ಕೇರಳ ಕೆಎಸ್‌ಆರ್‌ಟಿಸಿ ಪ್ರಯಾಣಿಕರ ಅನುಕೂಲಕ್ಕಾಗಿ ಹೊಸ ಹೆಜ್ಜೆ ಇಟ್ಟಿದ್ದು, ತಿರುವನಂತಪುರಂನಿಂದ ಎರ್ನಾಕುಳಂಗೆ ಎಂಡ್-ಟು-ಎಂಡ್ ವ್ಯವಸ್ಥೆ ಪ್ರಾರಂಭಿಸಲು ಸಿದ್ಧತೆ ನಡೆಸುತ್ತಿದೆ. ಈ ಜಾರಿಗೆ ತಂದ ಹೊಸ ವ್ಯವಸ್ಥೆಯಲ್ಲಿ ಪ್ರಯಾಣಿಕರು ಬಸ್ ಹೊರಡುವ ಅರ್ಧ ಗಂಟೆಯ ಮೊದಲು ಟಿಕೆಟ್ ಖರೀದಿಸಿ ಯಾವುದೇ ಆತಂಕವಿಲ್ಲದೆ ನೇರವಾಗಿ ತಾವು ತಲುಪಬೇಕಾದ ಸ್ಥಳ ತಲುಪಬಹುದಾಗಿದೆ.
Advertisement
ತಿರುವನಂತಪುರದಿಂದ ಬೆಳಗ್ಗೆ 5.10ಕ್ಕೆ ಹೊರಟು 9.40ಕ್ಕೆ ಎರ್ನಾಕುಳಂ ತಲುಪಲಿರುವ ಬಸ್ ಬಳಿಕ ಸಂಜೆ 5.20ಕ್ಕೆ ಎರ್ನಾಕುಳಂನಿಂದ ಹೊರಟು 9.50ಕ್ಕೆ ತಿರುವನಂತಪುರ ತಲುಪುವ ವ್ಯವಸ್ಥೆ ಮಾಡಲಾಗುತ್ತಿದೆ.
Advertisement
ಈ ಸೇವೆಗಾಗಿ ಹವಾನಿಯಂತ್ರಿತ ಬಸ್‌ಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಕೊಲ್ಲಂ ಅಯಾತ್ ಫೀಡರ್ ನಿಲ್ದಾಣ ಹಾಗೂ ಅಲಪ್ಪುಳ ಕೊಮ್ಮಡಿ ಫೀಡರ್ ನಿಲ್ದಾಣದಲ್ಲಿ ಪ್ರಯಾಣಿಕರನ್ನು ಕರೆದೊಯ್ಯಲು ಈ ಬಸ್‌ಗಳು ಒಂದು ನಿಮಿಷ ಅವಧಿಗೆ ನಿಲ್ಲುತ್ತವೆ. ಭಾನುವಾರದಿಂದ ಪ್ರಯಾಣಿಕರು ಆನ್‌ಲೈನ್‌ನಲ್ಲಿ ಟಿಕೆಟ್ ಬುಕ್ ಮಾಡಬಹುದು ಎಂದು ಸಂಸ್ಥೆಯ ಮೂಲಗಳು ತಿಳಿಸಿವೆ.
Advertisement
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel
Advertisement