ಪರಿಸರ ಕಾಳಜಿ | ಕೃಷಿಯಲ್ಲಿ ಪ್ಲಾಸ್ಟಿಕ್ ಗ್ರೋ ಬ್ಯಾಗ್ ಬೇಡ ಎಂದ ಕೇರಳ ಕೃಷಿ ಇಲಾಖೆ |

October 6, 2022
7:02 PM

ದೇಶದಾದ್ಯಂತ ಪರಿಸರ ಕಾಳಜಿಯ ಕಡೆಗೆ ಹೆಚ್ಚು ಗಮನ ಹರಿಸಲಾಗುತ್ತಿದೆ. ಎಲ್ಲೆಡೆಯೂ ಪ್ಲಾಸ್ಟಿಕ್‌ ತುಂಬಿಕೊಳ್ಳುತ್ತಿದೆ. ಒಂದೇ ಬಾರಿ ಬಳಕೆ ಮಾಡುವ ಪ್ಲಾಸ್ಟಿಕ್‌ ನಿಷೇಧವಾದರೂ ಅಲ್ಲಲ್ಲಿ ಕಾಣುತ್ತಿದೆ. ಕೃಷಿಯಲ್ಲೂ ಹಲವು ಸಂದರ್ಭ ಪ್ಲಾಸ್ಟಿಕ್‌ ಬಳಕೆಯಾಗುತ್ತದೆ. ಇದೀಗ ಕೇರಳದ ಕೃಷಿ ಇಲಾಖೆ ಕೃಷಿಯಲ್ಲಿ ಪ್ಲಾಸ್ಟಿಕ್‌ ಗ್ರೋಬ್ಯಾಗ್‌ ಬಳಕೆ ಬೇಡ ಎಂದು ಹೇಳಿದೆ. ಜೈವಿಕವಾದ ಗ್ರೋಬ್ಯಾಗ್‌ ಬಳಕೆಗೆ ಆದ್ಯತೆ ನೀಡಲು ಕೃಷಿಕರನ್ನು ಪ್ರೇರೇಪಿಸಿದೆ.

ಕೃಷಿಯಲ್ಲಿ ಪ್ಲಾಸ್ಟಿಕ್ ಗ್ರೋ ಬ್ಯಾಗ್ ಬೇಡ ಎಂದು ಹೇಳಿದ ಕೇರಳ ಕೃಷಿ ಇಲಾಖೆ ತನ್ನ ಯೋಜನೆಗಳಿಗಾಗಿ ಇಲಾಖೆಯು ಪ್ಲಾಸ್ಟಿಕ್ ಚೀಲಗಳ ಬದಲಾಗಿ ಪರಿಸರ ಸ್ನೇಹಿ ಪರ್ಯಾಯಗಳಾದ ಜೇಡಿಮಣ್ಣು ಅಥವಾ ತೆಂಗಿನಕಾಯಿಯ ಮಡಿಕೆಗಳು ಮತ್ತು ಮರುಬಳಕೆ ಮಾಡಬಹುದಾದ ಹೆಚ್ಚಿನ ಸಾಂದ್ರತೆಯ ಪಾಲಿಥಿಲೀನ್ ಪಾತ್ರೆಗಳೊಂದಿಗೆ ಬದಲಾಯಿಸಲು ಸಿದ್ಧತೆ ನಡೆಸಿದೆ.  ಪರಿಸರ ಸ್ನೇಹಿ ಮಾರ್ಗವನ್ನು ತುಳಿಯುತ್ತಿರುವ ಕೇರಳದ ಕೃಷಿ ಇಲಾಖೆಯು ರಾಜ್ಯದಾದ್ಯಂತ ತರಕಾರಿ ತೋಟಗಳು ಮತ್ತು ಮೇಲ್ಛಾವಣಿ ಫಾರ್ಮ್‌ಗಳಲ್ಲಿ  ಪ್ಲಾಸ್ಟಿಕ್ ಗ್ರೋ ಬ್ಯಾಗ್‌ಗಳನ್ನು ಬಳಸುವುದನ್ನು ನಿಲ್ಲಿಸಲು ನಿರ್ಧರಿಸಿದೆ. ಸರ್ಕಾರವೇ ಈ ಮಾದರಿಗಳನ್ನು ಮಾಡಿ ಜನರನ್ನು ಪ್ರೇರೇಪಿಸುತ್ತಿದೆ.

ಜೈವಿಕವಲ್ಲದ ಚೀಲಗಳನ್ನು ಕೃಷಿ ಉದ್ದೇಶಗಳಿಗಾಗಿ ಬಳಸುವುದರಿಂದ ಪರಿಸರಕ್ಕೆ ಗಮನಾರ್ಹ ಹಾನಿ ಉಂಟಾಗುತ್ತದೆ ಮತ್ತು ಅವುಗಳ ಬಳಕೆಯನ್ನುಕಡಿಮೆ ಮಾಡಬೇಕು ಎಂದು ಇಲಾಖೆ ತನ್ನ ಕಚೇರಿಗಳಿಗೆ ಹೊರಡಿಸಿದ ಸುತ್ತೋಲೆಯಲ್ಲಿ ಉಲ್ಲೇಖಿಸಿದೆ. ಕೃಷಿ ಇಲಾಖೆ ಜಾರಿಗೆ ತಂದಿರುವ ಯೋಜನೆಗಳಲ್ಲಿ ಇನ್ನು ಮುಂದೆ ಪ್ಲಾಸ್ಟಿಕ್ ಗ್ರೋ ಬ್ಯಾಗ್‌ಗಳನ್ನು ಬಳಸಬಾರದು ಎಂದು ಸುತ್ತೋಲೆಯಲ್ಲಿ ಸೇರಿಸಿದೆ.

ಮನೆಯ ಮಟ್ಟದಲ್ಲಿ ತರಕಾರಿ ಕೃಷಿಯನ್ನು ಉತ್ತೇಜಿಸಲು ‘ಸುಭಿಕ್ಷಾ ಕೇರಳಂ’ ನಂತಹ ಆಹಾರ ಭದ್ರತಾ ಯೋಜನೆಗಳನ್ನು ಹೊರತಂದ ನಂತರ ರಾಜ್ಯಾದ್ಯಂತ ಗ್ರೋ ಬ್ಯಾಗ್‌ಗಳು ಹೆಚ್ಚು ಪರಿಚಯವಾಗಿತ್ತು.ಇದರಿಂದ ಕೃಷಿಯಲ್ಲೂ ಮತ್ತಷ್ಟು ಪ್ಲಾಸ್ಟಿಕ್‌ ತುಂಬುವ ಆತಂಕವಿತ್ತು. ಪರಿಸರ ಸ್ನೇಹಿ ವಿಧಾನಗಳ ಮೂಲಕ ಸುಸ್ಥಿರತೆ ಮತ್ತು ಆಹಾರ ಭದ್ರತೆಯನ್ನು ಇನ್ನಷ್ಟು ಗಟ್ಟಿಪಡಿಸಲು ಕೇರಳದ ಕೃಷಿ ಇಲಾಖೆ ಮಹತ್ವದ ಹೆಜ್ಜೆ ಇರಿಸಿದೆ.

 

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಹವಾಮಾನ ವರದಿ | 25.03.2026 | ಕರಾವಳಿಯಲ್ಲಿ ಇಂದು ಸಂಜೆ ಮಳೆ ಸಾಧ್ಯತೆ | ಏಪ್ರಿಲ್‌ 5ರವರೆಗೆ ಬೇಸಿಗೆ ಮಳೆ ಸಕ್ರಿಯ!
March 25, 2026
12:30 PM
by: ಸಾಯಿಶೇಖರ್ ಕರಿಕಳ
ಹವಾಮಾನ ವರದಿ | 24-03-2026 | ಕರ್ನಾಟಕದಲ್ಲಿ ಮತ್ತೆ ಮಳೆ ಅಲರ್ಟ್‌ | ಈ ದಿನದಿಂದ ಮಳೆ ವ್ಯಾಪ್ತಿ ಹೆಚ್ಚಳ ಸಾಧ್ಯತೆ..!
March 24, 2026
12:24 PM
by: ಸಾಯಿಶೇಖರ್ ಕರಿಕಳ
ರಾಜ್ಯದ ವಿಶ್ವವಿದ್ಯಾಲಯಗಳಲ್ಲಿ 4 ಸಾವಿರ ಹುದ್ದೆಗಳು ಖಾಲಿ – ಆರಂಭದಲ್ಲಿ 1 ಸಾವಿರ ಹುದ್ದೆಗಳ ಭರ್ತಿಗೆ ಕ್ರಮ
March 24, 2026
7:12 AM
by: ಮಿರರ್‌ ಡೆಸ್ಕ್
ಇನ್ಸ್ಪೈರ್ ಅವಾರ್ಡ್ ಗೆ ಅಜ್ಜಾವರ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳು ಆಯ್ಕೆ
March 23, 2026
10:18 PM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror