ಕೇರಳ ಮತ್ತು ಬೆಂಗಳೂರು ಖಾಸಗಿ ಬಸ್‌ಗಳ ದರ ಹೆಚ್ಚಳ

November 14, 2022
4:15 PM

ಕೇರಳ ಮತ್ತು ಬೆಂಗಳೂರು ಮಧ್ಯೆ ಸಂಚರಿಸುವ ಖಾಸಗಿ ಬಸ್‌ಗಳ ಪ್ರಯಾಣ ದರವನ್ನು ಹೆಚ್ಚಿಸಲಾಗಿದೆ. ಬೇರೆ ಬೇರೆ ಕ್ಲಾಸ್‌ನ ದರದಲ್ಲಿ ಕನಿಷ್ಠ 150 ರಿಂದ 250 ರೂ. ವರೆಗೂ ಟಿಕೆಟ್ ದರವನ್ನು ಏರಿಕೆ ಮಾಡಲಾಗಿದೆ.

ಎರ್ನಾಕುಲಂ-ಬೆಂಗಳೂರು ಜನಪ್ರಿಯ ಹಾಗೂ ಹೆಚ್ಚು ದಟ್ಟಣೆಯ ರೂಟ್ ಆಗಿದ್ದು, ಈ ಮಾರ್ಗವಾಗಿ ಪ್ರಯಾಣಿಸುವ ಪ್ರಯಾಣಿಕರಿಗೆ ಬಸ್ ದರ ದುಬಾರಿಯಾಗಿದೆ. 1350 ರೂ. ಇದ್ದ ದರವನ್ನು ಈಗ 1,500 ರೂ.ಗೆ ಏರಿಕೆ ಮಾಡಲಾಗಿದೆ. ಕರ್ನಾಟಕ ಅಂತಾರಾಜ್ಯ ಬಸ್ ನಿರ್ವಾಹಕರ ಸಂಘಟನೆಯು ಈ ದರವನ್ನು ಹೆಚ್ಚಿಸಿದೆ. ಕೇರಳ ಸರ್ಕಾರವು, ಕೇರಳ ಹೊರತಾಗಿ ನೋಂದಣಿ ಮಾಡಿಕೊಂಡಿರುವ ವಾಹನಗಳ ಮೇಲೆ ವೆಹಿಕಲ್ ಟ್ಯಾಕ್ಸ್ ಪರಿಚಯಿಸಿದೆ. ಈ ತೆರಿಗೆ ನವೆಂಬರ್ 1ರಿಂದ ಜಾರಿಗೆ ಬಂದಿದೆ.

ಎರ್ನಾಕುಲಂ-ಬೆಂಗಳೂರು ರೂಟ್‌ನಲ್ಲಿ ಓಡಾಡುವ ಬಹುತೇಕ ಬಸ್‌ಗಳು ಕೇರಳದ ಹೊರಗೆ ನೋಂದಣಿಯಾದ ಬಸ್‌ಗಳಿವೆ. ಕೇರಳದಲ್ಲಿ ನೋಂದಣಿ ದರ ಹೆಚ್ಚಿರುವುದಕ್ಕೆ ಇದಕ್ಕೆ ಕಾರಣ. ಈ ತೆರಿಗೆ ಭಾರವನ್ನು ಖಾಸಗಿ ಬಸ್ ನಿರ್ವಾಹಕರು ಇದೀಗ ಪ್ರಯಾಣಿಕರಿಗೆ ವರ್ಗಾಯಿಸಿದ್ದಾರೆ. ಹಾಗಾಗಿ, ಬಸ್ ದರ ಹೆಚ್ಚಿಸಿದ್ದಾರೆ. ಈ ಹೊಸ ತೆರಿಗೆ ಜಾರಿಗೆ ಬಂದ ಹಿನ್ನೆಲೆ ಬಸ್ ನಿರ್ವಾಹಕರು ಪ್ರತಿ ತ್ರೈಮಾಸಿಕವಾಗಿ, ಪ್ರತಿ ಸೀಟಿಗೆ 4 ಸಾವಿರ ರೂ. ತೆರಿಗೆಯನ್ನು ನೀಡಬೇಕಾಗುತ್ತದೆ. ಅಂದರೆ, 36 ಸೀಟ್‌ಗಳಿರುವ ಬಸ್‌ ಕನಿಷ್ಠ 1.44 ಲಕ್ಷ ರೂ. ತೆರಿಗೆಯನ್ನು ಪಾವತಿಸಬೇಕು.

ಈ ಕಾರಣಕ್ಕಾಗಿ ಬಸ್‌ಗಳ ನಡುವಿನ ದರ ವ್ಯತ್ಯಾಸದಿಂದ ಪ್ರಯಾಣಿಕರಿಗೆ ಗೊಂದಲವಾಗಬಾರದು ಎಂಬ ಕಾರಣಕ್ಕೆ ಏಕರೂಪ ಬಸ್ ದರವನ್ನು ರೂಪಿಸಲಾಗಿದೆ ಎಂದು ಕರ್ನಾಟಕ ಅಂತರ್ ರಾಜ್ಯ ಬಸ್ ನಿರ್ವಾಹಕರ ಸಂಘಟನೆ ತಿಳಿಸಿದೆ.

Advertisement
Advertisement

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಅಡಿಕೆ ಸಿಂಗಾರ ಒಣಗುತ್ತಿದೆಯೇ..? ನಿಮ್ಮ ತೋಟದ ಶತ್ರು ನೀವು ಬಳಸುವ ಬೇವಿನ ಎಣ್ಣೆಯೇ ಇರಬಹುದು…!
January 10, 2026
7:24 AM
by: ದ ರೂರಲ್ ಮಿರರ್.ಕಾಂ
ಕಳಪೆ ಅಡಿಕೆ ಪತ್ತೆ | 15.5 ಲಕ್ಷ ದಂಡ ವಿಧಿಸಿದ ನ್ಯಾಯಾಲಯ
January 10, 2026
7:08 AM
by: ದ ರೂರಲ್ ಮಿರರ್.ಕಾಂ
ತೆಂಗಿನಕಾಯಿಯಿಂದ Gen-Z ಫೇವರಿಟ್ ಫುಡ್‌…! ವೆಗನ್ ಕುಲ್ಫಿ ಮತ್ತು ಚಾಕೊಲೇಟ್ ಬಿಡುಗಡೆ
January 9, 2026
10:26 PM
by: ದ ರೂರಲ್ ಮಿರರ್.ಕಾಂ
ತೆಂಗು ರೈತರಿಗೆ ಹೊಸ ದಾರಿ | ಮೌಲ್ಯವರ್ಧನೆ ಮತ್ತು ಬಹುಬೆಳೆ ಪದ್ಧತಿಗೆ ಉತ್ತೇಜನ
January 9, 2026
10:16 PM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror