55 ಎಕ್ರೆಯಲ್ಲಿ 50 ಬಗೆಯ ಕೃಷಿ | ಗುತ್ತಿಗೆ ಪಡೆದು ಕೃಷಿ ಮಾಡಿದ ಮಹಿಳೆಗೆ “ಕೃಷಿ ತಿಲಕಂ” ಪ್ರಶಸ್ತಿ |

August 22, 2024
6:53 PM
ಬಿಂದು ಅವರು 55 ಎಕರೆ ಜಮೀನಿನಲ್ಲಿ 50 ಸಾಗುವಳಿ ಮಾಡಿದ್ದಾರೆ. ಎಕರೆಗಟ್ಟಲೆ ಭತ್ತದ ಕೃಷಿ, ನಂತರ ತರಕಾರಿ ಕೃಷಿ, ಅರಿಶಿಣ ಕೃಷಿ, ಶುಂಠಿ ಕೃಷಿ ಹೀಗೆ ವಿನೂತನ ಕಲ್ಪನೆಗಳನ್ನು ಕೃಷಿ ಕ್ಷೇತ್ರದಲ್ಲಿ ಅನುಷ್ಠಾನಗೊಳಿಸುತ್ತಿರುವ ಈ ರೈತ ಮಹಿಳೆಗೆ ಸ್ವಂತ ಮನೆ, 15 ಸೆಂಟ್ಸ್ ಜಮೀನು ಇದೆ.

55 ಎಕ್ರೆ ಜಮೀನಿನಲ್ಲಿ 50 ಬಗೆಯ ಕೃಷಿ ಮಾಡಿ ಗಮನ ಸೆಳೆದ ಮಹಿಳೆ ಬಿಂದು ಅವರು ಕೇರಳ ಸರ್ಕಾರದ ಕೃಷಿ ತಿಲಕಂ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. …..ಮುಂದೆ ಓದಿ….

Advertisement
Advertisement

ಕೇರಳ ಸರ್ಕಾರವು ಕೇರಳದ ಅತ್ಯುತ್ತಮ ರೈತ ಮಹಿಳೆಗಾಗಿ ‘ಕೃಷಿತಿಲಕಂ‘ ಪ್ರಶಸ್ತಿಯನ್ನು ನೀಡುತ್ತಿದೆ. ಕಣ್ಣೂರು ಜಿಲ್ಲೆಯ ಪಟ್ಟುವಂ ಪ್ರದೇಶದ ಹರಿತಾ ಮಹಿಳಾ ತಂಡದ ಸದಸ್ಯೆ ಕೆ ಬಿಂದು ಅವರು  ಸುಮಾರು 25 ವರ್ಷಗಳಿಂದ ಕೃಷಿಯಲ್ಲಿ ಸಕ್ರಿಯರಾಗಿದ್ದಾರೆ. ಕೇವಲ 15 ಸೆಂಟ್ಸ್‌ ಸ್ಥಳ ಹೊಂದಿರುವ ಬಿಂದು ಅವರು ಗುತ್ತಿಗೆ ಆಧಾರದಲ್ಲಿ ಜಾಗವನ್ನು ಪಡೆದುಕೊಂಡು ಕೃಷಿ ಮಾಡುತ್ತಿದ್ದಾರೆ. ಬೆಳೆ ಬೆಳೆಯುವುದರಲ್ಲಿಯೇ ಖುಷಿ ಕಾಣುವ ಅವರು ಹರಿತಾ ಜೆಎಲ್‌ಜಿ ತಂಡದ ಸದಸ್ಯೆಯೂ ಹೌದು.

Advertisement

ಬಿಂದು ಅವರು 55 ಎಕರೆ ಜಮೀನಿನಲ್ಲಿ 50 ಸಾಗುವಳಿ ಮಾಡಿದ್ದಾರೆ. ಎಕರೆಗಟ್ಟಲೆ ಭತ್ತದ ಕೃಷಿ, ನಂತರ ತರಕಾರಿ ಕೃಷಿ, ಅರಿಶಿಣ ಕೃಷಿ, ಶುಂಠಿ ಕೃಷಿ ಹೀಗೆ ವಿನೂತನ ಕಲ್ಪನೆಗಳನ್ನು ಕೃಷಿ ಕ್ಷೇತ್ರದಲ್ಲಿ ಅನುಷ್ಠಾನಗೊಳಿಸುತ್ತಿರುವ ಈ ರೈತ ಮಹಿಳೆಗೆ ಸ್ವಂತ ಮನೆ, 15 ಸೆಂಟ್ಸ್ ಜಮೀನು ಇದೆ.

ಬಿಂದು ಅವರು 26 ಎಕರೆ ಜಮೀನಿನಲ್ಲಿ ಭತ್ತ, ಹೂವು, ಅರಿಶಿನ, ಶುಂಠಿ, ತರಕಾರಿ, ಎಳ್ಳು, ಕಡಲೆ ಸೇರಿದಂತೆ ಹಲವು ಬೆಳೆಗಳನ್ನು ನಿರಂತರವಾಗಿ ಬೆಳೆಯುತ್ತಿದ್ದಾರೆ. ಉಳಿದ 25 ಎಕ್ರೆ ಜಾಗದಲ್ಲಿ ಇತರ ಬೆಳೆಯನ್ನು ಬೆಳೆಯುತ್ತಾರೆ.  ಅಷ್ಟೇ ಅಲ್ಲ ಬಿಂದು ಅವರು “ಕುಟುಂಬಶ್ರೀ” ಸದಸ್ಯರಿಗೆ ಕೃಷಿ ಯಂತ್ರೋಪಕರಣಗಳನ್ನು ನಿರ್ವಹಿಸಲು ತರಬೇತಿಯನ್ನೂ ನೀಡುತ್ತಾರೆ.

Advertisement

ಬಿಂದು ಅವರು ಕುಟುಂಬ ಶ್ರೀ ತಂಡವು ವಿಶೇಷವಾಗಿ ಆಯುರ್ವೇದದಲ್ಲಿ ಬಳಕೆ ಮಾಡುವ ವಸ್ತುಗಳು ಹಾಗೂ ಸೌಂದರ್ಯವರ್ಧಕ ಉತ್ಪನ್ನಗಳನ್ನು ತಯಾರಿಸುತ್ತದೆ. ವಾರ್ಷಿಕವಾಗಿ ಇವರ  ವಹಿವಾಟು 7 ಲಕ್ಷ ರೂಪಾಯಿಗಳಷ್ಟಿದೆ. ಗ್ರಾಮೀಣ ಭಾಗದಲ್ಲಿ ಈ ಸಾಧನೆ ಸಣ್ಣದೇನಲ್ಲ. ಬಿಂದು ಅವರು ಕೃಷಿಕ ಮಹಿಳೆಯಾಗಿ  ಹಲವಾರು ಪ್ರಶಸ್ತಿಗಳನ್ನು ಕೂಡಾ ಪಡೆದಿದ್ದಾರೆ.

Advertisement

ಪ್ರತೀ ದಿನ ಕೃಷಿಯಲ್ಲಿ ತೊಡಗಿಸಿಕೊಳ್ಳುವ ಬಿಂದು ಅವರ ಶ್ರಮಶಕ್ತಿ ಗೆದ್ದಿದೆ, ಎಲ್ಲರ ಸಹಕಾರವೂ ಇದೆ ಎನ್ನುವ ಬಿಂದು  ಅವರ ಇಚ್ಛಾಶಕ್ತಿಯೇ ಈ ಎಲ್ಲಾ ಸಾಧನೆಗೆ ಕಾರಣವಾಗಿದೆ.  ಬಿಂದು ಅವರ ಕೃಷಿ ಕಾರ್ಯಕ್ಕೆ ಸಹಾಯ ಮಾಡಲು ಪತಿ ಟಿ.ಮನೋಹರನ್ ಕೂಡ ಜೊತೆಗಿದ್ದಾರೆ.

ನಿಮ್ಮ ಅಭಿಪ್ರಾಯಗಳನ್ನು ಇಲ್ಲಿ ದಾಖಲಿಸಿ…

Advertisement

The Kerala Government is awarding the ‘ KARSHAKA THILAKAM ‘ award to the best woman farmer in Kerala. K Bindu, a member of the Haritha Women’s Team from the Pattuvam area of Kannur district, has been actively involved in agriculture for almost 25 years. Despite having only 15 cents of land, Bindu is cultivating the land on a lease basis. She is also a member of the Haritha JLG team and is passionate about growing crops. Her dedication and hard work are truly inspiring.

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಅಡಿಕೆ ಸಿಪ್ಪೆಯ ರಸದಿಂದ ಸೋಪು | ಸೋಪಿನಲ್ಲಿದೆ ಔಷಧೀಯ ಮೌಲ್ಯ | ಪೇಟೆಂಟ್‌ ಪಡೆದ ಪುತ್ತೂರಿನ ಸಂಸ್ಥೆ |
September 17, 2024
10:33 PM
by: ಮಹೇಶ್ ಪುಚ್ಚಪ್ಪಾಡಿ
ಕ್ಯಾಶ್ಯೂ ಫಾರ್ಮರ್ಸ್ ಟ್ರ್ಯಾಕಿಂಗ್ ಸಿಸ್ಟಮ್ | ರೈತರಿಗೆ ಇದು ಅನುಕೂಲ ಹೇಗೆ..?
September 17, 2024
12:38 PM
by: ದ ರೂರಲ್ ಮಿರರ್.ಕಾಂ
ಹವಾಮಾನ ವರದಿ | 17-09-2024 | ಕರಾವಳಿ ಜಿಲ್ಲೆಗಳಲ್ಲಿ ಬಿಸಿಲು-ಮಳೆ| ರಾಜ್ಯದ ಉಳಿದೆಡೆ ಮೋಡ-ಬಿಸಿಲು |
September 17, 2024
11:51 AM
by: ಸಾಯಿಶೇಖರ್ ಕರಿಕಳ
ಪಿಎಂ ಸೂರ್ಯಘರ್-ಉಚಿತ ವಿದ್ಯುತ್ ಯೋಜನೆ | ದಕ್ಷಿಣ ಕನ್ನಡದಲ್ಲೂ ಯಶಸ್ವಿಯಾಗಿ ಅನುಷ್ಟಾನ |
September 16, 2024
11:17 AM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror