೃದ್ಧಿ…

12 hours ago

ತೆಂಗಿನಕಾಯಿ ಬೆಲೆ ಏಕೆ ಇಳಿಯುತ್ತಿದೆ? ರೈತರಿಗೆ ಮುಂದೇನು?

ತೆಂಗಿನಕಾಯಿ ಬೆಲೆ ಇಳಿಕೆ ಆತಂಕ ಹೆಚ್ಚಾಗಿದೆ. ಉತ್ಪಾದನೆ ಏರಿಕೆ ನಡುವೆಯೇ ರಫ್ತು ಮತ್ತು…

12 hours ago

ಡಿಜಿಟಲ್ ಕೃಷಿ, ಹವಾಮಾನ ಸಹಿಷ್ಣು ಬೆಳೆಗಳಿಗೆ ಬೆಂಬಲ -ಕೃಷಿ ಸಚಿವರಿಂದ ಸಭೆ

ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಸಚಿವ ಶಿವರಾಜ್‌ ಸಿಂಗ್‌ ಚೌಹಾನ್‌ ಅವರು…

13 hours ago