ಕೇರಳ ಮತ್ತು ಬೆಂಗಳೂರು ಮಧ್ಯೆ ಸಂಚರಿಸುವ ಖಾಸಗಿ ಬಸ್‌ಗಳ ಪ್ರಯಾಣ ದರವನ್ನು ಹೆಚ್ಚಿಸಲಾಗಿದೆ. ಬೇರೆ ಬೇರೆ ಕ್ಲಾಸ್‌ನ ದರದಲ್ಲಿ ಕನಿಷ್ಠ 150 ರಿಂದ 250 ರೂ. ವರೆಗೂ ಟಿಕೆಟ್ ದರವನ್ನು ಏರಿಕೆ ಮಾಡಲಾಗಿದೆ.
ಎರ್ನಾಕುಲಂ-ಬೆಂಗಳೂರು ಜನಪ್ರಿಯ ಹಾಗೂ ಹೆಚ್ಚು ದಟ್ಟಣೆಯ ರೂಟ್ ಆಗಿದ್ದು, ಈ ಮಾರ್ಗವಾಗಿ ಪ್ರಯಾಣಿಸುವ ಪ್ರಯಾಣಿಕರಿಗೆ ಬಸ್ ದರ ದುಬಾರಿಯಾಗಿದೆ. 1350 ರೂ. ಇದ್ದ ದರವನ್ನು ಈಗ 1,500 ರೂ.ಗೆ ಏರಿಕೆ ಮಾಡಲಾಗಿದೆ. ಕರ್ನಾಟಕ ಅಂತಾರಾಜ್ಯ ಬಸ್ ನಿರ್ವಾಹಕರ ಸಂಘಟನೆಯು ಈ ದರವನ್ನು ಹೆಚ್ಚಿಸಿದೆ. ಕೇರಳ ಸರ್ಕಾರವು, ಕೇರಳ ಹೊರತಾಗಿ ನೋಂದಣಿ ಮಾಡಿಕೊಂಡಿರುವ ವಾಹನಗಳ ಮೇಲೆ ವೆಹಿಕಲ್ ಟ್ಯಾಕ್ಸ್ ಪರಿಚಯಿಸಿದೆ. ಈ ತೆರಿಗೆ ನವೆಂಬರ್ 1ರಿಂದ ಜಾರಿಗೆ ಬಂದಿದೆ.
ಎರ್ನಾಕುಲಂ-ಬೆಂಗಳೂರು ರೂಟ್‌ನಲ್ಲಿ ಓಡಾಡುವ ಬಹುತೇಕ ಬಸ್‌ಗಳು ಕೇರಳದ ಹೊರಗೆ ನೋಂದಣಿಯಾದ ಬಸ್‌ಗಳಿವೆ. ಕೇರಳದಲ್ಲಿ ನೋಂದಣಿ ದರ ಹೆಚ್ಚಿರುವುದಕ್ಕೆ ಇದಕ್ಕೆ ಕಾರಣ. ಈ ತೆರಿಗೆ ಭಾರವನ್ನು ಖಾಸಗಿ ಬಸ್ ನಿರ್ವಾಹಕರು ಇದೀಗ ಪ್ರಯಾಣಿಕರಿಗೆ ವರ್ಗಾಯಿಸಿದ್ದಾರೆ. ಹಾಗಾಗಿ, ಬಸ್ ದರ ಹೆಚ್ಚಿಸಿದ್ದಾರೆ. ಈ ಹೊಸ ತೆರಿಗೆ ಜಾರಿಗೆ ಬಂದ ಹಿನ್ನೆಲೆ ಬಸ್ ನಿರ್ವಾಹಕರು ಪ್ರತಿ ತ್ರೈಮಾಸಿಕವಾಗಿ, ಪ್ರತಿ ಸೀಟಿಗೆ 4 ಸಾವಿರ ರೂ. ತೆರಿಗೆಯನ್ನು ನೀಡಬೇಕಾಗುತ್ತದೆ. ಅಂದರೆ, 36 ಸೀಟ್‌ಗಳಿರುವ ಬಸ್ ಕನಿಷ್ಠ 1.44 ಲಕ್ಷ ರೂ. ತೆರಿಗೆಯನ್ನು ಪಾವತಿಸಬೇಕು.
ಈ ಕಾರಣಕ್ಕಾಗಿ ಬಸ್‌ಗಳ ನಡುವಿನ ದರ ವ್ಯತ್ಯಾಸದಿಂದ ಪ್ರಯಾಣಿಕರಿಗೆ ಗೊಂದಲವಾಗಬಾರದು ಎಂಬ ಕಾರಣಕ್ಕೆ ಏಕರೂಪ ಬಸ್ ದರವನ್ನು ರೂಪಿಸಲಾಗಿದೆ ಎಂದು ಕರ್ನಾಟಕ ಅಂತರ್ ರಾಜ್ಯ ಬಸ್ ನಿರ್ವಾಹಕರ ಸಂಘಟನೆ ತಿಳಿಸಿದೆ.
ಕೃಷಿ ಭೂಮಿಯ ಲಭ್ಯತೆ ಕಡಿಮೆಯಾಗಿ ಸಂಕಷ್ಟದಲ್ಲಿರುವ ರೈತರಿಗಾಗಿ ಸರ್ಕಾರವು ಅರಣ್ಯ ಭೂಮಿಯನ್ನು ಕೃಷಿ…
ಯಾವುದೇ ಕಾಯಿಲೆಗಳಿಲ್ಲದೆ ಆರೋಗ್ಯವಂತರಾಗಿರಲು ಎಲ್ಲರೂ ಇಷ್ಟಪಡುತ್ತಾರೆ. ಒಂದು ವೇಳೆ ಆರೋಗ್ಯ ಕೆಟ್ಟರೆ ಜೀವನವೇ…
ಹೊಸ ರೇಷನ್ ಕಾರ್ಡ್ ಅನುಮೋದನೆ ಪ್ರಾರಂಭವಾಗಿದ್ದು 2026 ಮಾರ್ಚ್ ವರೆಗೆ ಅವಕಾಶ ಕರ್ನಾಟಕ…
ಟ್ಯಾಕ್ಸಿ, ಆಟೋ ಟ್ಯಾಕ್ಟರ್, ಗೂಡ್ಸ್ ವಾಹನದ ಡ್ರೈವರ್ ಆಗಿದ್ದರೂ ಸ್ವಂತ ವಾಹನವಿಲ್ಲ ಎಂಬ…
ಮಧ್ಯಪ್ರದೇಶ ಸರ್ಕಾರದಿಂದ ಅನುದಾನಿತ ಸಂಶೋಧನಾ ಉಪಕ್ರಮವು, ಸಾಂಪ್ರದಾಯಿಕ ಹಸು ಆಧಾರಿತ ಸಿದ್ಧತೆಗಳನ್ನು ಬಳಸಿಕೊಂಡು…
ಉಪಗ್ರಹ ದತ್ತಾಂಶ ಆಧಾರಿತ CREA ವಿಶ್ಲೇಷಣೆಯ ಪ್ರಕಾರ, ಭಾರತದ 4,041 ನಗರಗಳಲ್ಲಿ 1,787…