ಕೇರಳದಲ್ಲಿ ಭರ್ಜರಿ ಮಳೆ | ಎರ್ನಾಕುಲಂನಲ್ಲಿ ನಿರಂತರ ಮಳೆ | ಜಲಾವೃತಗೊಂಡ ಕೆಲವು ಪ್ರದೇಶ | 24 ಗಂಟೆಗಳಲ್ಲಿ 200 ಮಿಮೀ ಮಳೆ..! |

May 24, 2024
8:26 PM

ಕೇರಳದ ಹಲವು ಕಡೆ ಕಳೆದ 24 ಗಂಟೆಯಿಂದ ಮಳೆಯಾಗುತ್ತಿದೆ. ಎರ್ನಾಕುಲಂನಲ್ಲಿ ನಿರಂತರ ಮಳೆಯ ಕಾರಣದಿಂದ ಹಲವು ಕಡೆ ಜಲಾವೃತವಾಗಿದೆ. ಕಳೆದ 24 ಗಂಟೆಗಳಲ್ಲಿ 200 ಮಿಮೀ ಮಳೆ ದಾಖಲಾಗಿದೆ, ಪರಿಹಾರ ಮತ್ತು ಪುನರ್ವಸತಿಗಾಗಿ ಸಚಿವರು ಕರೆ ನೀಡಿದ್ದಾರೆ. ಕೇರಳದಲ್ಲಿ ಮಳೆ ಸಂಬಂಧಿತ ಘಟನೆಗಳಿಂದ 11 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದು, ಪತ್ತನಂತಿಟ್ಟ, ಕೊಟ್ಟಾಯಂ ಮತ್ತು ಇಡುಕ್ಕಿ ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಘೋಷಿಸಲಾಗಿದೆ ಎಂದು ಸುದ್ದಿಸಂಸ್ಥೆ ಪಿಟಿಐ ವರದಿ ಮಾಡಿದೆ.

Advertisement
Advertisement

ಭಾರೀ ಮಳೆಯ ಕಾರಣದಿಂದ ಎರ್ನಾಕುಲಂ ಜಿಲ್ಲೆಯ ಹಲವು ಕಡೆ ಜಲಾವೃತಕ್ಕೆ ಕಾರಣವಾಯಿತು. ಕೇರಳ ವಿಪತ್ತು ನಿರ್ವಹಣಾ ಪ್ರಾಧಿಕಾರವು ತಿರುವನಂತಪುರಂ, ಕೊಲ್ಲಂ, ಪತ್ತನಂತಿಟ್ಟ, ಅಲಪ್ಪುಳ, ಕೊಟ್ಟಾಯಂ, ಇಡುಕ್ಕಿ, ಎರ್ನಾಕುಲಂ, ತ್ರಿಶೂರ್, ಪಾಲಕ್ಕಾಡ್ ಮತ್ತು ಮಲಪ್ಪುರಂ ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗುವ ಮುನ್ಸೂಚನೆಯನ್ನು ನೀಡಿದೆ. ಕೇರಳದ ಉಳಿದ ಜಿಲ್ಲೆಗಳಲ್ಲಿ ಲಘು ಮಳೆಯಾಗುವ ನಿರೀಕ್ಷೆಯಿದೆ.

Advertisement
ಮಳೆಯ ಕಾರಣದಿಂದ ಕೋಝಿಕ್ಕೋಡ್‌ ಜಿಲ್ಲೆಯ ಮುಕ್ಕಂನಲ್ಲಿ ಗಣಿಗಾರಿಕೆ ಪ್ರದೇಶದ ಬಳಿಯ ಮಹಿಳೆಯೊಬ್ಬರ ಮನೆಯ ಪರಿಸ್ಥಿತಿ – (ಮನೋರಮಾ ಚಿತ್ರ)

ಮಳೆಯ ಕಾರಣದಿಂದ ವಿವಿಧ ಕಡೆ ನೀರಿನಲ್ಲಿ ಮುಳುಗಿದ ಘಟನೆಗಳಲ್ಲಿ ಆರು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ, ಇಬ್ಬರು ನೀರು ತುಂಬಿದ ಕ್ವಾರಿಗಳಿಗೆ ಬಿದ್ದು, ಇಬ್ಬರು ಸಿಡಿಲು ಬಡಿದು ಮತ್ತು ಒಬ್ಬರು ಗೋಡೆ ಕುಸಿತದಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ. ಕೋಝಿಕ್ಕೋಡ್ ಜಿಲ್ಲೆಯ ಕುನ್ನಮಂಗಲಂನಲ್ಲಿ ಕಳೆದ 24 ಗಂಟೆಗಳಲ್ಲಿ 226 ಮಿಮೀ ಮಳೆಯಾಗಿದೆ ಎಂದು ವರದಿಯಾಗಿದೆ. ಕಳೆದ 24 ಗಂಟೆಗಳಲ್ಲಿ ಅಲಪ್ಪುಳ ಜಿಲ್ಲೆಯ ಚೆರ್ತಾಲದಲ್ಲಿ 215 ಮಿಮೀ, ಕೊಟ್ಟಾಯಂ ಜಿಲ್ಲೆಯ ಕುಮಾರಕೋಮ್ ಮತ್ತು ಕೋಝಿಕೋಡ್ ಜಿಲ್ಲೆಯ ಥಾಮರಸ್ಸೆರಿಯಲ್ಲಿ ಕ್ರಮವಾಗಿ 203 ಮಿಮೀ  ಮಳೆಯಾಗಿದೆ.

ಈ ನಡುವೆ ನೈರುತ್ಯ ಮಾನ್ಸೂನ್ ಮೇ 31 ರಂದು ಕೇರಳವನ್ನು ಅಪ್ಪಳಿಸುವ ಸಾಧ್ಯತೆಯಿದೆ ಎಂದು ಐಎಂಡಿ ಬುಧವಾರವೇ ತಿಳಿಸಿದೆ. ಆದರೆ ಚಂಡಮಾರುತದ ಕಾರಣದಿಂದ 4-5 ದಿನ ವಿಳಂಬವಾಗುವ ಸಾಧ್ಯತೆಯ ಬಗ್ಗೆಯೂ ಹೇಳಿದೆ.

Advertisement

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಪಂಚಗವ್ಯ ಚಿಕಿತ್ಸೆ… | ಏನಿದು ಪಂಚಗವ್ಯ…? | ಈ ಚಿಕಿತ್ಸೆ ಪರಿಣಾಮಕಾರಿ ಹೇಗೆ..?
June 15, 2024
10:59 PM
by: ಮುರಲೀಕೃಷ್ಣ ಕೆ ಜಿ
Karnataka Weather | 15-06-2024 | ಕೆಲವು ಕಡೆ ತುಂತುರು ಮಳೆ | ಜೂನ್ 21ರಿಂದ ಉತ್ತಮ ಮಳೆಯ ಮುನ್ಸೂಚನೆ |
June 15, 2024
4:08 PM
by: ಸಾಯಿಶೇಖರ್ ಕರಿಕಳ
ಕೇರಳದಲ್ಲಿ ಲಘು ಭೂಕಂಪ | ಬೆಳ್ಳಂಬೆಳಗ್ಗೆ ಭಯಭೀತಗೊಂಡು ಮನೆಯಿಂದ ಹೊರ ಬಂದ ಜನ |
June 15, 2024
1:25 PM
by: The Rural Mirror ಸುದ್ದಿಜಾಲ
ಕರಾವಳಿಯಲ್ಲಿ ಚುರುಕುಗೊಂಡ ಮುಂಗಾರು | ಉಡುಪಿಯ ಈ ಬೀಚ್‌ಗಳಿಗೆ ಪ್ರವೇಶ ನಿರ್ಬಂಧ..!
June 15, 2024
1:15 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror